ಹಾವುಗಳ ಸಂರಕ್ಷಣೆ ಬಗ್ಗೆ ಜಾಗೃತಿ ಅಗತ್ಯ

14

Get real time updates directly on you device, subscribe now.


ತುಮಕೂರು: ಹಾವುಗಳು ಸೇರಿ ವನ್ಯ ಜೀವಿ ಸಂಪತ್ತನ್ನು ಸಂರಕ್ಷಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಬೇಕು ಎಂದು ವನ್ಯ ಜೀವಿ ಜಾಗೃತಿ ಸಂಸ್ಥೆಯ ಅಧ್ಯಕ್ಷ ಗುಂಡಪ್ಪ ಅಭಿಪ್ರಾಯಪಟ್ಟರು.
ನಗರದ ತುಮಕೂರು ವಿಶ್ವ ವಿದ್ಯಾಲಯ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಮಾನವ ಹಾವುಗಳ ಸಂಘರ್ಷ ನಿರ್ವಹಣೆ ಮತ್ತು ಉಪಶಮನ ಕುರಿತು ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿ ಪಾಲ್ಗೊಂಡು ಮಾತನಾಡಿ, ತರಬೇತಿ ಹೊಂದಿದವರು ಮಾತ್ರ ಹಾವುಗಳನ್ನು ಹಿಡಿಯಬೇಕು, ನಗರ ಪ್ರದೇಶದಲ್ಲಿ ಹಾವುಗಳನ್ನು ಕಂಡವರು ಭಯ ಪಡದೆ ತರಬೇತಿ ಹೊಂದಿದವರಿಗೆ ಮಾಹಿತಿ ನೀಡಬೇಕು, ಹಾವುಗಳನ್ನು ಹಿಡಿದವರು ಹಾವಿನ ಜೀವಕ್ಕೆ ಹಾನಿ ಮಾಡದೆ ಸುರಕ್ಷಿತ ಸ್ಥಳಕ್ಕೆ ಬಿಡಬೇಕು ಎಂದು ತಿಳಿಸಿದರು.

ಪ್ರಾದೇಶಿಕ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ.ಎಚ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಾವನ್ನು ಹಿಡಿಯುವ ದೃಶ್ಯಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡರೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

ಅನುಮತಿ ಇಲ್ಲದೆ ಅನಧಿಕೃತವಾಗಿ ಹಾವುಗಳನ್ನು ಹಿಡಿದವರಿಗೆ ಕಾನೂನು ಉಲ್ಲಂಘನೆಯಡಿ 3 ರಿಂದ 7 ವರ್ಷ ಶಿಕ್ಷೆ ವಿಧಿಸಲಾಗುವುದು, ಸಾಮಾನ್ಯವಾಗಿ ಮನೆಗಳಿಗೆ ಹಾವುಗಳು ಬಂದರೆ ನನಗೆ ಹಾವು ಹಿಡಿಯುವ ಕೌಶಲ್ಯ ತಿಳಿದಿದೆ ಎಂದು ಹಿಡಿಯಲು ಹೋಗುವಂತಿಲ್ಲ, ಮೊದಲು ತಮ್ಮ ವ್ಯಾಪ್ತಿಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿಕಾರ್ಜುನ್, ಮಹೇಶ್ ಮಾಲಗತ್ತಿ, ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಇದೆ.

Get real time updates directly on you device, subscribe now.

Comments are closed.

error: Content is protected !!