ಜಾಗತಿಕ ತಾಪಮಾನ ಏರಿಕೆ ಅಪಾಯದ ಸೂಚನೆ

20

Get real time updates directly on you device, subscribe now.


ಕುಣಿಗಲ್: ತಾಲೂಕು,ಜಿಲ್ಲೆ,ರಾಜ್ಯ ಹಾಗೂ ದೇಶ ಸೇರಿದಂತೆ ಇಡೀ ಜಗತ್ತು ಹಿಂದೆಂದೂ ಕಾಣದಂತಹ ಜಾಗತಿಕ ತಾಪಮಾನ ಏರಿಕೆ ಕಾಣಬರುತ್ತಿರುವುದ ಆತಂಕಕಾರಿ ವಿಷಯವಾಗಿದೆ, ತಾಪಮಾನ ಏರಿಕೆ ನಿಯಂತ್ರಣಕ್ಕೆ ಹಸಿರುಕರಣ ವೃದ್ಧಿಗೊಳಿಸುವುದೆ ಪರಿಹಾರ ಎಂದು ಯಡೆಯೂರು ಗ್ರಾಪಂ ಪಿಡಿಒ ಚಂದ್ರಹಾಸ್ ಹೇಳಿದರು.

ತಾಲೂಕಿನ ಯಡಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಮಧುರೆ ಗ್ರಾಮದಲ್ಲಿ ಎಂ-ನರೇಗ ಯೋಜನೆಯಡಿ ಜಿಪಂ ಸಿಇಒ ಅವರ ನಿರ್ದೇಶನದಂತೆ ಹಸಿರು ಗ್ರಾಮ ಯೋಜನೆಯಡಿ ಗ್ರಾಮಪಂ ಚಾಯಿತಿಗೆ ಸಾವಿರ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ತಾಲೂಕಿನ ಇತಿಹಾಸದಲ್ಲೆ ಕಂಡೂ ಕೇಳರಿಯದಂತಹ ತಾಪಮಾನ ಕಳೆದ ತಿಂಗಳು ಕಾಣಿಸಿಕೊಂಡಿತ್ತು, ಇದೇ ರೀತಿ ಜಿಲ್ಲೆ, ರಾಜ್ಯ, ದೇಶದಲ್ಲೂ ಕಾಣಿಸಿಕೊಂಡು ತಾಪಮಾನ ಏರಿಕೆ ಕಾರಣದಿಂದ ಹಲವು ಮಂದಿ ಪ್ರಾಣ ಕಳೆದುಕೊಳ್ಳುವಂತಾಗಿ ರುವುದು ನಿಜಕ್ಕೂ ಖೇದಕರ, ಮುಂದಿನ ದಿನಗಳಲ್ಲಿ ಇಂತಹ ದುಸ್ಥಿತಿ ಬಾರದೆ ಇರಬೇಕೆಂದರೆ ಇಂದಿನಿಂದಲೇ ಎಲ್ಲರೂ ಸಜ್ಜಾಗಿ ಹಸಿರು ವೃದ್ಧಿಗೆ ಶ್ರಮಿಸಬೇಕು, ಇರುವ ಹಸಿರು ಸಂಪತ್ತನ್ನು ಬಳಸಿಕೊಂಡು ಮತ್ತಷ್ಟು ಹಸಿರು ಸಂಪತ್ತು ವೃದ್ಧಿಸಬೇಕಿದೆ, ಅಭಿವೃದ್ಧಿ ನೆಪದಲ್ಲಿ ಪರಿಸರಕ್ಕೆ ಹಾನಿ ಮಾಡುವುದು ಸರಿಯಲ್ಲ, ಪರಿಸರ ಕಡೆಗಣಿಸಿ ಮಾಡುವ ಅಭಿವೃದ್ಧಿ ನಿಜಕ್ಕೂ ಮಾರಕ ಎಂಬುದ ಅರಿತು ಪರಿಸರ ಸಮತೋಲನೆ ಜೊತೆಯಲ್ಲಿ ಅಭಿವೃದ್ಧಿ ಕೈಗೊಳ್ಳಬೇಕಿದೆ ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಯಡಿಯೂರು ಗ್ರಾಪಂ ಅಧ್ಯಕ್ಷೆ ಮಲ್ಲಿಗಮ್ಮ ಮಾತನಾಡಿ, ಕೇವಲ ಸಸಿ ನೆಟ್ಟರೆ ಸಾಲದು ಅದನ್ನು ಪೋಷಿಸಿ ಮರವನ್ನಾಗಿಸುವ ಮೂಲಕ ಬದ್ಧತೆ ಮೆರೆಯಬೇಕೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬೋರೇಗೌಡ, ಗ್ರಾಪಂ ಸದಸ್ಯರಾದ ಚೂಡಾಮಣಿ, ಲಕ್ಷ್ಮಣ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಲೋಕ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!