ಖಾಕಿಗಳ ಮೇಲೆ ಕೇಸ್ ದಾಖಲು

ವಾಟರ್ ಮನ್ ಮೇಲೆ ವಿಚಾರಣೆ ನೆಪದಲ್ಲಿ ಹಲ್ಲೆ

16

Get real time updates directly on you device, subscribe now.


ತುಮಕೂರು: ಪಂಚಾಯಿತಿ ವಾಟರ್ ಮನ್ ಮೇಲೆ ಪೊಲೀಸ್ ಅಧಿಕಾರಿಗಳು ತನಿಖೆ ನೆಪದಲ್ಲಿ ಹಲ್ಲೆ ನಡೆಸಿ, ಅಕ್ರಮ ಬಂಧನದಲ್ಲಿರಿಸಿದ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಸೂಚನೆ ಮೇರೆಗೆ ಪೊಲೀಸ್ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕುಣಿಗಲ್ ತಾಲೂಕು ಅಮೃತೂರು ಹೋಬಳಿಯ ಕೆ.ಹೊನ್ನಮಾಚನ ಹಳ್ಳಿ ವಾಸಿಯಾದ ಪಂಚಾಯತಿಯಲ್ಲಿ ವಾಟರ್ ಮನ್ ಆಗಿ ಸೇವೆ ಸಲ್ಲಿಸುತ್ತಿದ್ದ ಗಂಗಾಧರಯ್ಯ ಎಂಬುವರು 2024ರ ಮಾರ್ಚ್ 21 ರಂದು ಕರ್ತವ್ಯಕ್ಕೆ ತೆರಳುವಾಗ ರಾಘವನ ಹೊಸೂರು ಗ್ರಾಮದ ಬಳಿ ಅಮೃತೂರು ಪಿ ಎಸ್ ಐ ಶಮಂತ ಗೌಡ ಮತ್ತು ಸಿಬ್ಬಂದಿ ವಿಚಾರಣೆ ಗಂಗಾಧರಯ್ಯ ಅವರನ್ನು ಕುಣಿಗಲ್ ಪೊಲೀಸ್ ಠಾಣೆಗೆ ಕರೆ ತಂದು ಹಲ್ಲೆ ನಡೆಸಿದ್ದರು ಎನ್ನಲಾಗಿದೆ, ಅವರನ್ನು ವಶಕ್ಕೆ ಪಡೆದ ಬಗೆಯಾಗಲಿ, ಇತರೆ ಯಾವುದೇ ರೀತಿ ಆಗಲಿ ಅವರ ಕುಟುಂಬಸ್ಥರಿಗೆ ಯಾವುದೇ ಮಾಹಿತಿ ನೀಡಲಿಲ್ಲ ಎನ್ನಲಾಗಿದೆ.

ನಂತರ ವಾಟರ್ ಮನ್ ಬಿಟ್ಟು ಕಳಿಸಲಾಗಿದ್ದು ರಕ್ತ ಗಾಯಗಳಿಂದ ಬಳಲಿದ್ದ ಗಂಗಾಧರಯ್ಯ ಅಮೃತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು, ಬೆಳ್ಳೂರ್ ಕ್ರಾಸ್ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ನಂತರ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನ್ಯಾಯಾಲಯ ಮೆಟ್ಟಿಲೇರಿದ್ದರು, ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಸೂಚನೆ ಮೇರೆಗೆ ಪೊಲೀಸ್ ಅಧಿಕಾರಿಗಳಾದ ಓಂ ಪ್ರಕಾಶ್ (ಉಪ ವಿಭಾಗಾಧಿಕಾರಿ), ಮಾದ್ಯಾ ನಾಯಕ್ (ಅಮೃತೂರು ಸಿಪಿಐ), ಶಮಂತಗೌಡ (ಅಮೃತೂರು ಪಿಎಸೈ), ದಯಾನಂದ್ (ಮುಖ್ಯ ಪೇದೆ) ಇವರ ಮೇಲೆ ಭಾರತೀಯ ದಂಡ ಪ್ರಕ್ರಿಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿಯಲ್ಲಿ 2024ರ ಜೂನ್ 6 ರಂದು ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!