ಕುಣಿಗಲ್: ತಾಲೂಕಿನ ಅಮೃತೂರು ಹಾಗೂ ಹುಲಿಯೂರು ದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಹುಲಿಯೂರುದುರ್ಗ ಹೋಬಳಿಯ ದೊಡ್ಡ ಹುಲಿಕಟ್ಟೆ ಗ್ರಾಮದ ಅವಿನಾಶ್ (28) ರೇಷ್ಮೆ ಹುಳು ಮನೆ ಸ್ವಚ್ಛಗೊಳಿಸುವಾಗ ವಿದ್ಯುತ್ ಆಘಾತಕ್ಕೆ ಸಿಲುಕಿ ಗಾಯಗೊಂಡರು, ಈತನನ್ನು ಚಿಕಿತ್ಸೆಗಾಗಿ ಸ್ನೇಹಿತರಾದ ನಿಂಗರಾಜು ಮತ್ತು ಕಾರ್ತಿಕ್ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರವಾದ ಚೌಡನಕುಪ್ಪೆ ಆರೋಗ ಕೇಂದ್ರಕ್ಕೆ ಕರೆತಂದರು, ಆರೋಗ್ಯ ಕೇಂದ್ರದಲ್ಲಿ ವೈದ್ಯರು, ದಾದಿಯರು ಇಲ್ಲದೆ ಡಿ ಗ್ರೂಪ್ ನೌಕರರೊಬ್ಬನೇ ಇದ್ದು ಚಿಕಿತ್ಸೆ ನೀಡಲಾಗದು ಎಂದು ಕೈ ಚೆಲ್ಲಿದ, ಹಿನ್ನೆಲೆಯಲ್ಲಿ ನೆರೆ ಹೊರೆಯವರ ಸಹಕಾರ ಪಡೆದು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ಕಾರಿನಲ್ಲಿ ಕರೆತರುವಾಗ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ. ಅವಘಡ ಸಂಭವಿಸಿದಾಗ ತುರ್ತು ವಾಹನಕ್ಕೆ ಕರೆ ಮಾಡಿದರೂ ವಾಹನ ಸ್ಥಳಕ್ಕೆ ಆಗಮಿಸದೆ ಇರುವ ಬಗ್ಗೆ ಹಾಗೂ ಚೌಡನಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಮರ್ಪಕ ಸಿಬ್ಬಂದಿ ಇಲ್ಲದಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಗಾಯಾಳುವಿಗೆ ಪ್ರಾಥಮಿಕ ಚಿಕಿತ್ಸೆಯ ಸಿಕ್ಕಿದ್ದಲ್ಲಿ ಗುಣಮುಖರಾಗಿ ಒಂದು ಜೀವ ಉಳಿಯುತ್ತಿತ್ತು, ಆದರೆ ಆರೋಗ್ಯ ಕೇಂದ್ರದ ಸಿಬ್ಬಂದಿಯ ನಿರ್ಲಕ್ಷದಿಂದ ಒಂದು ಜೀವ ಹೋಗಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಘಟನೆ ಸಂಬಂಧ ಹುಲಿಯೂರು ದುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಘಟನೆಯಲ್ಲಿ ಅಮೃತೂರು ಪೊಲೀಸ್ ಠಾಣ ವ್ಯಾಪ್ತಿಯ ತುರುವೆಕೆರೆ ಗ್ರಾಮದಲ್ಲಿ ದನ ಮೇಯಿಸಲು ಹೋಗಿದ್ದ ವ್ಯಕ್ತಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ, ಮೃತನನ್ನು ಮನವಳಯ್ಯಾ ನಾಗರಾಜ್ (45) ಎಂದು ಗುರುತಿಸಲಾಗಿದೆ, ಘಟನೆ ಸಂಭಂದ ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Get real time updates directly on you device, subscribe now.
Prev Post
Comments are closed.