ಎತ್ತಿನಹೊಳೆಗೆ ಭೂ ಸ್ವಾಧೀನ- ಪರಿಹಾರಕ್ಕೆ ರೈತರ ಆಗ್ರಹ

25

Get real time updates directly on you device, subscribe now.


ತುಮಕೂರು: ಸರ್ಕಾರ ನೀರಾವರಿ ನೆಲೆಮೂಲಗಳನ್ನ ಅಭಿವೃದ್ಧಿಗೊಳಿಸುವ ಸಲುವಾಗಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಭಾಗಗಳಿಗೆ ಕುಡಿಯುವ ನೀರಿನ ಯೋಜನೆ ರೂಪಿಸಿ ಎತ್ತಿನಹೊಳೆ ಯೋಜನೆ ಕೈಗೆತ್ತಿಕೊಂಡಿದ್ದು ಇದರ ನಾಲಾ ನಿರ್ಮಾಣ ಕಾರ್ಯ ಇದೀಗ ಅನೇಕ ಕಡೆಗಳಲ್ಲಿ ಅಭಿವೃದ್ಧಿಗೊಳ್ಳುತ್ತಾ ಇದೆ, ಅದೇ ರೀತಿಯಾಗಿ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ವ್ಯಾಪ್ತಿಯ ಬೈರಾಪುರ ಮಲ್ಲೇನಹಳ್ಳಿ ಮಾಡ್ಲೆಹಳ್ಳಿ ಗ್ರಾಮಗಳ ಸುಮಾರು 80ಕ್ಕೂ ಹೆಚ್ಚು ಎಕ್ಕರೆ ಜಮೀನು ಎತ್ತಿನಹೊಳೆ ನಾಲೆ ನಿರ್ಮಾಣಕ್ಕೆ ಭೂಸ್ವಾಧೀನಗೊಂಡಿದ್ದು, ಈ ಜಮೀನುಗಳಿಗೆ ಗರಿಷ್ಠ 75,000 ಪರಿಹಾರ ಬೆಲೆ ನೀಡಬೇಕು ಎಂದು ಈ ಗ್ರಾಮಗಳ ರೈತರು ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಹತ್ತಾರು ರೈತರು ಮಾತನಾಡಿದರು.
ಮಲ್ಲೇನಹಳ್ಳಿ ರೈತ ಮುಖಂಡ ಕಾಂತರಾಜು.ಬಿ.ಬಿ. ಮಾತನಾಡಿ, ಕಿಬ್ಬನಹಳ್ಳಿ ಹೋಬಳಿ ವ್ಯಾಪ್ತಿಯ ಬೈರಾಪುರ, ಮಲ್ಲೇನಹಳ್ಳಿ, ಮಾಡ್ಲೆಹಳ್ಳಿ ಗ್ರಾಮಗಳ ಜಮೀನುಗಳು ಎತ್ತಿನಹೊಳೆಗೆ ಒತ್ತುವರಿಯಾಗಿದೆ, ಇದರಲ್ಲಿ ಲಕ್ಷಾಂತರ ರೂ. ಬೆಲೆ ಬಾಳುವ ಗಿಡ ಮರ ಕೊಳವೆಬಾವಿ ಸೇರಿದಂತೆ ಅನೇಕ ಖನಿಜ ಸಂಪತ್ತು ಇದ್ದು, ಇದಕ್ಕೆಲ್ಲ ಪರಿಹಾರ ನೀಡುವುದಾಗಿ ತಿಳಿಸಿದ ಎತ್ತಿನಹೊಳೆ ನಾಲಾ ವಲಯದ ಅಧಿಕಾರಿಗಳು ಯಾವುದೇ ರೀತಿಯ ಪರಿಹಾರ ನೀಡದೆ 2018 ರಲ್ಲಿ ನಿರ್ಮಾಣ ಹಂತದಿಂದ ಹಿಡಿದು ಎತ್ತಿನಹೊಳೆ ನಾಲಾ ವಲಯದಲ್ಲಿ ನೀರು ಹರಿಯುವ ತನಕ ಪರಿಹಾರ ನೀಡುವುದಾಗಿ ತಿಳಿಸಿದ್ದು, ಈ ಪರಿಹಾರದ ರೂಪದ ಹಣವನ್ನು ನಿಗದಿ ಪಡಿಸಿರುವುದಕ್ಕಿಂತ ಅಂದರೆ ಹೆಚ್ಚಾಗಿ ಒಂದು ಕುಂಟೆಗೆ 75,000 ರೂ. ನೀಡಬೇಕು ಎಂದು ತಿಳಿಸಿದರು.

