ಚಿಕ್ಕನಾಯಕನಹಳ್ಳಿ: ತಾಲೂಕು ಆಸ್ಪತ್ರೆಯಿಂದ ಬಿ.ಆರ್.ಅಂಬೇಡ್ಕರ್ಗೆ ಅಪಮಾನವಾಗಿದೆ. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಕನಿಷ್ಟ ಸೌಜನ್ಯಕಾದರು ಸಹ ಅಂಬೇಡ್ಕರ್ರವರ 130ನೇ ಜಯಂತಿಯಲ್ಲಿ ಭಾಗವಹಿಸದೆ ಉದಾಸಿನ ಮಾಡಿದ್ದರೆ ಆಸ್ಪತ್ರೆಯ ವೈದ್ಯಾಧಿಕಾರಿ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡ ಬೇವನಹಳ್ಳಿ ಚನ್ನಬಸವಯ್ಯ ಆರೋಪಿಸಿದ್ದಾರೆ.
ಅಂಬೇಡ್ಕರ್ ಜಯಂತಿಯಲ್ಲಿ ಕೇವಲ ನಾಲ್ಕು ಮಂದಿ ಸಿಬ್ಬಂದಿ ಮಾತ್ರ ಭಾಗವಹಿಸಿದ್ದು, ಉಳಿದ ಸಿಬ್ಬಂದಿ ಹಾಗೂ ವೈದ್ಯರು ಜಯಂತಿಯಲ್ಲಿ ಭಾಗವಹಿಸಿಲ್ಲ. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಸಹ ಕಾರ್ಯಕ್ರಮದಲ್ಲಿ ಇಲ್ಲ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಗೌರವ ತೋರದೆ ಅಪಮಾನ ಮಾಡಿದಂತಾಗಿದೆ ಎಂದು ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿಗಳ ವಿರುದ್ದ ಕಿಡಿಕಾರಿದ್ದಾರೆ.
ದಲಿತ ಮುಖಂಡ ಲಿಂಗದೇವರು ಮಾತನಾಡಿ, ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಸಣ್ಣ ಹಾರ ಹಾಕಿ, ದೀಪ ಬೆಳಗಿಸದೆ, ಕಾಟಚಾರ ರೀತಿಯಲ್ಲಿ ವರ್ತನೆ ತೋರಿದ್ದಾರೆ. ಆಸ್ಪತ್ರೆಯಲ್ಲಿ 80 ಜನ ಸಿಬ್ಬಂದಿ ಇದ್ದು, 11 ಜನ ವೈದ್ಯರು ಇದ್ದರು ಸಹ ಕೇವಲ ಮೂರು ಮತ್ತೊಂದು ಮಂದಿ ಸೇರಿ ಜಯಂತಿ ಆಚರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಜೆ.ಸಿಪುರ ಗೋವಿಂದರಾಜ್ ಸೇರಿದಂತೆ ಕೆಲ ದಲಿತ ಮುಖಂಡರುಗಳು ಇದ್ದರು.
ಕಾಟಾಚಾರಕ್ಕೆ ಅಂಬೇಡ್ಕರ್ ಜಯಂತಿ ಆಚರಣೆ ಆರೋಪ
Get real time updates directly on you device, subscribe now.
Prev Post
Comments are closed.