ತುಮಕೂರು: ಅಮಾನಿಕೆರೆ ತೂಬಿನಿಂದ ಹೊರ ಬರುತ್ತಿರುವ ನೀರು ನೆರೆಯುಕ್ತವಾಗಿ ಹರಿದು ಬರುತ್ತಿದ್ದು, ಕೆರೆಗೆ ಕೈಗಾರಿಕಾ ತ್ಯಾಜ್ಯ ಮತ್ತು ರಾಸಾಯನಿಕ ಯುಕ್ತ ಹರಿಯುವಿಕೆಯಿಂದ ಪ್ರಮಾದ ಉಂಟಾಗಿರುವ ಬಗ್ಗೆ ಸಾರ್ವಜನಿಕ ಸುರಕ್ಷಾ ಸಮಿತಿ ಜಿಲ್ಲಾಧ್ಯಕ್ಷ ಹಾಗೂ ಮಹಾ ನಗರ ಪಾಲಿಕೆ ಮಾಜಿ ಸದಸ್ಯ ಕೆ.ಪಿ.ಮಹೇಶ ಮತ್ತು ಬಿಜೆಪಿ ಮುಖಂಡ ಗೋಕುಲ್ ಮಂಜುನಾಥ್ ಶಂಕೆ ವ್ಯಕ್ತಪಡಿಸಿ ಭಾರೀ ಅನಾಹುತದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ತುಮಕೂರು ಅಮಾನಿಕೆರೆಯ ಎಸ್ ಮಾಲ್ ಎದುರಿನ ಕೆರೆ ತೂಬ್ ನಿಂದ ಹೊರ ಬರುತ್ತಿರುವ ವಿಷಯುಕ್ತ ಹಾಗೂ ಕಲುಷಿತ ನೀರನ್ನ ಗಮನಿಸಿದರೆ ಇಡೀ ಅಮಾನಿಕೆರೆಗೆ ಕೈಗಾರಿಕಾ ತ್ಯಾಜ್ಯ ಸೇರಿರಬಹುದು ಮತ್ತು ಕೆರೆಯಲ್ಲಿರುವ ಜಲ ಚರಗಳ ಮಾರಣ ಹೋಮವಾಗಬಹುದು ಎಂದು ಆರೋಪಿಸಿರುವ ಕೆ.ಪಿ.ಮಹೇಶ ಮತ್ತು ಗೋಕುಲ್ ಮಂಜುನಾಥ್ ಕೂಡಲೇ ಜಿಲ್ಲಾಡಳಿತ ಮತ್ತು ಮಹಾ ನಗರ ಪಾಲಿಕೆ ಸೂಕ್ತ ಕ್ರಮ ವಹಿಸಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.
ಅಮಾನಿಕೆರೆ ನೀರನ್ನು ತುಮಕೂರು ನಗರಕ್ಕೆ ಮರು ಬಳಕೆಗೆ ಹೇಮಾವತಿ ಜಲ ಸಂಗ್ರಹ ಮಾಡುವ ಬುಗುಡನಹಳ್ಳಿ ಮತ್ತು ಪಿ.ಎನ್.ಪಾಳ್ಯಕ್ಕೆ ಪಂಪಿಂಗ್ ಮಾಡಿ ಜಲ ಶುದ್ಧೀಕರಣದ ಕೇಂದ್ರದ ಮೂಲಕ ತುಮಕೂರು ಮಹಾ ಜನತೆಗೆ ಪೂರೈಸಿದರೆ ಭಾರಿ ಪ್ರಮಾಣದ ಸಾವು- ನೋವು ಮತ್ತು ತೀವ್ರ ರೀತಿಯ ಅನಾರೋಗ್ಯದಿಂದ ಮಹಾ ಜನತೆ ತತ್ತರಿಸಿ ಹೋಗಲಿದ್ದಾರೆ ಎಂದು ಎಚ್ಚರಿಸಿ, ಅನಾಹುತಗಳಿಗೆ ಜಿಲ್ಲಾಡಳಿತ ಮತ್ತು ಮಹಾ ನಗರ ಪಾಲಿಕೆ ನೇರ ಹೊಣೆಗಾರರು ಎಂದು ಕೆ.ಪಿ.ಮಹೇಶ ಮತ್ತು ಗೋಕುಲ್ ಮಂಜುನಾಥ್ ಎಚ್ಚರಿಸಿದ್ದಾರೆ.
Comments are closed.