ಕುಣಿಗಲ್: ಅಪಘಾತದಲ್ಲಿ ರೌಡಿ ಶೀಟರ್ ಮೃತಪಟ್ಟಿದ್ದು, ಘಟನೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮೃತನ ಪೋಷಕರು, ಸಂಬಂಧಿಕರು ಅಪಘಾತವಲ್ಲ ಕೊಲೆ ಆಗಿದ್ದು ಪ್ರಕರಣ ತನಿಖೆ ನಡೆಸುವಂತೆ ಅಗ್ರಹಿಸಿದ ಹಿನ್ನೆಲೆಯಲ್ಲಿ ಅಪಘಾತ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಅಪಘಾತದ ನೆಪದಲ್ಲಿ ಕೊಲೆ ಮಾಡಿದ್ದ ಐವರನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಕಳೆದ ಸೋಮವಾರ ರಾತ್ರಿ ಕೊತ್ತಗೆರೆ ಹೋಬಳಿಯ ಬಾಗೇನಹಳ್ಳಿ ಗ್ರಾಮದ ಬಳಿ ರಾಮಚಂದ್ರ (29) ಎಂಬುವರಿಗೆ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ರಾಮಚಂದ್ರ ಮೃತಪಟ್ಟಿದ್ದ, ಘಟನೆ ಬಗ್ಗೆ ಮೃತನ ಪೋಷಕರು, ಸಂಬಂಧಿಕರು ಅನುಮಾನ ವ್ಯಕ್ತಪಡಿಸಿ ಇದು ಅಪಘಾತವಲ್ಲ, ಕೊಲೆ ಎಂದು ಆರೋಪಿಸಿ ಸೂಕ್ತ ತನಿಖೆ ನಡೆಸುವಂತೆ ಪೊಲೀಸರನ್ನು ಒತ್ತಾಯಿಸಿದ್ದರು. ಅಪಘಾತ ಪ್ರಕರಣ ದಾಖಲಿಸಿದ ಕುಣಿಗಲ್ ಪೊಲೀಸರು ನಂತರ ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ ಮೃತನಿಗೂ ಕೊತ್ತಗೆರೆ ಪಾಳ್ಯದ ಶ್ರೀನಿವಾಸ್ ಎಂಬುವನಿಗೂ ಹಳೆ ವೈಷಮ್ಯ ಇದ್ದು, ಕೆಲ ದಿನಗಳ ಹಿಂದೆ ನಡೆದ ಘಟನೆಯಲ್ಲಿ ರಾಮಚಂದ್ರ ಶ್ರೀನಿವಾಸ್ ಗೆ ಚಾಕುವಿನಿಂದ ಇರಿದಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ವಿವಿಧ ಪ್ರಕರಣದಲ್ಲಿದ್ದ ರಾಮಚಂದ್ರ ರೌಡಿಶೀಟರ್ ಆಗಿದ್ದ, ಸೋಮವಾರ ರಾಮಚಂದ್ರ ಬೈಕ್ನಲ್ಲಿ ಹೋಗುವಾಗ ಹಿಂಬಾಲಿಸಿಕೊಂಡು ಬಂದ ಶ್ರೀನಿವಾಸ್ ಮತ್ತು ತಂಡ ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದರು.
ಜಿಲ್ಲಾ ಎಸ್ಪಿ ಅಶೋಕ್ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆ ನಡೆಸಿದ ಡಿವೈಎಸ್ಪಿ ಓಂ ಪ್ರಕಾಶ್, ಸಿಪಿಐ ನವೀನ್ ಗೌಡ, ಮಾದ್ಯಾ ನಾಯಕ್, ಪಿಎಸೈ ಕೃಷ್ಣಕುಮಾರ್ ಮತ್ತು ಸಿಬ್ಬಂದಿ ಶ್ರೀನಿವಾಸ್ ಮತ್ತು ತಂಡದಲ್ಲಿದ್ದ ಶಿವರಾಮು, ಗುರುಮೂರ್ತಿ, ಲಕ್ಷ್ಮಣ ಎಂಬುವರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
Comments are closed.