ಮಧುಗಿರಿ: ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಆರಂಭ ವಿಭಿನ್ನ ರೀತಿಯಲ್ಲಿ ಕಸಬಾ ವ್ಯಾಪ್ತಿಯ ಬಸವನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಪೋಷಕರು, ಶಿಕ್ಷಕರು ಹಾಗೂ ಗ್ರಾಮಸ್ಥರು ಒಗ್ಗೂಡಿ ಸಂಭ್ರಮಿಸಿದರು.
ಶಾಲಾ ಆರಂಭಕ್ಕೂ ಮುನ್ನ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಗ್ರಾಮಸ್ಥರು ಮನೆ ಮನೆಗೆ ತೆರಳಿ ವಿದ್ಯಾರ್ಥಿಗಳನ್ನು ಶಾಲೆಗೆ ಪೂರ್ಣ ಕುಂಭ ಸ್ವಾಗತ ಕೋರಿ, ಎತ್ತಿನ ಗಾಡಿಯಲ್ಲಿ ಕುಳ್ಳರಿಸಿ ಮೆರವಣಿಯ ಮೂಲಕ ಶಾಲೆಗೆ ಕರೆ ತಂದರು.
ಶಾಲೆಯ ಪ್ರವೇಶದ ದ್ವಾರದಲ್ಲಿ ದಾಖಲಾತಿ ಆಂದೋಲನಕ್ಕೆ ಪೋಷಕರ ಸೆಲ್ಫಿ ಪಾಯಿಂಟ್ ಅತ್ಯಾಕರ್ಷಣಿಯವಾಗಿತ್ತು, ಬೇಸಿಗೆ ರಜೆಯಲ್ಲಿ ಈ ಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ಬೇಸಿಗೆ ಶಿಬಿರ ಆಯೋಜಿಸಿದ್ದರು, ಬೇಸಿಗೆ ರಜೆ ಮುಗಿದು ಶಾಲೆಗೆ ಮರಳಿದ ಮಕ್ಕಳು ಅತ್ಯಂತ ಸಂತಸದಿಂದ ಶಾಲೆ ಪ್ರವೇಶಿಸಿದರು.
ಶಾಲೆ ಪ್ರವೇಶಿಸುತ್ತಿದ್ದಂತೆ ವಿಶೇಷ ಅಲಂಕಾರ ಮಾಡಿದ್ದ ಶಾರದಾ ದೇವಿಯ ವಿಗ್ರಹಕ್ಕೆ ವಿದ್ಯಾರ್ಥಿಗಳು ನಮಸ್ಕರಿಸಿ ಸಂಸ್ಕಾರ ಮೆರೆದರು.
ಶಾಲೆ ಬಾಳೆ ದಿಂಡು, ತಳಿರು ತೋರಣದಿಂದ ಕಂಗೊಳಿಸುತ್ತಿತ್ತು, ಪ್ರತಿ ಬಾಗಿಲಿಗೆ ಹಸಿರು ತೋರಣ ಕಟ್ಟಲಾಗಿತ್ತು, ವಿಶೇಷವಾ ಮಧ್ಯಾಹ್ನಕ್ಕೆ ಒಬ್ಬಟ್ಟಿನ ಊಟ ತಯಾರಿಸಲಾಗಿತ್ತು.
ಶಿಕ್ಷಣಾಧಿಕಾರಿ ಶಾಂತಲಾ, ಡಯಟ್ ನ ಪ್ರಾಂಶುಪಾಲ ಗಂಗಾಧರ್, ಚಿತ್ತಯ್ಯ, ಕಾಟಲಿಂಗಪ್ಪ, ಬಿಆರ್ ಪಿ ನೇತ್ರಾವತಿ, ಅಡವೀಶ್, ಶಾಂತಕುಮಾರ್, ಎಸ್ ಡಿಎಂಸಿ ಅಧ್ಯಕ್ಷ ಕಾಂತರಾಜು, ಹಳೆ ವಿದ್ಯಾರ್ಥಿಗಳ ಸಂಘದ ಶಿವಲಿಂಗಪ್ಪ, ಮಂಜುನಾಥ್, ಗ್ರಾಮಸ್ಥರಾದ ಹನುಮಂತರಾಯಪ್ಪ, ಶಿಕ್ಷಕ ಎಸ್.ವಿ.ರಮೇಶ್ ಇತರರು ಇದ್ದರು.
Comments are closed.