ಕರ್ನಾಟಕ ನರ ವಿಜ್ಞಾನ ಅಕಾಡೆಮಿಯ ರಾಜ್ಯ ಸಮ್ಮೇಳನ

34

Get real time updates directly on you device, subscribe now.


ತುಮಕೂರು: ನರ ವಿಜ್ಞಾನದಲ್ಲಿ ಇತ್ತೀಚಿನ ಸಮಸ್ಯೆ ಅಧ್ಯಯನ ನಡೆಸಲು, ಹೊಸ ಚಿಕಿತ್ಸಾ ಮಾರ್ಗಗಳನ್ನು ಪ್ರಚುರ ಪಡಿಸಲು, ಬೆಂಗಳೂರು ನ್ಯೂರೋ ಎಜುಕೇಶನ್ ಟ್ರಸ್ಟ್, ಕರ್ನಾಟಕ ನರ ವಿಜ್ಞಾನ ಅಕಾಡೆಮಿ ಹಾಗೂ ಸಿದ್ಧಗಂಗಾ ವೈದ್ಯಕೀಯ ಮಹಾ ವಿದ್ಯಾಲಯ ಸಹಯೋಗದಲ್ಲಿ ಜೂ.7 ರಿಂದ 9 ರ ವರೆಗೆ 13 ನೇ ವಾರ್ಷಿಕ ರಾಜ್ಯ ಸಮ್ಮೇಳನ ಆಯೋಜಿಸಿದೆ ಎಂದು ಸಮ್ಮೇಳನದ ಸಂಘಟನಾ ಅಧ್ಯಕ್ಷ , ಖ್ಯಾತ ನರರೋಗ ತಜ್ಞ ಡಾ.ಉಮಾಶಂಕರ್ ತಿಳಿಸಿದ್ದಾರೆ.

ಸಿದ್ಧಗಂಗಾ ಆಸ್ಪತ್ರೆಯ ಪರವಾಗಿ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜೂನ್ 7 ರ ಸಂಜೆ 7 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಭಿಬ್ರೈನ್ ಹೆಲ್ತ್ ಇನ್ಶಿಯೇಟಿವ್ ಭಿ ಕುರಿತು ಸಂವಾದ ನಡೆಯಲಿದೆ, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಹಾಗೂ ಸರ್ಕಾರದ ಆರೋಗ್ಯ ಕಾರ್ಯದರ್ಶಿ ಡಿ.ರಂದೀಪ್, ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಡಾ.ರಜನಿ ಪಾರ್ಥಸಾರಥಿ ಹಾಗೂ ನಿಮ್ಹಾನ್ಸ್ ನರ ವಿಜ್ಞಾನ ವಿಭಾಗ ಮುಖ್ಯಸ್ಥರಾದ ಡಾ.ಸುವರ್ಣ ಅಲ್ಲಾಡಿ ಆಗಮಿಸಲಿದ್ದಾರೆ.

ಜೂನ್ 8ರ ಬೆಳಗ್ಗೆ 11 ಗಂಟೆಗೆ 13ನೇ ವಾರ್ಷಿಕ ರಾಜ್ಯ ಸಮ್ಮೇಳನದ ವಿವಿಧ ಉಪನ್ಯಾಸ ಕಾರ್ಯಕ್ರಮಗಳ ಉದ್ಘಾಟನೆಯನ್ನು ಸಿದ್ಧಗಂಗಾ ಮಠದ ಮಠಾಧ್ಯಕ್ಷ ಸಿದ್ಧಲಿಂಗ ಮಹಾ ಸ್ವಾಮೀಜಿ ನೆರವೇರಿಸಲಿದ್ದು, ಜೂನ್ 9 ರ ವರೆಗೆ ನರ ವಿಜ್ಞಾನಕ್ಕೆ ಸಂಬಂಧಿಸಿದ 300 ಕ್ಕೂ ಹೆಚ್ಚು ವೈದ್ಯರು ಭಾಗಿಯಾಗಿ ಸಮಯಾವಕಾಶದ ಆಧಾರದಂತೆ ವಿವಿಧ ವಿಭಾಗಳಲ್ಲಿ ಸಂವಾದ ಚರ್ಚೆ ಹಾಗೂ ನೂತನ ಆವಿಷ್ಕಾರಗಳ ಕುರಿತಂತೆ ಚರ್ಚೆ, ಪರಸ್ಪರ ಮಾಹಿತಿ ವಿನಿಮಯ ನಡೆಯಲಿದೆ ಎಂದು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!