ಪಠ್ಯೇತರ ಚಟುವಟಿಕೆಯಿಂದ ಆತ್ಮವಿಶ್ವಾಸ ಹೆಚ್ಚುತ್ತೆ

26

Get real time updates directly on you device, subscribe now.


ತುಮಕೂರು: ಪಠ್ಯೇತರ ಚಟುವಟಿಕೆಗಳು ಆತ್ಮವಿಶ್ವಾಸ ಬಲಗೊಳಿಸುವ ಮೂಲಕ ಒಬ್ಬರಲ್ಲಿರುವ ವಿಶೇಷ ಕಲಾಸಕ್ತಿಯನ್ನು ಜಗತ್ತಿಗೆ ಪರಿಚಯಿಸುತ್ತವೆ ಎಂದು ವಿವಿ ವಿಜ್ಞಾನಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ.ಅರುಣ್ ಕುಮಾರ್.ಡಿ.ಬಿ. ಹೇಳಿದರು.
ವಿಶ್ವ ವಿದ್ಯಾಲಯ ವಿಜ್ಞಾನ ಕಾಲೇಜಿನ ವತಿಯಿಂದ ಹಮ್ಮಿಕೊಂಡಿರುವ 2024ನೇ ಸಾಲಿನ ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿ, ಕಲೆ ಬದುಕಿನ ವಿವಿಧ ಬಣ್ಣಗಳನ್ನು ಅನಾವರಣ ಗೊಳಿಸುತ್ತದೆ, ಓದಿಗಷ್ಟೇ ಸೀಮಿತವಾಗದೆ, ನಮ್ಮಲ್ಲಿರುವ ಅನನ್ಯ ಕಲಾಸಕ್ತಿ ಅಭಿವ್ಯಕ್ತಗೊಳಿಸಬೇಕು ಎಂದರು.

ಮೊದಲ ದಿನ ಸ್ವರಚಿತ ಕವನ ವಾಚನ, ಸ್ಪಾಟ್ ಫೋಟೋಗ್ರಫಿ, ಕ್ಯಾಂಪಸ್ ಫೋಟೋಗ್ರಫಿ, ಸ್ಪಾಟ್ ಪೇಂಟಿಂಗ್, ಮೆಹಂದಿ, ಬೆಂಕಿ ರಹಿತ ಅಡುಗೆ- ಸ್ಪರ್ಧೆ ಆಯೋಜಿಸಲಾಗಿತ್ತು.
ಎರಡನೆಯ ಹಾಗೂ ಮೂರನೆಯ ದಿನ ಹವಾಮಾನ ಬದಲಾವಣೆಯ ಸವಾಲಿಗೆ ಸ್ಥಳೀಯ ಮಟ್ಟದ ಪರಿಹಾರಗಳ ಕುರಿತು ಪ್ರಬಂಧ ಸ್ಪರ್ಧೆ, ಆಶು ಭಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆ, ವಿಜ್ಞಾನ ರಸ ಪ್ರಶ್ನೆ, ಏಕಪಾತ್ರಾಭಿನಯ, ಕಿರುನಾಟಕ ಹಾಗೂ ಗಾಯನ ಸ್ಪರ್ಧೆ ನಡೆಯಲಿವೆ.
ವಿವಿ ವಿಜ್ಞಾನ ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳ ಘಟಕದ ಸಂಯೋಜಕ ಡಾ.ವೆಂಕಟರೆಡ್ಡಿ ರಾಮರೆಡ್ಡಿ, ಸದಸ್ಯಡಾ.ನರೇಂದ್ರ.ಎನ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ಸಂಯೋಜಕ ಡಾ.ರಾಮಕೃಷ್ಣ.ಜಿ, ಡಾ.ನಾಗಭೂಷಣ ಬಗ್ಗನಡು ಇದ್ದರು.

Get real time updates directly on you device, subscribe now.

Comments are closed.

error: Content is protected !!