ತುಮಕೂರು: ನಗರದ ವಿ ಟೆಕ್ನೋ ವಿ ಟೆಕ್ ಸಲ್ಯೂಷನ್ಸ್ ಸಂಸ್ಥೆಯ ಹೊಸ ಶಾಖೆಯನ್ನು ಹಿರಿಯ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಬಿದರಿ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಮಾತನಾಡಿ, ಈಗಾಗಲೆ ವಿ ಟೆಕ್ ಸಲ್ಯೂಷನ್ಸ್ ಸಂಸ್ಥೆಯೂ ತನ್ನ ಸೇವೆ ಕೊಡುವುದರ ಮೂಲಕ ಭರ್ಜರಿ ಪ್ರಗತಿ ಸಾಧಿಸುತಿದ್ದು, ಮತ್ತಷ್ಟು ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹೊಸ ಶಾಖೆ ಆರಂಭಿಸಿದ್ದಾರೆ ಎಂದು ಶ್ಲಾಸಿ ತಾಯಿ ತಂದೆಯೇ ದೇವರು ಎಂಬ ಮಹತ್ವ ಬಿಂಬಿಸಿ ನಿಮ್ಮ ಪ್ರಗತಿಗಾಗಿ ನೀವೇ ಪರಿಶ್ರಮ ಪಡಬೇಕು, ಯಾರ ಮೇಲೂ ಅವಲಂಬಿತರಾಗದೆ ನಿಮ್ಮ ಸ್ವಂತ ಶ್ರಮದಿಂದ ನಿಲ್ಲಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತುಮಕೂರು ನಗರದ ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ತುಮಕೂರು ನಗರದ ಜನತೆಗೆ ಮಾಹಿತಿ ಮತ್ತು ತಂತ್ರಜ್ಞಾನ ತಿಳಿಸಿಕೊಡುವ ನಿಟ್ಟಿನಲ್ಲಿ ಈ ಸಂಸ್ಥೆಯೂ ಮುನ್ನಡೆಯುತ್ತಿದೆ ಎಂದು ಹೇಳಿದರು.
ವಿ ಟೆಕ್ನೋ ವಿ ಟೆಕ್ ಸಲ್ಯೂಷನ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್.ಬಿ.ಪ್ರದೀಪ್ ಕುಮಾರ್ ಮಾತನಾಡಿ, ಜ್ಯೆನ್ ಆನ್ ಲೈನ್ ಸಹಯೋಗದೊಂದಿಗೆ ನಮ್ಮ ಸಂಸ್ಥೆಯೂ ಎಂಸಿಎ ಮತ್ತು ಎಂಬಿಎ ಆನ್ ಲೈನ್ ಕೋರ್ಸ್ಗಳನ್ನು ಹಾಗೂ ದೂರ ಶಿಕ್ಷಣದ ಮೂಲಕ ಪದವಿ, ಸ್ನಾತಕೋತ್ತರ ಪದವಿ ಕೊಟ್ಟು ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಶಿಕ್ಷಣ ಕ್ರಾಂತಿ ಮಾಡುತ್ತಿದೆ ಹಾಗೂ ತಮ್ಮ ಭವಿಷ್ಯ ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಟಿ ರಾಧ್ಯ ಮತ್ತು ನಟ ಅವಿನಾಶ್ ಅವರಿಗೆ ಸನ್ಮಾನಿಸಲಾಯಿತು. ವಿದ್ಯಾವಾಹಿನಿ ಸಂಸ್ಥೆಯ ಅಧ್ಯಕ್ಷ ಕೆ.ಬಿ.ಜಯಣ್ಣ, ಪೂರ್ಣಿಮ ಜಯಣ್ಣ, ವಿ ಟೆಕ್ ಸಲ್ಯೂಷನ್ಸ್ನ ವ್ಯವಸ್ಥಾಪಕ ನಿರ್ದೇಶಕಿ ನಾಗಪ್ರಿಯ.ಕೆ.ಜೆ, ಕೋ- ಅರ್ಡಿನೇಟರ್ ಮಧುಪ್ರಿಯ, ಸುಧಾರಾಣಿ.ಹೆಚ್.ಆರ್ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.
Comments are closed.