ವಾಟರ್ ಮನ್ ಗಳ ಸೇವೆ ಜನ ಸ್ನೇಹಿಯಾಗಿರಲಿ

88

Get real time updates directly on you device, subscribe now.

ಶಿರಾ: ಸಮಾಜಮುಖಿ ಚಿಂತನೆಯೊಂದಿಗೆ ಸೇವೆ ಮಾಡಿದಾಗ ಮಹಾತ್ಮ ಗಾಂಧೀಜಿ ಕಂಡ ಗ್ರಾಮ ಸ್ವರಾಜ್ ಪರಿಕಲ್ಪನೆ ಸಕಾರಗೊಳ್ಳಲಿದೆ, ಬೀದಿಗಳ ಸ್ವಚ್ಛತೆ ಹಾಗೂ ಜನರಿಗೆ ಕುಡಿಯುವ ನೀರು ಪೊರೈಕೆ ಮಾಡುವ ಹೊಣೆಗಾರಿಕೆ ಹೊತ್ತಿರುವ ಜಾಡುಮಾಲಿ ಹಾಗೂ ವಾಟರ್ ಮನ್ಗಳ ಸೇವೆ ಜನ ಸ್ನೇಹಿಯಾಗಿದ್ದರೆ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗಲಿದೆ, ಪಂಚಾಯತಿಯ ಶ್ರಮ ಜೀವಿಗಳ ಸೇವೆ ಮೆಚ್ಚುವಂತಾದ್ದು ಎಂದು ಹುಲಿಕುಂಟೆ ಗ್ರಾಪಂ ಅಧ್ಯಕ್ಷೆ ಅಕ್ಕಮ್ಮ ಹೇಳಿದರು.
ಶಿರಾ ತಾಲೂಕಿನ ಹುಲಿಕುಂಟೆ ಗ್ರಾಮ ಪಂಚಾಯತಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾಡುಮಾಲಿ, ವಾಟರ್ ಮನ್ ಸೇರಿದಂತೆ ಸಿಬ್ಬಂದಿಗೆ ಆಹಾರಧಾನ್ಯ ಕಿಟ್, ಬಟ್ಟೆಗಳನ್ನು ವಿತರಣೆ ಮಾಡಿ ಮಾತನಾಡಿ, ಕುಡಿಯುವ ನೀರು, ಸ್ವಚ್ಛತೆ, ಬೆಳಕು ಅತ್ಯವಶ್ಯಕವಾಗಿದ್ದು ಇಂತಹ ಸಮಸ್ಯೆಗಳ ದೂರು ಪಂಚಾಯತಿ ಕಚೇರಿವರೆಗೆ ಬರುವುದಕ್ಕಿಂತ ಮುಂಚೆ ಸಮಸ್ಯೆಗೆ ಪರಿಹಾರ ಕೊಡುವುದು ನಮ್ಮ ಹೊಣೆಗಾರಿಕೆಯಾಗಿದ್ದು ಜನರ ಆಶಯದಂತೆ ಕರ್ತವ್ಯ ಪಾಲನೆ ಮಾಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಎಂದರು.
ಸಮಾಜ ಸೇವಕ ಪಾಂಡುರಂಗಪ್ಪ ಮಾತನಾಡಿ ಕೊಳಚೆ ಸ್ವಚ್ಛ ಮಾಡುವುದು ಕಷ್ಟದ ಕೆಲಸವಾದರು, ಆದನ್ನು ಕಾಯಕ ಎಂಬಂತೆ ಮಾಡಿ ಜನ ಆರೋಗ್ಯ ಕಾಪಾಡುವ ಸ್ವಚ್ಛತಗಾರ ಸೇವೆ ಶ್ಲಾಘನೀಯ, ಕೊರೋನಾ 2ನೇ ಅಲೆ ಜನರಲ್ಲಿ ಆತಂಕ ಮೂಡಿಸಿದ್ದು ಜಾಗೃತಿ ಅತ್ಯಾವಶ್ಯಕ, ಈ ನಿಟ್ಟಿನಲ್ಲಿ 1500 ಮಾಸ್ಕ್ ಗಳನ್ನು ನನ್ನ ಸ್ವಂತ ಹಣದಲ್ಲಿ ಹುಲಿಕುಂಟೆ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಹಂಚಿಕೆ ಮಾಡಿದ್ದೇನೆ, ಬೇಸಿಗೆ ಉಷ್ಣಾಂಶ ಹೆಚ್ಚಾಗಿದ್ದು ನೀರನ್ನು ಮಿತವಾಗಿ ಬಳಸಿ ಜಲ ಸಂರಕ್ಷಣೆ ಮಾಡುವ ಕಡೆ ಹೆಚ್ಚು ಆದ್ಯತೆ ನೀಡುವಂತೆ ಜನರಲ್ಲಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪಂಚಾಯತಿ ಸಿಬ್ಬಂದಿಗೆ ಊಟ ಬಟ್ಟೆ, ಆಹಾರ ಧಾನ್ಯ ಕಿಟ್, 1 ತಿಂಗಳ ವೇತನ ನೀಡಿ ಯುಗಾದಿ ಸಂಭ್ರರಮಕ್ಕೆ ಕಾರಣರಾದ ಅಧ್ಯಕ್ಷೆ ಅಕ್ಕಮ್ಮ ಕಾರ್ಯವೈಖರಿ ಮೆಚ್ಚುಗೆ ಗಳಿಸಿತು.
ತಾಪಂ ಸದಸ್ಯೆ ವಸುಧಾ ತಿಪ್ಪೇಶ್ಗೌಡ, ಗ್ರಾಪಂ ಉಪಾಧ್ಯಕ್ಷ ಕೆ.ಎಲ್.ಗಿರೀಶ್, ಸದಸ್ಯರಾದ ಅಮೃತ, ರತ್ನಮ್ಮ, ರವಿಕುಮಾರ್, ಶಶಿಕಲಾ, ಆರ್.ಪುಟ್ಟರಾಜು, ಭಾರತಮ್ಮ, ಹೆಚ್.ಈರಣ್ಣ, ಚಿಕ್ಕರಂಗಪ್ಪ, ದೊಡ್ಡೇಗೌಡ, ಐಎಸ್ಎಸ್ ನೋಡಲ್ ಅಧಿಕಾರಿ ಕುಮಾರ್ನಾಯಕ್, ಪಿಡಿಓ ಕನಕಪ್ಪ, ಮಾಜಿ ಅಧ್ಯಕ್ಷ ವೈ.ಕೆ.ತಿಪ್ಪೇಸ್ವಾಮಿ, ತಾಂತ್ರಿಕ ಸಹಾಯಕ ವಿನಯ್, ಈರಣ್ಣ, ಈಶ್ವರ್ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!