ಮನುಷ್ಯನ ದುರಾಸೆಗೆ ಯಾವುದೇ ಮದ್ದಿಲ್ಲ

ಲೋಕ್ತಾಯುಕ್ತ ಹುದ್ದೆಗೆ ಬಂದಾಗ ಜನರ ಕಷ್ಟ ತಿಳಿಯಿತು: ಹೆಗಡೆ

12

Get real time updates directly on you device, subscribe now.


ತುಮಕೂರು: ಪ್ರತಿಯೊಬ್ಬರು ತೃಪ್ತಿ ಮತ್ತು ಮಾನವೀಯತೆ ಎಂಬ ಎರಡು ಮೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದು, ಜೀವನದ ಅಗತ್ಯಗಳನ್ನು ಪೂರೈಸಲು ಹಣ ಸಂಪಾದನೆ ಅನಿವಾರ್ಯವಾಗಿದೆ ಅಂದರೆ ಅದನ್ನು ಕಷ್ಟಪಟ್ಟು ಕಲಿತ ವಿದ್ಯೆಯಿಂದ ನ್ಯಾಯ ಮತ್ತು ರಾಜಾ ಮಾರ್ಗದಲ್ಲಿ ಸಂಪಾದನೆ ಮಾಡಬೇಕೆ ಹೊರತು ಇನ್ನೊಬ್ಬರ ಜೇಬಿನಿಂದ ಕಸಿಯಬಾರದು, ಬೇರೆಯವರ ಹೊಟ್ಟೆಯ ಮೇಲೆ ಹೊಡೆದು ಸಂಪಾದನೆಗೆ ಇಳಿಯಬಾರದು, ಸಮಾಜ ಕೆಟ್ಟು ಹೋಗಿದೆ ಎಂದು ಬರೀ ಕಾಲಹರಣ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ, ಸಮಾಜದಲ್ಲಿ ಬದಲಾವಣೆ ತರುವ ಶಕ್ತಿ ದೇಶದ ಯುವಕ, ಯುವತಿ ಯರಲ್ಲಿದೆ, ಅವರು ಮನಸ್ಸು ಮಾಡಿದರೆ, ಸಂಕಲ್ಪ ತೊಟ್ಟರೆ ಉತ್ತಮ ಸಮಾಜ ನಿರ್ಮಿಸಬಹುದು ಎಂದು ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆ ತಿಳಿಸಿದರು.

ನಗರದ ಶಿರಾರಸ್ತೆಯ ಶ್ರೀದೇವಿ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ಮತ್ತು ಪಾವಗಡದ ಶ್ರೀಶಾರದಾ ದೇವಿ ಕಣ್ಣಿನ ಆಸ್ಪತ್ರೆ, ಬೆಂಗಳೂರಿನ ನಯೋನಿಕ್ ಐಕೇರ್ ಟ್ರಸ್ಟ್, ಡಾ.ಚಂದ್ರಶೇಖರ್ ಸ್ಪೀಚ್ ಅಂಡ್ ಹಿಯರಿಂಗ್ ಇನ್ಸ್ಸ್ಟಿಟ್ಯೂಟ್, ಜಿಲ್ಲಾ ಆರೋಗ್ಯ ಕೇಂದ್ರ ಸಂಯುಕ್ತಾಶ್ರಯದಲ್ಲಿ ನಡೆದ ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ನೂತನ ಆರೋಗ್ಯ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಮನುಷ್ಯ ದುರಾಸೆಗೆ ಬಿದ್ದು ಶ್ರೀಮಂತನಾಗಲು ಹವಣಿಸುತ್ತಿದ್ದಾನೆ, ಸಮಾಜದ ಎಲ್ಲಾ ಸಮಸ್ಯೆಗಳಿಗೆ ಇದೇ ಮೂಲ, ಇದು ಅವನ ತಪ್ಪಲ್ಲ, ಸಮಾಜದ ತಪ್ಪು, ಜೈಲಿಗೆ ಹೋಗಿ ಬಂದವರನ್ನು ಹೂವಿನ ಹಾರ ಹಾಕಿ ಸನ್ಮಾನ ಮಾಡುವ ಸ್ಥಿತಿಯಲ್ಲಿ ನಾವಿದ್ದೇವೆ, ಇದು ಶೋಚನೀಯ, ಕ್ಯಾನ್ಸರ್, ಕೊರೊನಾ ಮಾರಕ ರೋಗಳಿಗೆ ಮದ್ದಿದೆ, ಅದರೆ ದುರಾಸೆಗೆ ಯಾವುದೇ ಮದ್ದಿಲ್ಲ, ಜೀವನದಲ್ಲಿ ಏನು ಆಗುವ ಮೊದಲು ಮಾನವನಾಗು, ಮಾನವೀಯತೆ ಬೆಳೆಸಿಕೊಳ್ಳದೆ ಹೋದರೆ ಜೀವನ ಸಾರ್ಥಕ ಆಗುವುದಿಲ್ಲ, ಲೋಕ್ತಾಯುಕ್ತ ಹುದ್ದೆಗೆ ಬರುವ ಮುನ್ನಾ ಕೂಪ ಮಂಡೂಕನ್ನಾಗಿದ್ದೆ, ಈ ಹುದ್ದೆಗೆ ಬಂದ ನಂತರವೇ ಜನರ ಕಷ್ಟ ಕಾರ್ಪಣ್ಯ ಅರಿವಾಯಿತು ಎಂದು ಹೇಳಿದರು.

