ಮಧುಗಿರಿ: ಸಾಮಾಜಿಕ ಜಾಲತಾಣ ಹಾಗೂ ಎಕ್ಸಿಟ್ ಪೋಲ್ ಸಮೀಕ್ಷೆಗಳ ವರದಿಯಂತೆ ಲೋಕಸಭೆಯ ಚುನಾವಣೆ ಭವಿಷ್ಯ ಸುಳ್ಳಾಗಲಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಲಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಪಟ್ಟಣದ ಆಗ್ನೇಯ ಶಿಕ್ಷಕರ ಕ್ಷೇತದ ಮತಗಟ್ಟೆಗೆ ಆಗಮಿಸಿ ನಡೆಯುತ್ತಿರುವ ಚುನಾವಣೆಯ ಬಗ್ಗೆ ಮಾಹಿತಿ ಪಡೆದು ಕೊಂಡು ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ನಮ್ಮ ಪಕ್ಷದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರ ಗೆಲುವಿನಲ್ಲಿ ಯಾವುದೇ ಅನುಮಾನ ಗಳಿಲ್ಲವಾಗಿದ್ದು ಈ ಚುನಾವಣೆಯು ಸಾರ್ವತ್ರಿಕ ಚುನಾವಣೆ ನಡೆದಂತೆ ನಡೆದಿದೆ, ಶಿಕ್ಷಕರನ್ನು ಒಂದು ಪಕ್ಷಕ್ಕೆ ಸೀಮಿತಗೊಳಿಸಬಾರದು, ಅವರು ತಮ್ಮ ಸಮಸ್ಯೆ ಬಗೆಹರಿಸುವ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ, ಶಿಕ್ಷಕರು ಮತದಾನದಲ್ಲಿ ಹುಮ್ಮಸ್ಸಿನಿಂದ ಭಾಗವಹಿಸಿದ್ದು ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನ ವಾಗಿದೆ, ಶಿಕ್ಷಕರು ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದ್ದು ಅವರ ಸೇವೆಗೆ ನಮ್ಮ ಪಕ್ಷವು ಸಕರಾತ್ಮಕವಾಗಿ ಸ್ಪಂದಿಸಲಿದೆ ಎಂದರು.
ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಮಾತನಾಡಿ, ಕಳೆದ ಎಂಟು ತಿಂಗಳಿನಿಂದ ಮತದಾರರ ಜತೆಯಲ್ಲಿ ನಾನಿದ್ದು ಅವರ ಆಗು ಹೋಗುಗಳನ್ನು ಬಲ್ಲವನಾಗಿದ್ದೇನೆ, ಈ ಚುನಾವಣೆಯಲ್ಲಿ ಜಿಲ್ಲೆಯ ಸಚಿವರು, ಶಾಸಕರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನನ್ನನ್ನು ಬೆಂಬಲಿಸಿದ್ದಾರೆ, ಫ್ರೌಡಶಾಲೆಗಳ ಶಿಕ್ಷಕರು, ಅನುದಾನಿತ ಹಾಗೂ ಖಾಸಗಿ ಶಾಲೆಗಳ ಶಿಕ್ಷಕರು ಓಟ್ ಫಾರ್ ಓಪಿಎಸ್ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಳನ್ನು ಬೆಂಬಲಿಸಿದ್ದಾರೆ ಎಂದರು.
ಮುಖಂಡರಾದ ಎಂ.ಎಸ್. ಮಲ್ಲಿಕಾರ್ಜುನಯ್ಯ, ಆದಿನಾರಾಯಣ ರೆಡ್ಡಿ , ಗೋಪಾಲಯ್ಯ, ಎಂ.ಎಸ್.ಶಂಕರನಾರಾಯಣ, ಪಿ.ಸಿ.ಕೃಷ್ಣ ರೆಡ್ಡಿ, ಬಗರ್ ಹುಕ್ಕುಂ ಸಮಿತಿ ಸದಸ್ಯ ಸೊಸೈಟಿ ರಾಮಣ್ಣ, ಆಲೀಂ, ಎಂ.ಜಿ.ಮಂಜುನಾಥ್, ಪ್ರೆಸ್ ಕರಿಯಣ್ಣ, ಅಂಬರೀಶ್ ಇತರರು ಇದ್ದರು.
Comments are closed.