ಕುಣಿಗಲ್: ತಾಲೂಕಿನ ನಾಗಸಂದ್ರ ಗ್ರಾಪಂನ 14ನೇ ಹಣಕಾಸು ಯೋಜನೆಯಡಿಯಲ್ಲಿ ಲಕ್ಷಾಂತರ ರೂ. ವೆಚ್ಚಕ್ಕೆ ಸಂಬಂಧಿಸಿದಂತೆ ದಾಖಲೆಗಳು ಕಾಣೆಯಾಗಿದ್ದು ವ್ಯಾಪಕ ಅಕ್ರಮ ನಡೆದಿದೆ ಎಂದು ಆರೋಪಿಸಿ ಗ್ರಾಮಸ್ಥರು, ಗ್ರಾಪಂ ಸದಸ್ಯರು ಪ್ರತಿಭಟನೆ ನಡೆಸಿದರು.
ಗುರುವಾರ, ಗ್ರಾಮಪಂಚಾಯಿತಿ ಕಾರ್ಯಾರಂಭ ಸಮಯಕ್ಕೆ ಗ್ರಾಪಂ ಸದಸ್ಯರಾದ ಹುಚ್ಚೇಗೌಡ, ಉಮೇಶ, ಕುಮಾರ, ಗ್ರಾಮಸ್ಥರಾದ ತಿಮ್ಮಯ್ಯ,ರಮೇಶ್, ಲೋಕೇಶ್ ವೆಂಕಟೇಶ್, ಗ್ರಾಮಪಂಚಾಯಿತಿಯಲ್ಲಿ 14ನೇ ಹಣಕಾಸು ಯೋಜನೆಯ ಅವ್ಯವಹಾರವಾಗಿದೆ ಎಂದು ಅರೋಪಿಸಿ, ಗ್ರಾಪಂ 14ನೇ ಹಣಕಾಸು ಯೋಜನೆಯಡಿಯಲ್ಲಿ 29ಲಕ್ಷರೂ. ಮಂಜೂರಾಗಿದ್ದು, ಸದರಿ ಅನುದಾನದಲ್ಲಿ 9.50 ಲಕ್ಷರೂ.ಗಳ ವಿದ್ಯುತ್ ದೀಪ, ಸಾಮಾಗ್ರಿ ನಿಯಮ ಮೀರಿ ಖರೀದಿ ಮಾಡಲಾಗಿದೆ. ನಿಯಮಗಳ ಪ್ರಕಾರ ಯಾವುದೇ ಖರೀದಿಗೆ ಅನ್ಲೈನ್ಮೂಲಕವೆ ಹಣ ನೀಡಬೇಕಿದ್ದು ನಿಯಮ ಉಲ್ಲಂಸಿ ಚೆಕ್ಮೂಲಕ ಪಾವತಿಸಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ರೆಸಲೂಷನ್ ಪುಸ್ತಕ, ಡಿಸಿಬಿಲ್, ಚೆಕ್ ವೋಚರ್, ನಗದು ಪುಸ್ತಕ ಯಾವುದು ನಿರ್ವಹಣೆ ಮಾಡಿಲ್ಲ. ಅಧ್ಯಕ್ಷರನ್ನು ಕೇಳಿದರೆ ಅಧ್ಯಕ್ಷರು ಪಿಡಿಒ ನನ್ನ ಸಹಿ ನಕಲು ಮಾಡಿ ಹಣ ನಗದು ಮಾಡಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಅಮೃತೂರು ಪೊಲೀಸರಿಗೆ ದೂರು ನೀಡಿದ್ದೇನೆ ಎಂದಿದ್ದಾರೆ. ಸಮಗ್ರ ದಾಖಲೆ ಒದಗಿಸುವಂತೆ ಪಿಡಿಒ ರಾಜಣ್ಣ ಅವರಿಗೆ ಆಗ್ರಹಿಸಿದರು. ಪಿಡಿಒ ಸ್ಪಂದಿಸದೆ ಇದ್ದಾಗ ಗ್ರಾಪಂ ಸದಸ್ಯರು, ಗ್ರಾಮಸ್ಥರು ಗ್ರಾಪಂ ಮುಂದೆ ಪ್ರತಿಭಟನೆ ನಡೆಸಿದರು.
ವಿಷಯ ತಿಳಿದ ತಾಪಂ ಇಒ ಜೋಸ್, ವ್ಯವಸ್ಥಾಪಕ ಸುರೇಶ್, ಗ್ರಾಪಂ ಕಾರ್ಯಾಲಯಕ್ಕೆ ಆಗಮಿಸಿ ಸದಸ್ಯರ ಅರೋಪದ ಬಗ್ಗೆ ವಿಚಾರಣೆ ನಡೆಸಿದಾಗ ಪಿಡಿಒ ಸಮರ್ಪಕ ಉತ್ತರ ನೀಡದೆ, ದಾಖಲೆಗಳನ್ನು ಹಾಜರುಪಡಿಸದ ಕಾರಣ ಘಟನೆಗೆ ಸಂಬಂಧಿಸಿದಂತೆ ಪಿಡಿಒ ರಾಜಣ್ಣಗೆ ನೋಟೀಸ್ ಜಾರಿ ಮಾಡಿ, ಸಮರ್ಪಕ ದಾಖಲೆ ಒದಗಿಸುವಂತೆ ಇಲ್ಲವಾದಲ್ಲಿ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ ಮೇರಗೆ ಪ್ರತಿಭಟನೆ ಹಿಂಪಡೆದರು.
ನಾಗಸಂದ್ರ ಗ್ರಾಪಂನಲ್ಲಿ ಅವ್ಯವಹಾರ ಖಂಡಿಸಿ ಪ್ರತಿಭಟನೆ
ಪಿಡಿಒಗೆ ನೋಟೀಸ್ ಜಾರಿ ಶಿಸ್ತುಕ್ರಮ ಜರುಗಿಸುವುದಾಗಿ ಇಓ ಎಚ್ಚರಿಕೆ
Get real time updates directly on you device, subscribe now.
Prev Post
Next Post
Comments are closed.