ವಸತಿ ಶಾಲೆಗಳಲ್ಲಿ ಸ್ಥಳೀಯರಿಗೆ ಅವಕಾಶ ನೀಡಿ

ಪ್ರಾಚಾರ್ಯರಿಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಸೂಚನೆ

37

Get real time updates directly on you device, subscribe now.


ಮಧುಗಿರಿ: ತಾಲೂಕಿನ ವಸತಿ ಶಾಲೆಗಳಲ್ಲಿ ಸ್ಥಳೀಯರಿಗೆ ಹೆಚ್ಚು ಅವಕಾಶ ನೀಡಬೇಕೆಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಪ್ರಾಚಾರ್ಯರಿಗೆ ಸೂಚಿಸಿದರು.
ಕಸಬ ವ್ಯಾಪ್ತಿಯ ಕೆ.ಸಿ.ರೊಪ್ಪ ಗ್ರಾಮದಲ್ಲಿನ ಮೊರಾರ್ಜಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರಾಂಶುಪಾಲರು ಮತ್ತು ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ವಸತಿ ಶಾಲೆಗಳಲ್ಲಿನ ಸುತ್ತ ಮುತ್ತದ ಗ್ರಾಮಗಳಲ್ಲಿನ ಮಕ್ಕಳ ದಾಖಲಾತಿಗೆ ಅವಕಾಶ ನೀಡುವುದರ ಜೊತೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು, ತಾಲೂಕಿನ ಕೆಲ ವಸತಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ, ಮೈದಾನದ ಕೊರತೆ, ಕೊಳವೆ ಬಾವಿ ಹಾಗೂ ಕಟ್ಟಡಗಳ ಕೊರತೆ ಇದ್ದು ಕೂಡಲೆ ಪಟ್ಟಿ ನೀಡಿದರೆ ಸರ್ಕಾರದ ವತಿಯಿಂದ ಅಗತ್ಯ ವಿರುವ ಅನುದಾನ ಬಿಡುಗಡೆ ಮಾಡಿಸಿ ಕೊಡಲಾಗುವುದು ಎಂದರು.

ವಸತಿ ಶಾಲೆಗಳಲ್ಲಿ ಗಣಕ ಯಂತ್ರಗಳ ಕೊರತೆ ಇದೆ ಕನಿಷ್ಟ 50 ಗಣಕ ಯಂತ್ರಗಳು ಅಗತ್ಯವಾಗಿವೆ, ಅಡುಗೆ ಸಿಬ್ಬಂದಿ, ಸಹಾಯಕರ ಹಾಗೂ ಕಳೆದ ವರ್ಷದಿಂದ ಸಮವಸ್ತ್ರ ಮತ್ತು ಷೂ, ಸ್ಟೇಷನರಿಗಳ ವಿತರಣೆಯು ಆಗಿಲ್ಲ, ಪೂರೈಕೆಯು ಆಗಿಲ್ಲ ಎಂದು ಪ್ರಾಚಾರ್ಯರು ಸಚಿವರಿಗೆ ಮಾಹಿತಿ ನೀಡಿದಾಗ ಮುಂದಿನ ದಿನಗಳಲ್ಲಿ ವಿಧಾನ ಸೌಧದಲ್ಲಿ ಚರ್ಚಿಸಿ ಅನುದಾನ ಬಿಡುಗಡೆ ಮಾಡಿಸಿ ಕೊಡಲಾಗುವುದು ಎಂದರು.
ಶಾಲೆಗಳಿಗೆ ಅಗತ್ಯವಿರುವ ಜಮೀನುಗಳ ಹಸ್ತಾಂತರಕ್ಕೆ ಬಿಇಓ ಅವರನ್ನು ಸಂಪರ್ಕಿಸ ಬೇಕು, ಗ್ರಾಮ ಪಂಚಾಯಿತಿಗಳಿಂದ ಪ್ರತ್ಯೇಕವಾಗಿ ವಸತಿ ಶಾಲೆಗಳಿಗೆ ಹೆಚ್ಚುವರಿಯಾಗಿ ನೀರಿನ ಸಂಪರ್ಕ ಕಲ್ಪಿಸಿ ಕೊಡುವಂತೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಮನವಿ ಮಾಡಿದರು, ಈ ಬಗ್ಗೆ ಇಒ ಮತ್ತು ಬಿಇಓ ಅವರು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಜೂ.19 ರಂದು ಎರಡು ದಿನಗಳ ಕಾಲ ಕೆಡಿಪಿ ಸಭೆ ನಡೆಯಲಿದ್ದು ಅಂದು ಶಾಲೆಗಳಲ್ಲಿನ ವಿದ್ಯಾರ್ಥಿಗಳ ಹಾಜರಾತಿ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುವುದು, ಗೈರು ಹಾಜರಾದ, ಶಾಲೆ ಬಿಟ್ಟ ವಿದ್ಯಾರ್ಥಿಗಳ ಮಾಹಿತಿ ಪಡೆದು ಕೊಂಡು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಉಪ ವಿಭಾಗಾಧಿಕಾರಿ ಗೊಟೂರು ಶಿವಪ್ಪ, ತಹಸೀಲ್ದಾರ್ ಸಿಗಬತ್ ವುಲ್ಲಾ, ಪಿಡಬ್ಲೂ ಯಡಿ ಎಇಇ ಮಂಜುನಾಥ್, ರಾಜಗೋಪಾಲ್, ಪ್ರಾಚಾರ್ಯರಾದ ಶ್ರೀರಾಮಪ್ಪ, ಧನಂಜಯ, ಮರಳುಸಿದ್ದೇಶ್ವರ, ಡಿ.ಆರ್.ರಮೇಶ್, ಸತೀಶ್, ಲಕ್ಷ್ಮಣ್ ಗೌಳೇಣ್ಣನವರ್, ಶ್ರೀನಿವಾಸ್.ಟಿ.ಐ, ಪರಮೇಶ್, ಶಿವಮೂರ್ತಿ, ಆರ್ ಐ ನಾಗೇಶ್ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!