ತೊಟ್ಟಿಲು ತೂಗುವ ಕೈ ದೇಶ ಆಳಬಲ್ಲದು

ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮ: ವಸಂತ

29

Get real time updates directly on you device, subscribe now.


ತುಮಕೂರು: ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮ, ಹಾಗಾಗಿ ಅಮ್ಮನನ್ನು ಗೌರವಿಸುವುದರಿಂದ ಎಲ್ಲಾ ಪುಣ್ಯ ಲಭ್ಯವಾಗುತ್ತವೆ ಎಂದು ಯೋಗ ಗುರು ಹಾಗೂ ಸಮಾಜ ಸೇವಕಿ ವಸಂತ ನಾರಾಯಣಗೌಡ ತಿಳಿಸಿದ್ದಾರೆ.
ನಗರದ ಭೈರವೇಶ್ವರ ಬ್ಯಾಂಕ್ ನ ಶ್ರೀಭರವೇಶ್ವರ ಸಭಾಂಗಣದಲ್ಲಿ ರಾಜ್ಯ ಚುಂಚಾದ್ರಿ ಮಹಿಳಾ ಪ್ರತಿಷ್ಠಾನ ತುಮಕೂರು ಜಿಲ್ಲಾ ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಮ್ಮಂದಿರ ದಿನ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಒಂದು ಸ್ವಾಸ್ಥ ಸಮಾಜ ನಿರ್ಮಾಣದ ಹಿಂದೆ ಅಮ್ಮಂದಿರ ಶ್ರಮವಿದೆ, ಮಕ್ಕಳ ಬೇಕು, ಬೇಡಗಳನ್ನು ಅರಿತು ನಿಭಾಯಿಸುವ ಮೂಲಕ ಇಡೀ ಕುಟುಂಬಕ್ಕೆ ಬೆನ್ನೆಲುಬಾಗಿ ಕೆಲಸ ಮಾಡುತ್ತಾಳೆ ಎಂದರು.

ಮಕ್ಕಳನ್ನು ಸಚ್ಚಾರಿತ್ರವಂತರಾಗಿ ಬೆಳೆಸಲು ತಾಯಂದಿರು ಹೆಚ್ಚಿನ ಗಮನ ನೀಡಬೇಕು, ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿ, ಅವರಿಗೆ ಬೇಕಾದದನ್ನು ಕೊಡಿಸಿದರೆ ನಮ್ಮ ಜವಾಬ್ದಾರಿ ಮುಗಿಯಲ್ಲ, ಅವರ ಶೈಕ್ಷಣಿಕ ಬೆಳವಣಿಗೆಯ ಜೊತೆ ಜೊತೆಗೆ, ಅವರ ಸ್ನೇಹಿತರ ವಲಯ, ಶಾಲಾ ನಂತರದಲ್ಲಿ ಅವರ ಚಟುವಟಿಕೆಗಳ ಕಡೆಗೂ ಗಮನ ಹರಿಸಬೇಕಿದೆ, ಪ್ರೀತಿಯ ಜೊತೆ ಜೊತೆಗೆ, ಮಕ್ಕಳಲ್ಲಿ ಇನ್ನೊಬ್ಬರ ಬಗ್ಗೆ ಮಮಕಾರ, ಕಷ್ಟದಲ್ಲಿರುವವರ ಬಗ್ಗೆ ಕುರುಣೆ, ಸಹವರ್ತಿಗಳೊಂದಿಗೆ ಸ್ನೇಹಪರ ನಡವಳಿಕೆ ಇವುಗಳನ್ನು ಕಲಿಸಬೇಕಿದೆ, ಅವರಿಗೆ ಮನೆಯ ಹೊರೆಗೆ ಮತ್ತು ಒಳಗೆ ನಡವಳಿಕೆ ಹೇಗಿರಬೇಕು ಎಂಬುದನ್ನು ತಾಯಿ ಮಾತ್ರ ಸಮರ್ಪಕವಾಗಿ ಕಲಿಸಬಲ್ಲಳು, ಕೈತುತ್ತು ತಿನ್ನಿಸುವುದರಿಂದ, ಕುಟುಂಬದವರೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುವುದರಿಂದ ಕೌಟುಂಬಿಕ ವಾತಾವರಣ ಮತ್ತಷ್ಟು ಗಟ್ಟಿಗೊಳ್ಳಲಿದೆ, ಈ ನಿಟ್ಟಿನಲ್ಲಿ ಎಲ್ಲಾ ತಾಯಂದಿರು ಗಮನ ಹರಿಸಬೇಕೆಂದು ಯೋಗ ಗುರು ವಸಂತ ನಾರಾಯಣಗೌಡ ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚುಂಚಾದ್ರಿ ಮಹಿಳಾ ಪ್ರತಿಷ್ಠಾನದ ತುಮಕೂರು ಜಿಲ್ಲಾಧ್ಯಕ್ಷ ಸುಜಾಜ ನಂಜೇಗೌಡ ಮಾತನಾಡಿ, ಹೆಣ್ಣು ತಾಯಿಯಾಗಿ, ಮಡದಿಯಾಗಿ, ಅಕ್ಕನಾಗಿ, ತಂಗಿಯಾಗಿ, ಮಗಳಾಗಿ ಒಂದು ಗಂಡಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ, ಒಂದು ಕಾಲದಲ್ಲಿ ನಾಲ್ಕು ಗೋಡೆಗಳ ಮಧ್ಯದ ಜೀವನಕ್ಕೆ ಸಿಮೀತವಾಗಿದ್ದ ತಾಯಂದಿರಿಗೆ ಇಂದು ವಿಫುಲ ಅವಕಾಶಗಳಿವೆ, ತೊಟ್ಟಿಲು ತೂಗುವ ಕೈ ದೇಶವನ್ನು ಆಳಬಲ್ಲದು ಎಂಬುದನ್ನು ಹಲವಾರು ಮಹಿಳೆಯರು ಸಾಧಿಸಿ ತೋರಿಸಿದ್ದಾರೆ, ಗಂಡಿಗೆ ಸರಿಸಮನಾಗಿ ಎಲ್ಲಾ ರಂಗದಲ್ಲಿಯೂ ತಮ್ಮ ಸಾಧನೆಯ ಚಾಪು ಮೂಡಿಸಿದ್ದಾರೆ, ಆದರೆ ಮಕ್ಕಳ ಮೇಲಿನ ಅತಿಯಾದ ಪ್ರೀತಿ ಕೆಲವೊಮ್ಮೆ ಆಕೆಗೆ ಮುಳುವಾಗುತ್ತಿರುವುದನ್ನು ಇತ್ತೀಚಿನ ಪ್ರಕರಣಗಳಲ್ಲಿ ನಾವು ಕಾಣಬಹುದಾಗಿದೆ ಎಂದರು.

