ಸ್ಟೆಲ್ಲಾ ಮೆರೀಸ್ ಶಾಲೆಯಿಂದ ವಿಶೇಷ ಪರಿಸರ ದಿನ

31

Get real time updates directly on you device, subscribe now.


ಕುಣಿಗಲ್: ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಪಟ್ಟಣದ ಸ್ಟೆಲ್ಲಾ ಮೆರೀಸ್ ಆಂಗ್ಲ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿನೂತನ ವಾಗಿ ಆಚರಿಸಿ, ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಪರಸರ ಸಂರಕ್ಷಣೆ ಬಗ್ಗೆ ಬೀದಿ ನಾಟಕದ ಮೂಲಕ ಅರಿವು ಮೂಡಿಸಿ, ವಿವಿಧ ಜಾತಿಯ ಸಸಿ ವಿತರಿಸಿದರು.

ಬುಧವಾರ ಬೆಳಗ್ಗೆ ಶಾಲೆಯಿಂದ ಪಟ್ಟಣದ ಮುಖ್ಯರಸ್ತೆಯಲ್ಲಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಬಗ್ಗೆ ಫಲಕಗಳನ್ನು ಹಿಡಿದು ಘೋಷಣೆ ಕೂಗುವ ಮೂಲಕ ಜಾಗೃತಿ ಮೂಡಿಸಿದರು, ಪಟ್ಟಣದ ಹುಚ್ಚಮಾಸ್ತಿ ಗೌಡ ವೃತ್ತದಲ್ಲಿ ವಿವಿಧ ವೇಷಭೂಷಣ ತೊಟ್ಟ ಮಕ್ಕಳು ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಬೀದಿ ನಾಟಕ ನಡೆಸಿದರು. ನಂತರ ಮಾತನಾಡಿದ ಶಾಲಾ ವಿದ್ಯಾರ್ಥಿನಿ ಮಂಜುಳಾ, ಪರಿಸರ ಸಂರಕ್ಷಣೆ ಭೂಮಿ ಮೇಲೆ ವಾಸಿಸುವ ಎಲ್ಲರ ಕೆಲಸವಾಗಿದೆ, ಜಾಗತಿಕ ಹವಾಮಾನ ಬದಲಾವಣೆಗೆ ಪ್ರಮುಖ ಕಾರಣ ಪರಿಸರ ಹಾಳು ಮಾಡುತ್ತಿರುವುದು, ಪ್ರತಿಯೊಬ್ಬರು ತಮ್ಮ ಹಂತದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ನಿಯಂತ್ರಣ, ಅಗತ್ಯಕ್ಕೆ ತಕ್ಕಂತೆ ನೀರಿನ ಬಳಕೆ, ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಯಂತ್ರಿಸುವುದು, ಪರಿಸರಕ್ಕೆ ಮಾರಕವಾದ ರಸಾಯನಿಕಗಳನ್ನು ವೈಜ್ಞಾಕವಾಗಿ ವಿಲೆ ಮಾಡುವುದು, ತಮ್ಮ ಸುತ್ತಮುತ್ತಲಲ್ಲಿ ಸಸಿ ನೆಟ್ಟು ಪೋಷಣೆ ಮಾಡುವುದು, ಬೆಳೆದ ಮರಗಳನ್ನು ಅನಗತ್ಯವಾಗಿ ಕಡಿಯದಂತೆ ನೋಡಿಕೊಳ್ಳುವುದು, ಜಲ ಸಂಗ್ರಹಗಾರಗಳಾದ ಕೆರೆ, ಕಟ್ಟೆ ಮಲಿನವಾಗದಂತೆ ನೋಡಿಕೊಳ್ಳುವುದು ಸೇರಿದಂತೆ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಗೆ ಸದ್ದಿಲ್ಲದೆ ತಮ್ಮ ಕೈಲಾದ ಕೊಡುಗೆ ನೀಡಬಹುದು, ಇದು ಕೇವಲ ಒಂದು ದಿನದ ಕೆಲಸವಲ್ಲ, ನಿತ್ಯ ನಿರಂತರವಾಗಿ ಮಾಡುವ ಮೂಲಕ ಪರಿಸರ ಸಂರಕ್ಷಣೆ ಮಾಡಿದಲ್ಲಿ ನಾಳೆ ಪರಿಸರ ನಮ್ಮ ಸಂರಕ್ಷಣೆ ಮಾಡುತ್ತದೆ ಎಂಬ ಅರಿವು ಇರಬೇಕೆಂದರು.

ನಂತರ ನಾಗರಿಕರಿಗೆ ನೇರಳೆ, ಸೀಬೆ, ನೆಲ್ಲಿ ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ವಿತರಣೆ ಮಾಡಿದರು. ಶಾಲಾ ಮುಖ್ಯಸ್ಥರಾದ ಸಾ.ರಾ.ಡೊಮಿನಿಕ್, ಪ್ರಿಯಾ, ಸಿಬ್ಬಂದಿ ರವಿ, ಅನಿಲ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!