ಸ್ಮಶಾನ ಒತ್ತುವರಿ ತೆರವಿಗೆ ಆಗ್ರಹ

20

Get real time updates directly on you device, subscribe now.


ಕುಣಿಗಲ್: ಪಟ್ಟಣದಲ್ಲಿರುವ ತಿರುಪಳ್ಳಿ ಸ್ಮಶಾನ ವ್ಯಾಪಕ ಒತ್ತುವರಿಯಾಗಿದ್ದು ಸ್ಮಶಾನ ಒತ್ತುವರಿ ತೆರವುಗೊಳಿಸುವಂತೆ ತಹಶೀಲ್ದಾರ್ ಅವರಿಗೆ ಹಲವಾರು ಬಾರಿ ಅರ್ಜಿ ನೀಡಿದ್ದರೂ ಯಾವುದೇ ಕ್ರಮಕೈಗೊಳ್ಳದ ಕಾರಣ ಕೂಡಲೆ ಅಗತ್ಯ ಕ್ರಮ ಕೈಗೊಳ್ಳದೆ ಇದ್ದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪುರಸಭೆ ಮಾಜಿ ಉಪಾಧ್ಯಕ್ಷ ಎಸ್ಟಿಡಿ ಶ್ರೀನಿವಾಸ್ ಹೇಳಿದ್ದಾರೆ.

ಈ ಬಗ್ಗೆ ವಿವರ ನೀಡಿದ ಅವರು ಪಟ್ಟಣದಲ್ಲಿ ತಾಲೂಕು ಕಚೇರಿಗೆ ಕೂಗಳತೆ ದೂರದಲ್ಲಿರುವ ತಿರುಪಳ್ಳಿ ಸ್ಮಶಾನವು ಕಸಬಾ ಹೋಬಳಿ ಕಸಬಾ ಗ್ರಾಮದ ಸರ್ವೇ ನಂ.101ರಲ್ಲಿ 1.34 ಎಕರೆ ಇದ್ದು, ಸದರಿ ಸ್ಮಶಾನದಲ್ಲಿ ಬಲಿಜ ಜನಾಂಗ ಮತ್ತು ತೋಗಟೆ ವೀರ ಜನಾಂಗದವರ ಬಳಕೆಗೆ ಕಳೆದ ನೂರಾರು ವರ್ಷಗಳಿಂದ ನೀಡಲಾಗಿದೆ, ಸದರಿ ಸ್ಮಶಾನ ಜಾಗವೂ ಪಟ್ಟಣದ ಹೃದಯ ಭಾಗದಲ್ಲಿರುವುದರಿಂದ ಆಜುಬಾಜು ದಾರರಿಂದ ಸಾಕಷ್ಟು ಒತ್ತುವರಿಯಾಗಿದೆ, ಅಲ್ಲದೆ ಪೊಲೀಸ್ ಠಾಣೆಗೂ ಹತ್ತಿರ ಇರುವುದರಿಂದ ಪೊಲೀಸರು ಅಪಘಾತವಾಗಿರುವ ವಾಹನಗಳನ್ನು ಸ್ಮಶಾನದಲ್ಲೆ ಸಂಗ್ರಹ ಮಾಡಿರುವುದರಿಂದ ಎರಡೂ ಜನಾಂಗದವರ ಅಂತ್ಯಕ್ರಿಯೆ ನಡೆಸಲು ತೊಂದರೆಯಾಗುತ್ತಿದೆ, ಸ್ಮಶಾನ ಒತ್ತುವರಿ ಗುರುತಿಸಿ, ಒತ್ತುವರಿ ಜಾಗ ತೆರವುಗೊಳಿಸಿ ಹದ್ದಬಸ್ತು ನಿಗದಿ ಮಾಡಿಕೊಡುವಂತೆ 2022 ರಿಂದಲೂ ತಾಲೂಕು ಯೋಗಿನಾರೇಯಣ ಬಲಿಜ ಸಂಘ ಹಾಗೂ ಶ್ರೀ ಚೌಡೇಶ್ವರಿ ತೋಗಟೆವೀರರ ಕ್ಷತ್ರೀಯ ಸಂಘದ ವತಿಯಿಂದ ಹಲವು ಮನವಿ ನೀಡಿದ್ದರೂ ಜಾಗ ಗುರುತಿಸಬೇಕಾದ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಅಗತ್ಯ ಕ್ರಮಕ್ಕೆ ಮುಂದಾಗಿಲ್ಲ, ಇದರಿಂದಾಗಿ ಎರಡೂ ಜನಾಂಗದವರು ಅಂತ್ಯಕ್ರಿಯೆ ನಡೆಸಲು ಸಾಕಷ್ಟು ಅಡೆತಡೆಗಳು ಉಂಟಾಗುತ್ತಿರುವ ಕಾರಣ ತಹಶೀಲ್ದಾರ್ ತಿರುಪಳ್ಳಿ ಸ್ಮಶಾನ ಜಾಗ ಗುರುತಿಸಿ ಒತ್ತುವರಿ ತೆರವುಗೊಳಿಸಬೇಕೆಂದು ಒತ್ತಾಯಿಸಿದ ಅವರು ತಹಶೀಲ್ದಾರ್ ಕೂಡಲೆ ಅಗತ್ಯ ಕ್ರಮ ಕೈಗೊಳ್ಳದೆ ಇದ್ದಲ್ಲಿ ಎರಡೂ ಜನಾಂಗದ ಸಂಘಗಳಿಂದ ಅಗತ್ಯ ಕ್ರಮಕ್ಕಾಗಿ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!