ಆದಿಚುಂಚನಗಿರಿ ಮಠದವತಿಯಿಂದ 2022ರಲ್ಲಿ ಚುಂಚಾದ್ರಿ ಮಹಿಳಾ ಪ್ರತಿಷ್ಠಾನ ಎಂಬ ಸಂಸ್ಥೆಯನ್ನು ನಿರ್ಮಿಸಿ, ರಾಜ್ಯದ ಎಲ್ಲಾ ತಾಲೂಕುಗಳಿಂದಲೂ ತಲಾ ಇಬ್ಬರು ನಿರ್ದೇಶಕರನ್ನು ಆಯ್ಕೆ ಮಾಡಿದ್ದು, ತುಮಕೂರಿನಿಂದ ಸುಜಾತ ನಂಜೇಗೌಡ ಮತ್ತು ಯಶೋಧಮ್ಮ ವೀರಯ್ಯ ಅವರನ್ನು ನೇಮಕ ಮಾಡಿದ್ದು, ನಾವುಗಳು ಜಿಲ್ಲೆಯ 10 ತಾಲೂಕುಗಳಿಂದ ತಲಾ ಇಬ್ಬರು ನಿರ್ದೇಶಕರನ್ನು ನೇಮಿಸಿಕೊಂಡು ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದೇವೆ.ಮಠದ ವತಿಯಿಂದ ನೀಡುವ ಎಲ್ಲಾ ಕಾರ್ಯಕ್ರಮಗಳನ್ನು ಚಾಚು ತಪ್ಪದೆ ನಿರ್ವಹಿಸಲಾಗುವುದು ಎಂದರು.

ಇದೇ ವೇಳೆ ಚುಂಚಾದ್ರಿ ಮಹಿಳಾ ಪ್ರತಿಷ್ಠಾನದ ವತಿಯಿಂದ ಐದು ಜನ ಹಿರಿಯ ತಾಯಂದಿರಿಗೆ ಗೌರವ ಸಮರ್ಪಣೆ ಮಾಡಲಾಯಿತು. ವೇದಿಕೆಯಲ್ಲಿ ಚುಂಚಾದ್ರಿ ಮಹಿಳಾ ಪ್ರತಿಷ್ಠಾನದ ತುಮಕೂರು ಜಿಲ್ಲಾ ಉಪಾಧ್ಯಕ್ಷೆ ಯಶೋಧಮ್ಮ ವೀರಯ್ಯ, ಕಾರ್ಯದರ್ಶಿ ರೇಖಾ ಅನೂಪ್, ಖಜಾಂಚಿ ಜ್ಞಾನ್ಹವಿ, ಜಂಟಿ ಕಾರ್ಯದರ್ಶಿ ಅನಸೂಯ, ನಿರ್ದೇಶಕರಾದ ನವ್ಯ ಪ್ರಕಾಶ್, ಸುನಂದ, ಪಾವರ್ತಿ ಇನ್ನಿತರ ನಿರ್ದೇಶಕರು, ಸದಸ್ಯರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!