ನಾಯಿ ಕಡಿದು 15 ಜನ ಆಸ್ಪತ್ರೆಗೆ

31

Get real time updates directly on you device, subscribe now.


ಶಿರಾ: ತಾಲೂಕಿನ ತಾವರೆಕೆರೆ ಮತ್ತು ಲಕ್ಷ್ಮಿಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಕ್ರವಾರ ಮತ್ತು ಶನಿವಾರ ಹಲವು ಜನರಿಗೆ ನಾಯಿ ಕಚ್ಚಿರುವ ವರದಿಯಾಗಿದ್ದು, ಕಡಿತಕ್ಕೊಳಗಾದ 15 ಜನರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಯಲಿನಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು, ರಸ್ತೆಗಳಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರ ಮೇಲೆ ಎರಗಿದ ಹುಚ್ಚು ತಗಲಿದೆ ಎಂದು ಶಂಕಿಸಲಾಗಿರುವ ನಾಯಿಯೊಂದು ದಾಳಿ ನಡೆಸಿ ಕಚ್ಚಿದ್ದು ಕೆಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಾವರೆಕೆರೆಯ ಗುಂಡಪ್ಪ, ಬಿಂದು, ರೇಣುಕಾರಾಧ್ಯ, ಲಕ್ಷ್ಮಮ್ಮ, ಮಂಜುನಾಥ, ಮಂಜಮ್ಮ, ಲಕ್ಷ್ಮಮ್ಮ, ಲಕ್ಷ್ಮಿಸಾಗರದ ರತ್ನಮ್ಮ, ರಮೇಶ್, ಲಕ್ಷ್ಮಿಕಾಂತ, ಮದ್ದಕ್ಕನಹಳ್ಳಿಯ ದೇವರಾಜು, ದ್ವಾರಾಳು ಗೊಲ್ಲರ ಹಟ್ಟಿಯ ರಮೇಶ್, ಬೋವಿ ಕಾಲೋನಿಯ ಹರ್ಷಿಣಿ, ಮೊಸರು ಕುಂಟೆಯ ಪಾಂಡುರಂಗಪ್ಪ, ಗೆಜ್ಜಿಗರಹಳ್ಳಿಯ ಸುರೇಶ್ ಎಂದು ಗುರುತಿಸಲಾಗಿದ್ದು, ಕೆಲವರಿಗೆ ತಾವರೆಕೆರೆ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ, ಕೆಲವರಿಗೆ ಶಿರಾ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಇಬ್ಬರು ಗಾಯಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ, ಜನರಲ್ಲಿ ಆತಂಕ ಉಂಟು ಮಾಡಿದ್ದ ನಾಯಿಯನ್ನು ಸಾರ್ವಜನಿಕರು ಬೇಟೆಯಾಡಿದ್ದಾರೆ ಎನ್ನಲಾಗಿದೆ.

Get real time updates directly on you device, subscribe now.

Comments are closed.

error: Content is protected !!