ತುಮಕೂರು-ಗುಬ್ಬಿಯಲ್ಲಿ ಕ್ರೂರಿ ಕೊರೊನಾ ಅಟ್ಟಹಾಸ

ಒಂದೇ ದಿನ 340 ಮಂದಿಗೆ ಸೋಂಕು ದೃಢ

549

Get real time updates directly on you device, subscribe now.

ತುಮಕೂರು: ಕ್ರೂರಿ ಕೊರೊನಾ ತನ್ನ ಅಟ್ಟಹಾಸ ಮೆರೆದಿದೆ. 2ನೇ ಅಲೆ ಜಿಲ್ಲೆಯಲ್ಲಿ ಅತೀ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ.
ಜಿಲ್ಲೆಯಾದ್ಯಂತ ಇಂದು 340 ಮಂದಿಗೆ ಕೋವಿಡ್-19 ದೃಢಪಟ್ಟಿದೆ. ತುಮಕೂರು ಹಾಗೂ ಗುಬ್ಬಿಯಲ್ಲಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದು ಗ್ರಾಮಾಂತರದಲ್ಲಿ ತನ್ನ ಅಟ್ಟಹಾಸ ಮೆರೆಯುತ್ತಿದೆ ಎನ್ನಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 28,402 ಏರಿಕೆ ಕಂಡಿದೆ. 2,064 ಸಕ್ರಿಯ ಪ್ರಕರಣಗಳ ಪೈಕಿ 198 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 132, ಚಿನಾಹಳ್ಳಿ 21, ಗುಬ್ಬಿ 44, ಕೊರಟಗೆರೆ 15, ಕುಣಿಗಲ್ 14, ಮಧುಗಿರಿ 30, ಪಾವಗಡ 22, ಶಿರಾ 22, ತಿಪಟೂರು 17, ತುರುವೇಕೆರೆಯಲ್ಲಿ 23 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಅನ್ಯ ಕಾರಣದಿಂದ ಕುಣಿಗಲ್ ನ ಮಹಿಳೆ (43) ಮೃತ ಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಸಾರ್ವಜನಿಕರಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಕಂಡು ಬರುತ್ತಿಲ್ಲ. ಇನ್ನೆರಡು ತಿಂಗಳಲ್ಲಿ ಇದರ ಪ್ರಭಾವ ದುಪ್ಪಟ್ಟಾಗುವ ಸಾಧ್ಯತೆ ಇದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಈ ಬಗ್ಗೆ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಎಚ್ಚೆತ್ತುಕೊಂಡಲ್ಲಿ ಮಾತ್ರ ಕೊರೊನಾ ತಡೆಗಟ್ಟಲು ಸಾಧ್ಯ ಎನ್ನಲಾಗಿದೆ.

Get real time updates directly on you device, subscribe now.

Comments are closed.

error: Content is protected !!