ಕುಣಿಗಲ್: ವಿದ್ಯಾರ್ಥಿಗಳು ವಿದ್ಯಾರ್ಥಿ ದಿಸೆಯಲ್ಲಿ ದೇಶಾಭಿಮಾನ, ದೇಶ ಸೇವೆ ಜೊತೆ ಉತ್ತಮ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗ ಬೇಕಿದೆ ಎಂದು ಗೋ ಸಂರಕ್ಷಣೆ ಅಭಿಯಾನದ ಪ್ರಮುಖರು, ಸಮಾಜ ಸೇವಕ ಮಹೇಂದ್ರ ಮನ್ನೋತ್ ಹೇಳಿದರು.
ಪಟ್ಟಣದ ವಿವಿಧ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ದೇಶ ಸೇವೆ ಮಾಡಬೇಕೆಂದರೆ ಸೇನೆಗೆ ಸೇರಿಯೇ ಸೇವೆ ಮಾಡಬೇಕೆಂಬುದು ಅಲ್ಲ, ಈ ದೇಶದ ಜವಾಬ್ದಾರಿಯುತ ಪ್ರಜೆಯಾಗಿ ದೇಶದ ಅಖಂಡತೆ, ಏಕತೆ ನಿಟ್ಟಿನಲ್ಲಿ ಶ್ರಮಿಸ ಬೇಕು, ದೇಶಾಭಿಮಾನ ಮೂಡಿಸುವ ಹಲವು ಸರಳ ಕಾರ್ಯಗಳಲ್ಲಿ ಪರಿಣಾಮಕಾರಿಯಾಗಿ ತೊಡಗಿಕೊಳ್ಳಬೇಕು, ರಾಷ್ಟ್ರೀಯ ಸಂಪತ್ತುಗಳಾದ ನೀರು, ಕಾಡು, ವಿದ್ಯುತ್ ಪೋಲಾಗದಂತೆ ಕಾಪಾಡಬೇಕು, ಮಾನವ ಕುಲಕ್ಕೆ ಪೂರಕವಾಗಿರುವ ಗೋ ಸಂಪತ್ತು ವೃದ್ದಿಯಾಗುವ ನಿಟ್ಟಿನಲ್ಲಿ ಕೈಲಾದ ಕೊಡುಗೆ ನೀಡಬೇಕು, ವಿದ್ಯಾರ್ಥಿ ದಿಸೆಯಲ್ಲಿ ಮೊಬೈಲ್ ಗಳಿಗೆ ಬಲಿಯಾಗಿ ತಮ್ಮ ಮುಂದಿರುವ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ ಎಂದು ಹೇಳಿದರು.
ಪಟ್ಟಣದ ಮಹಾತ್ಮ ಗಾಂಧಿ ಪ್ರೌಢಶಾಲೆ, ಜಿಕೆಬಿಎಂಎಸ್ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಿದರು, ಪುರಸಭೆ ಮಾಜಿ ಸದಸ್ಯ ಗೋಪಿ, ವಿಶ್ವ ಹಿಂದೂ ಪರಿಷತ್ ನ ರಂಗನಾಥ, ವಂದೆಮಾತರಂ ಲ್ಯಾಬ್ ನ ಶ್ರೀನಿವಾಸ್, ಮುಖಂಡ ಉಪೇಂದ್ರ ಇತರರು ಇದ್ದರು.
Comments are closed.