ನಮ್ಮ ಜಮೀನುಗಳ ಸುತ್ತಮುತ್ತಲಿರುವ ಬೇರೆ ಇತರೆ ರೈತರ ಜಮೀನುಗಳಿಗೆ ಗರಿಷ್ಠ ಬೆಲೆ ನಿಗದಿಪಡಿಸಿದ್ದಾರೆ, ಆದರೆ ಎತ್ತಿನಹೊಳೆ ಯೋಜನೆಗೆ ಹೋಗಿರುವ ಜಮೀನುಗಳಿಗೆ ಕನಿಷ್ಠ ಬೆಲೆ ನೀಡುವುದಾಗಿ ಅವಾರ್ಡ್ಸ್ ನೀಡಿದ್ದಾರೆ, ಇದರಿಂದಾಗಿ ರೈತರಿಗೆ ತುಂಬಾ ಅನಾನುಕೂಲವಾಗಲಿದ್ದು, ಈ ಭಾಗದಲ್ಲಿ ಹೆದ್ದಾರಿ ರಸ್ತೆ ಹಾದು ಹೋಗಿರುವ ರೈತರಿಗೆ ಒಂದು ಕುಂಟೆಗೆ ಲಕ್ಷಕ್ಕೂ ಹೆಚ್ಚು ಪರಿಹಾರ ಲಭಿಸಿದ್ದು, ನಮಗೆ ಕೇವಲ 75,000 ಪರಿಹಾರ ನೀಡಿದರೆ ತುಂಬಾ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು.

ಬೈರಾಪುರದ ರೈತ ಮುಖಂಡ ಬಿ.ಕೆ. ಶೇಖರಯ್ಯ ಮಾತನಾಡಿ, ನಮ್ಮ ಭಾಗದಲ್ಲಿ ಎತ್ತಿನಹೊಳೆ ನಾಲೆ ಹಾಯ್ದು ಹೋಗುವುದು ನಮಗೆ ಅನುಕೂಲವಾಗುತ್ತದೆ ಎಂದು ಅಂದು ರೈತರೆಲ್ಲರೂ ತೀರ್ಮಾನಗೊಳಿಸಿ 2019- 20 ರಲ್ಲಿ ಸಾಗುವಳಿಗೆ ಬಂದಿದ್ದ ಭೂಮಿಯನ್ನ ಎತ್ತಿನಹೊಳೆ ನಾಲೆ ನಿರ್ಮಾಣಕ್ಕೆ ನೀಡಿದ್ದೆವು, ಅಂದಿಗೆ ತೋಟಗಾರಿಕೆ ಇಲಾಖೆಯವರು ಮೂರು ವರ್ಷದ ಗಿಡ ಮರಗಳನ್ನು ಸಸಿಗಳೆಂದು ನಮೂದು ಮಾಡಿದ್ದಾರೆ, ಇಂದಿಗೆ ಆ ಮರಗಳಿಗೆ 9 ವರ್ಷ ತುಂಬಿದ್ದು ಫಲ ನೀಡುವ ಮರಗಳಾಗಿರುತ್ತಿದ್ದವು, ಆದರೆ ಅಧಿಕಾರಿಗಳ ಪರಿಹಾರ ನೋಡಿದರೆ ರೈತರು ಕಂಗಾಲಾಗುವ ಸ್ಥಿತಿ ಬಂದಿದೆ, ಈವರೆಗೂ ನೀಡಲಾಗುವ ಪರಿಹಾರ ಕೂಡ ನೀಡಿಲ್ಲ, ಅಧಿಕಾರಿಗಳ ಮಾಹಿತಿ ಪ್ರಕಾರ ಇದೀಗ ಅಂದಿನ ನಮೂದು ಮಾಡಿರುವ ಸಸಿಗಳ ದರವನ್ನು ಮರಗಳಿಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ, ಹಾಗಾಗಿ ನಮಗೆ ಕುಂಟೆಗೆ 75,000 ಸೂಕ್ತ ಪರಿಹಾರ ನೀಡಬೇಕು ಎಂದರು.

ರೈತ ಮುಖಂಡ ಬಸವರಾಜು, ನಾಗೇಶ್, ಶ್ರೀಧರ, ತಿಮ್ಮೇಗೌಡ, ಮೋಹನ, ರೇವಣಸಿದ್ದಯ್ಯ, ದೊಡ್ಡೇಗೌಡ, ನಾಗರಾಜು, ಚನ್ನಬಸಪ್ಪ, ವಿರೂಪಾಕ್ಷ, ನಾಗಣ್ಣ, ಈರಣ್ಣ, ಸಣ್ಣ ಕೆಂಪಯ್ಯ, ಜಗದೀಶ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Get real time updates directly on you device, subscribe now.

Comments are closed.

error: Content is protected !!