ಕುಣಿಗಲ್: ಅಧಿಕಾರ ಮದದಿಂದ ಜನರೂ ಸೇರಿದಂತೆ ಎಲ್ಲರನ್ನು ಬೆದರಿಸಿ, ಯಾವುದೆ ಅಭಿವೃದ್ಧಿ ಕೆಲಸ ಮಾಡದೆ, ಕೇವಲ ಹಣದಿಂದ ಎಲ್ಲರನ್ನು ಕೊಂಡುಕೊಳ್ಳ ಬಲ್ಲೆ ಎಂದು ಬೀಗುತ್ತಿದ್ದ ಕಾಂಗ್ರೆಸ್ ನ ಸಂಸದ ಡಿ.ಕೆ.ಸುರೇಶ್ ಅವರಿಗೆ ತಾಲೂಕಿನ ಮತದಾರರು ಅವರನ್ನು ತಿರಸ್ಕರಿಸುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ ಎಂದು ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಹೇಳಿದರು.
ಬುಧವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಜೆಡಿಎಸ್ ಮುಖಂಡರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಮೈತ್ರಿ ಅಭ್ಯರ್ಥಿಯಾದ ಡಾ.ಮಂಜುನಾಥ್ ಗೆಲುವಿಗೆ ಎರಡೂ ಪಕ್ಷದ ಕಾರ್ಯಕರ್ತರ ಶ್ರಮದ ಫಲವಾಗಿ ಉತ್ತಮ ಮತ ಬಂದಿದೆ, ಪಟ್ಟಣ ಸೇರಿದಂತೆ ಎಲ್ಲಾ ಹೋಬಳಿಗಳಲ್ಲೂ ಮೈತ್ರಿ ಅಭ್ಯರ್ಥಿ ಲೀಡ್ ಆಗಿದ್ದಾರೆ, ನೀರಾವರಿ ವಿಷಯದಲ್ಲಿ ತಾಲೂಕಿಗೆ ಅನ್ಯಾಯ ಮಾಡಿರುವ ಮೂರು ಬಾರಿ ಸಂಸದರಾಗಿದ್ದ ಡಿ.ಕೆ.ಸುರೇಶ್ ಯಾವುದೆ ಅಭಿವೃದ್ಧಿ ಕೆಲಸ ಮಾಡಿಲ್ಲ, ಕೇಂದ್ರದ ಹಲವಾರು ಯೋಜನೆ ಇದ್ದರೂ ಜನತೆಗೆ ತಲುಪಿಸುವಲ್ಲಿ ವಿಫಲರಾದರು, ಕಾಂಗ್ರೆಸ್ ನ ಸಂಸದ, ಶಾಸಕ ಇಬ್ಬರೂ ಇದ್ದರೂ ಹೇಮಾವತಿ ಮೂಲ ಯೋಜನೆಯಂತೆ ತಾಲೂಕಿನ ಹುಲಿಯೂರು ದುರ್ಗ ಹೋಬಳಿಗೆ ಹೇಮೆ ನೀರು ಹರಿಸುವ ನಾಲಾ ಕಾಮಗಾರಿ ಗವಿಮಠದ ಬಳಿ ಹತ್ತು ವರ್ಷದಿಂದ ನಿಂತಲ್ಲೆ ನಿಂತಿದೆ ನಾಲಾ ಕಾಮಗಾರಿ ಮಾಡಿಲ್ಲ, ತಾಲೂಕಿನ ಜನರನ್ನು ನೀರಾವರಿ ಯೋಜನೆ ಮೂಲಕ ವಂಚಿಸಿದ್ದೆ ಇವರ ಸಾಧನೆ ಲಿಂಕ್ ಕೆನಾಲ್ ಕಾಮಗಾರಿ ಅನುಷ್ಠಾನದ ನಿಟ್ಟಿನಲ್ಲಿ ತಾಲೂಕಿನ ಹಿರಿಯ ರಾಜಕಾರಣಿ ಮಾಜಿ ಸಚಿವ ಡಿ.ನಾಗರಾಜಯ್ಯ ಸೇರಿದಂತೆ ಯಾವುದೇ ಪಕ್ಷದವರೊಂದಿಗೆ ಚರ್ಚೆ ನಡೆಸದೆ ಏಕಾಏಕಿ ತಾಲೂಕಿನ ಹೆಸರಲ್ಲಿ ಬೇರೆಡೆ ನೀರು ಹರಿಸಲು ಮುಂದಾಗಿರುವುದು ಖಂಡನೀಯ, ಲಿಂಕ್ ಕೆನಾಲ್ ಯೋಜನೆ ಬಗ್ಗೆ ನಾವು ಪರಿಶೀಲಿಸಿದ್ದು, ಈ ಬಗ್ಗೆ ಶಾಸಕರು ಚರ್ಚೆ ನಡೆಸಿ ಮನವರಿಕೆ ಮಾಡಿಕೊಟ್ಟಲ್ಲಿ ನಾವು ಬೆಂಬಲಿಸುವ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್ ಮಾತನಾಡಿ, ಪಟ್ಟಣದ ಕುದುರೆ ಫಾರಂ ಮೇಲೆ ಮಾಜಿ ಸಂಸದರು ಕಣ್ಣು ಹಾಕಿದ್ದಲ್ಲದೆ, ತಾಲೂಕಿನಲ್ಲಿ ಕಲ್ಲು ಗಣಿಗಾರಿಕೆ ಮನಬಂದಂತೆ ಮಾಡುವ ಮೂಲಕ ದಬ್ಬಾಳಿಕೆ ರಾಜಕಾರಣ ಮಾಡಲು ಹೊರಟಿದ್ದಕ್ಕೆ ತಾಲೂಕಿನ ಮತದಾರರು ತಕ್ಕ ಉತ್ತರ ನೀಡಿದ್ದಾರೆ, ಇದನ್ನು ಅರಿತು ತಾಲೂಕಿನ ಶಾಸಕರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು, ಕೇಂದ್ರದಿಂದ ಹಲವಾರು ಯೋಜನೆ ಸೇರಿದಂತೆ ಶಾಶ್ವತ ಕಾಮಗಾರಿ ಅನುಷ್ಠಾನ ನಿಟ್ಟಿನಲ್ಲಿ ನೂತನ ಸಂಸದ ಡಾ.ಮಂಜುನಾಥ ಅವರೊಂದಿಗೆ ಚರ್ಚಿಸಿದ್ದು ಮುಂದಿನ ದಿನಗಳಲ್ಲಿ ನೂತನ ಸಂಸದರು ತಾಲೂಕಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪೂರಕವಾಗಿ ಸ್ಪಂದಿಸಲಿದ್ದಾರೆ ಎಂದರು.
ಮುಖಂಡರಾದ ರಂಗಸ್ವಾಮಿ, ರಮೇಶ, ಹರೀಶ್, ದೇವರಾಜ, ಸುರೇಶ, ಗೋಪಿ, ಕೃಷ್ಣೆಗೌಡ, ಮಂಜುನಾಥ, ಶ್ರೀನಿವಾಸ, ಪ್ರಕಾಶ, ಜಗದೀಶ್ ಇತರರು ಇದ್ದರು.
Comments are closed.