ಮನೆಗೆ ನುಗ್ಗಿ ಲಕ್ಷಾಂತರ ನಗದು, ಚಿನ್ನಾಭರಣ ಕಳ್ಳತನ

29

Get real time updates directly on you device, subscribe now.


ತುಮಕೂರು: ನಗರದ ಅಮರಜ್ಯೋತಿ ನಗರದಲ್ಲಿ ವಾಸವಿರುವ ಕೆ.ಎಲ್.ಸುರೇಶ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದ್ದು, ಕಳ್ಳರು ಲಕ್ಷಾಂತರ ರೂಪಾಯಿ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಕೆ.ಎಲ್.ಸುರೇಶ್ ಅವರು ತಮ್ಮ ಕುಟುಂಬದೊಂದಿಗೆ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನಲ್ಲಿರುವ ತಮ್ಮ ಮನೆ ದೇವರ ದೇವಸ್ಥಾನಕ್ಕೆ ಜೂನ್ ರಂದು ತೆರಳಿದ್ದರು, ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿ ಕಳ್ಳರು ಮನೆಯ ಮುಖ್ಯ ಬಾಗಿಲಿನ ಪಕ್ಕದ ಕಿಟಕಿಯ ಕಬ್ಬಿಣದ ಕಂಬಿಗಳನ್ನು ಕತ್ತರಿಸಿ ಮನೆಗೆ ನುಗ್ಗಿದ್ದಾರೆ, ಊರಿಂದ ಮನೆಗೆ ಬಂದು ನೋಡಿದಾಗ ಮನೆಯ ಬೆಡ್ ರೂಂ ನಲ್ಲಿ ವಾಲ್ ಟ್ರೂಪ್ ಗಳಲ್ಲಿ ಇಟ್ಟಿದ್ದ 12 ಲಕ್ಷ ರೂ. ನಗದು, 140 ಗ್ರಾಂ ಚಿನ್ನದ ಸರ, 20 ಜೊತೆ ಚಿನ್ನದ ಓಲೆ, 40 ಗ್ರಾಂನ ಚಿನ್ನದ ಚೌಕರ್, 25 ಗ್ರಾಂ ಚಿನ್ನದ ಚೈನ್, 20 ಗ್ರಾಂ ತೂಕದ ಬ್ರಾಸ್ ಲೈಟ್, 20 ಗ್ರಾಂ ತೂಕದ ಒಂದು ಮುತ್ತಿನ ಸರ, 3 ಚಿನ್ನದ ಉಂಗುರ, 2 ಡೈಮಂಡ್ ಉಂಗುರ, 8 ಗ್ರಾಂನ ಕೈ ಚೈನ್, 60 ಗ್ರಾಂನ ಚಿನ್ನದ ಹಾರ, 10 ಗ್ರಾಂ ಕೊರಳ ಚೈನ್, 70 ಗ್ರಾಂನ ಚಿನ್ನದ ಲಾಂಗ್ ಸರ, 60 ಗ್ರಾಂನ ಮಾಂಗ ಸರ ಸೇರಿ ಸುಮಾರು ಲ್ಯ700 ಗ್ರಾಂ ಚಿನ್ನದ ಒಡವೆ ಕದ್ದೊಯ್ದಿದ್ದು, ಒದರ ಒಟ್ಟು ಮೌಲ್ಯ 42 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಇದಲ್ಲದೆ 600 ಗ್ರಾಂನ 2 ಬೆಳ್ಳಿ ತಟ್ಟೆ, 450 ಗ್ರಾಂನ 4 ಬೆಳ್ಳಿ ದೀಪಾಲೆ ಕಂಬ ಸೇರಿದಂತೆ 4 ಕೆಜಿ 500 ಗ್ರಾಂನ ವಿವಿಧ ಬೆಳ್ಳಿ ವಸ್ತುಗಳನ್ನು ಕೊದ್ದೊಯ್ದಿದ್ದಾರೆ, ನಗದು ಸೇರಿ ಚಿನ್ನ, ಬೆಳ್ಳಿ ವಸ್ತುಗಳ ಬೆಲೆ 5674000 ರೂ. ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ಮನೆ ಮಾಲೀಕ ಸುರೇಶ್ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಆದಷ್ಟು ಬೇಗ ಕಳ್ಳರನ್ನು ಪತ್ತೆ ಹಚ್ಚಿ ಒಡವೆ ಮತ್ತು ನಗದು ಹಣ ದೊಕಿಸಿಕೊಡುವಂತೆ ಪೊಲೀಸರಲ್ಲಿ ಸುರೇಶ್ ಆಗ್ರಹಿಸಿದ್ದು, ಇಂತಹ ಕಳ್ಳತನ ಕೃತ್ಯಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!