ಪಾವಗಡದ ಶ್ರೀಶಾರದ ದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಸ್ವಾಮಿ ಜಪಾನಂದ ಜೀ ಮಾತನಾಡಿ, ವೈದ್ಯರೇ ದೇಶದ ಆಸ್ತಿ, ಭವಿಷ್ಯಪಾವಗಡ ತಾಲ್ಲೂಕಿನ ನುರಿತ ವೈದ್ಯರ ಸಹಾಯದಿಂದ 800 ಮಕ್ಕಳಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮೂಲಕ ಬೆಳಕು ಮೂಡಿಸಲಾಗಿದೆ, ಹಳ್ಳಿ ಜೀವನ ಇಂದು ಕಷ್ಟಕರವಾಗಿದೆ, ವೈದ್ಯರು ಕಡೆ ಪಕ್ಷ ಒಂದು ಅಥವಾ ಎರಡು ವರ್ಷವಾದರೂ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ಸಂಕಲ್ಪ ಮಾಡುವ ಹೃದಯವಂತಿಕೆ ಮೆರೆಯಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ನಿಯೋನಿಕ್ ಸಂಸ್ಥೆ ಮಕ್ಕಳ ಕಣ್ಣಿನ ದೋಷ ನಿವಾರಣೆಗಾಗಿ ಉತ್ತಮ ಕೆಲಸ ಮಾಡುತ್ತಿದೆ, ರಾಜ್ಯಾದ್ಯಂತ 13 ಕೇಂದ್ರ ಸ್ಥಾಪಿಸಿ ಮಕ್ಕಳಲ್ಲಿನ ಕಣ್ಣಿನ ದೋಷ ನಿವಾರಣೆ ಮಾಡಿ ಲಕ್ಷಾಂತರ ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ, ಇಂತಹ ಮಾನವೀಯ ಕೆಲಸಕ್ಕೆ ಶ್ರೀದೇವಿ ಮೆಡಿಕಲ್ ಕಾಲೇಜು ಸಂಶೋಧನಾ ಕೇಂದ್ರ, ಸದಾ ಬೆಂಬಲ- ಸಹಕಾರ ನೀಡಲಿದೆ ಎಂದರು.

ಪತ್ರಕರ್ತ ಎಸ್.ನಾಗಣ್ಣ, ಡಾ.ಎಸ್.ಆರ್. ಚಂದ್ರಶೇಖರ್, ಸಿ.ಎ. ಸುರೇಶ್ ಬಾಬು, ವಿ.ಎಸ್.ಶಾಂತವದನ, ಶ್ರೀದೇವಿ ವೈದ್ಯಕೀಯ ನಿರ್ದೇಶಕ ಡಾ.ರಮಣ್ ಎಂ ಹುಲಿನಾಯ್ಕರ್, ಎಂ.ಎಸ್.ಪಾಟೀಲ್, ಟ್ರಸ್ಟಿ ಡಾ.ಲಾವಣ್ಯ, ಡಾ.ಪ್ರಶಾಂತ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!