ಸಾಮೂಹಿಕ ವಿವಾಹ, ಜನ ಜಾಗೃತಿ ಧರ್ಮ ಸಮಾರಂಭ

37

Get real time updates directly on you device, subscribe now.


ಮಧುಗಿರಿ: ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠಕ್ಕೆ 18ನೇ ವಾರ್ಷಿಕೋತ್ಸವದ ಸಂಭ್ರಮ, ಮಠದ ಸದ್ಭಕ್ತರ ಸಹಕಾರದಿಂದ ಪ್ರಾರಂಭದ ದಿನಗಳಿಂದಲೂ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ ಎಂದು ಸಿದ್ದರಬೆಟ್ಟದ ಶ್ರೀಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ದ ಶ್ರೀಪ್ರಸನ್ನ ಪಾರ್ವತಿ ಮಲ್ಲೇಶ್ವರ ಸ್ವಾಮಿ ದೇವಲಯದಲ್ಲಿ ಪೂಜೆ ಸಲ್ಲಿಸಿ ನಂತರ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಮಠದ ಸದ್ಭಕ್ತರಿಂದ ಏರ್ಪಡಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಸಂಸ್ಕೃತಿಯನ್ನು ಯುವ ಜನತೆಗೆ ತಿಳಿಸುವ ನಿಟ್ಟಿನಲ್ಲಿ ಜೂ.8 ರಂದು ಪುಸ್ತಕದ ಮಕ್ಕಳು ಮೊಬೈಲ್ ಗೀಳಿನಿಂದ ಹೊರಬಂದು ಪುಸ್ತಕದ ಕಡೆ ಗಮನ ಹರಿಸಲಿ ಎಂಬುದು, ಹಾಗಾಗಿ ಪ್ರತಿ ವರ್ಷ 10 ಸಾವಿರಕ್ಕೂ ಅಧಿಕ ಪುಸ್ತಕವನ್ನು ಮಕ್ಕಳಿಗೆ ಶಿಕ್ಷಣಕ್ಕೆ ಸ್ಪರ್ಧಾತ್ಮಕ ಪರೀಕ್ಷೆ ಉಪಯುಕ್ತವಾಗಲೆಂದು ಕಳೆದ 1 ವರ್ಷದಿಂದಲೂ ವಿತರಣೆ ಮಡಲಾಗುತ್ತಿದೆ ಎಂದು ಹೇಳಿದರು.

ಜೂ.9 ರಂದು ಶ್ರೀಮಠದ ವಾರ್ಷಿಕೋತ್ಸವದ ಅಂಗವಾಗಿ ಜಗದ್ಗುರು ರೇಣುಕಾಚಾರ್ಯರು, ಜಗಜ್ಯೋತಿ ಬಸವೇಶ್ವರರಿಗೆ ಹಾಗೂ ಗಣಪತಿ, ವೀರಭದ್ರ ಸ್ವಾಮಿಗೆ ಅಭಿಷೇಕ ನಡೆದ ಬಳಿಕ ಉತ್ಸವ ಹಾಗೂ ಸಿದ್ದೇಶ್ವರ ಸ್ವಾಮಿಗೆ ಜಿಲ್ಲಾರ್ಚನೆ, ರುದ್ರಾಭಿಷೇಕ ನಡೆಯಲಿದೆ, ವೀರಶೈವ ಧರ್ಮದ ಪ್ರಕಾರ ಧೀಕ್ಷೆ ಇಲ್ಲದೆ ಮೋಕ್ಷವೇ ಇಲ್ಲ ಎಂಬ ಮಾತಿನಂತೆ ಗಂಡು ಮತ್ತು ಹೆಣ್ಣು ಮಗುವಿಗೆ ಉಚಿತವಾಗಿ ದೀಕ್ಷೆ ನೀಡಲಾಗುವುದು, ದಾನಿಗಳ ಸಹಕಾರದಿಂದ ಸಮಾರಂಭದ ನಂತರ ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆ ಸಹ ಏರ್ಪಡಿಸಲಾಗಿದೆ ಎಂದರು.

ಜನಜಾಗತಿ ಧರ್ಮಸಮಾರಂಭ: ಶ್ರೀಮಠದ 18ನೇ ವಾರ್ಷಿಕೋತ್ಸವದ ಜನ ಜಾಗೃತಿ ಧರ್ಮ ಸಮಾರಂಭ ಕಾರ್ಯಕ್ರಮದಲ್ಲಿ ರಂಭಾಪುರಿ ವೀರ ಸಿಂಹಾಸನಾಧೀಶ್ವರ 1008 ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು ಮತ್ತು ಸಿದ್ದರಬೆಟ್ಟದ ಶ್ರೀಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ, ಉದ್ಘಾಟನೆಯನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾಡಲಿದ್ದು, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ, ತುಮಕೂರು ನೂತನ ಸಂಸದ ವಿ.ಸೋಮಣ್ಣ, ಮಾಜಿ ಸಂಸದ ಜಿ.ಎಸ್.ಬಸವರಾಜು, ಮುದ್ದಹನುಮೇ ಗೌಡ, ಶಾಸಕರಾದ ಜ್ಯೋತಿಗಣೇಶ್, ಸುರೇಶ್ ಗೌಡ, ಮಾಜಿ ಶಾಸಕ ಪಿ.ಆರ್ ಸುಧಾಕರ್ ಲಾಲ್ ಸೇರಿದಂತೆ ಜಿಲ್ಲಾಧಿಕಾರಿ, ತಾಲೂಕು ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ವೀರಭದ್ರ ಶಿವಾಚಾರ್ಯ ಸ್ವಾಮಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಚಿರಕ್ ಶಾಲೆಯ ಕಾರ್ಯದರ್ಶಿ ಭಾಸ್ಕರ್ ರೆಡ್ಡಿ, ಧಾರ್ಮಿಕ ಮುಖಂಡ ಎಂ.ಜಿ.ಶ್ರೀನಿವಾಸ ಮೂರ್ತಿ, ಆರ್.ಎಲ್.ಎಸ್. ರಮೇಶ್, ಅಖಿಲ ಭಾರತ ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ರೇಣುಕಾ ಪ್ರಸಾದ್, ಗುತ್ತಿಗೆದಾರ ದ್ವಾರಕಾನಾಥ್, ಮುಖಂಡರಾದ ರುದ್ರಾರಾದ್ಯ, ಮೂಡ್ಲಗಿರೀಶ್,ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಗೀತಾ ನಾಗರಾಜು, ತೋಟದಪ್ಪ, ಗ್ರಾಪಂ ಸದಸ್ಯ ವಿಜಯಕುಮಾರ್, ಗುತ್ತಿಗೆದಾರ ಆರ್.ಎಸ್.ಅರಾಧ್ಯ, ಪರ್ನಿಚರ್ ಮಂಜು, ಮಂಡಿ ವಿವೇಕ್, ಎಸ್ ವಿಎಲ್ ಶ್ರೀಧರ್, ಸೋಮವಂಶ ಆರ್ಯ ಕ್ಷತ್ರಿಯ ಸೇವಾ ಟ್ರ್ ಸ್ಟ್ ಅಧ್ಯಕ್ಷ ಶಂಕರಪ್ಪ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!