ಕುಣಿಗಲ್: ಊರ ಹಬ್ಬ ಆಚರಣೆ ವಿಷಯವಾಗಿ ಎರಡು ವರ್ಗಗಳ ನಡುವೆ ಗೊಂದಲ ಸೃಷ್ಟಿಯಾಗಿ ಸವರ್ಣಿಯರು, ದಲಿತರಿಗೆ ಬಹಿಷ್ಕಾರ ಹಾಕಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ಎಡೆಯೂರು ಹೋಬಳಿ ಚಿಕ್ಕಮಧುರೆ ಕಾಲೋನಿಯ ದಲಿತರು ಕಳೆದ ಶುಕ್ರವಾರ ನಡೆದ ಊರುಹಬ್ಬದ ಅಚರಣೆ ವೇಳೆ, ಪೂಜೆಗೆ ಹೋದಾಗ ಗ್ರಾಮದ ಕೆಲ ಸವರ್ಣೀಯರು ತಗಾದೆ ತೆಗೆದು ಪೂಜೆ ನೆರವೇರಿಸದಂತೆ ಅಡ್ಡಿಪಡಿಸಿದರು ಎನ್ನಲಾಗಿದೆ. ಇದಕ್ಕೆ ಕಾರಣ ಕೇಳಿದಾಗ ಮೊದಲು ಊರುಹಬ್ಬ ಇದ್ದಾಗ ದಲಿತರು ಸಾರುಹಾಕಿ ಬರುತ್ತಿದ್ದು ಈಗ ಸಾರುಹಾಕುತ್ತಿಲ್ಲ ಎಂದು ಆರೋಪಿಸಿ ಪೂಜೆಗೆ ಅಡ್ಡಪಡಿಸಿದ್ದರು. ಇದನ್ನು ಪ್ರಶ್ನಿಸಿದ ಕಾರಣ ಪೂಜೆಗೆ ಕೊಂಡೊಯ್ದಿದ್ದ ಪೂಜಾಸಾಮಾಗ್ರಿಗಳನ್ನು ಎಸೆದರು ಎನ್ನಲಾಗಿದೆ. ಗ್ರಾಮದ ಸಮೀಪದ ಹೊಳೆಯಲ್ಲಿ ಕಾಲೋನಿಯ ಮಹಿಳೆಯರು ಬಟ್ಟೆ ಹೊಗೆಯಲು ಹೋದರೆ ನಿಂದಿಸುವುದು, ಜಮೀನುಗಳಿಗೆ ಹೋದರೆ ನಮ್ಮ ತಾತಾ, ಮುತ್ತಾತ್ತಂದಿರ ಜಮೀನು ಬರಬೇಡಿ ಎಂದು ತಾಕೀತು ಮಾಡಲು ಅರಂಭಿಸಿದ್ದರಿಂದ, ಘಟನೆಗೆ ಸಂಬಂಧಿಸಿದಂತೆ ಶಂಕರಪ್ಪ ಸವರ್ಣಿಯರಾದ ದೊಡ್ಡೆಗೌಡ ಇತರರ ಮೇಲೆ ದೂರು ನೀಡಿದ್ದರಿಂದ ಅಮೃತೂರು ಪೊಲೀಸರು ಸ್ಥಳಕ್ಕಾಗಮಿಸಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ತಾರತಮ್ಯ ಮಾಡದಂತೆ ಎಚ್ಚರಿಕೆ ನೀಡಿ ಹೋಗಿದ್ದರು.
ಪೊಲೀಸರು ಬುದ್ದಿ ಹೇಳಿ ಹೋದಮೇಲೆ, ಸವರ್ಣಿಯರು ದಲಿತರನ್ನು ಯಾವುದೇ ಕೆಲಸಕ್ಕೆ ಕರೆಯುವುದಿಲ್ಲ, ಶುಭಾ ಕಾರ್ಯಕ್ಕೂ ಕರೆಯದೆ ಬಹಿಷ್ಕಾರ ಹಾಕಿ ತೊಂದರೆ ನೀಡುತ್ತಿದ್ದಾರೆ ಎಂದು ಶಂಕರಪ್ಪ ಆರೋಪಿಸಿದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕಾಳಮ್ಮ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Get real time updates directly on you device, subscribe now.
Prev Post
Comments are closed.