ಮುಖ್ಯಾಧಿಕಾರಿ ಹುದ್ದೆಗೆ ಇಬ್ಬರ ಪೈಪೋಟಿ

ವರ್ಗಾವಣೆ ಆದೇಶವಿಲ್ಲದೆ ಬಂದ ಶಿವಪ್ರಸಾದ್ ಗೆ ತರಾಟೆ

30

Get real time updates directly on you device, subscribe now.


ಕುಣಿಗಲ್: ಒಂದೆ ಹುದ್ದೆಗೆ ಇಬ್ಬರು ಅಧಿಕಾರಿಗಳು ಕರ್ತವ್ಯ ನಿರ್ವಹಣೆಗೆ ಆಗಮಿಸಿ ಕೆಲಕಾಲ ಗೊಂದಲದ ವಾತಾವರಣ ಉಂಟಾದ ಘಟನೆ ಮಂಗಳವಾರ ಪುರಸಭೆ ಕಾರ್ಯಾಲಯದಲ್ಲಿ ನಡೆದಿದೆ.
ಕುಣಿಗಲ್ ಪುರಸಭೆ ಮುಖ್ಯಾಧಿಕಾರಿಯಾಗಿ ಜಿ.ಮಂಜುಳಾ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ, ಲೋಕಸಭೆ ಚುನಾವಣೆಗೂ ಮುನ್ನ ಮುಖ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಶಿವಪ್ರಸಾದ್ ಚುನಾವಣೆ ನಿಮಿತ್ತ ಅಣ್ಣಗೇರಿ ಪುರಸಭೆ ಮುಖ್ಯಾಧಿಕಾರಿಯಾಗಿ ಅಣ್ಣಗೇರಿ ಮುಖ್ಯಾಧಿಕಾರಿಯಾಗಿದ್ದ ಗದ್ದಿಗೌಡರನ್ನು ಕುಣಿಗಲ್ ಪುರಸಭೆ ಮುಖ್ಯಾಧಿಕಾರಿಯಾಗಿ 2024ರ ಫೆ.17 ರಂದು ಸರ್ಕಾರ ಆದೇಶ ಮಾಡಿದ್ದು, ಆದೇಶದಲ್ಲಿ ಚುನಾವಣೆ ನಂತರ ಅಯಾ ಸ್ಥಾನಕ್ಕೆ ನಿಯೋಜನೆಗೊಳ್ಳುವಂತೆ ಸೂಚಿಸಲಾಗಿತ್ತು, ಶಿವಪ್ರಸಾದ್ ಕುಣಿಗಲ್ ನಿಂದ ವರ್ಗಾವಣೆ ಗೊಂಡಿದ್ದು ಗದ್ದಿಗೌಡರ್ ಕುಣಿಗಲ್ ಪುರಸಭೆಯಲ್ಲಿ ಅಧಿಕಾರ ಸ್ವೀಕರಿಸುವ ಮೊದಲೆ 20204ರ ಮಾ.24 ರಂದು ಮಂಜುಳಾ ಇವರನ್ನು ಪುರಸಭೆ ಮುಖ್ಯಾಧಿಕಾರಿಯಾಗಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ವರ್ಗ ಮಾಡಿ ಮುಂದಿನ ಆದೇಶದ ವರೆಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಸ್ಥಳ ನಿಯುಕ್ತಿಗೊಳಿಸಿತ್ತು, ಲೋಕಸಭೆ ಚುನಾವಣೆ ನಂತರ ಹಿಂದಿನ ಆದೇಶದಂತೆ ಶಿವಪ್ರಸಾದ್ ಮಂಗಳವಾರ ಬೆಳಗ್ಗೆ ಎಂಟು ಗಂಟೆ ಸಮಯದಲ್ಲೆ ಮುಖ್ಯಾಧಿಕಾರಿ ಕೊಠಡಿಗೆ ಆಗಮಿಸಿ ಮುಖ್ಯಾಧಿಕಾರಿ ಕುರ್ಚಿಯಲ್ಲಿ ಕುಳಿತರು.
ಶಿವಪ್ರಸಾದ್ ಆಗಮನದ ಹಿನ್ನೆಲೆಯಲ್ಲಿ ಅವರನ್ನು ಸ್ವಾಗತಿಸಲು ಪುರಸಭೆ ಸದಸ್ಯರು, ಇತರೆ ಕಾಂಗ್ರೆಸ್ ಮುಖಂಡರ ಭಾವಚಿತ್ರಗಳುಳ್ಳ ಫ್ಲೆಕ್ಸ್ ಗಳನ್ನು ಪಟ್ಟಣದ ವಿವಿಧೆಡೆ ಪುರಸಭೆ ಕಾರ್ಮಿಕರಿಂದ ಅವರ ಅಭಿಮಾನಿಗಳು ಕಟ್ಟಿಸಿದ್ದಲ್ಲದೆ, ಮುಖ್ಯಾಧಿಕಾರಿ ಕೊಠಡಿಯಲ್ಲಿ ಶಿವಪ್ರಸಾದ್ ಅವರನ್ನು ಅಭಿನಂದಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಎಂದಿನಂತೆ ಮುಖ್ಯಾಧಿಕಾರಿ ಮಂಜುಳಾ ಕಚೇರಿಗೆ ಆಗಮಿಸಿದಾಗ ಶಿವಪ್ರಸಾದ್ ಮುಖ್ಯಾಧಿಕಾರಿ ಕುರ್ಚಿಯಲ್ಲಿ ಕುಳಿತದ್ದಕ್ಕೆ ಆಕ್ಷೇಪಿಸಿ ಸರ್ಕಾರ ತಮಗೆ ಇನ್ನು ಯಾವುದೇ ವರ್ಗಾವಣೆ ಆದೇಶ ಮಾಡಿಲ್ಲ, ತಾವು ಕೆಎಂಎಸ್ ಕೇಡರ್ ಅಧಿಕಾರಿಯಾಗಿದ್ದು ಸೂಕ್ತ ಆದೇಶ ಇಲ್ಲದೆ, ನಮ್ಮಿಂದ ಅಧಿಕಾರ ಹಸ್ತಾಂತರ ಪಡೆಯಲು ಯಾವುದೇ ಅಧಿಕೃತ ದಾಖಲೆ ಇಲ್ಲದೆ ನೀವು ಕುರ್ಚಿಯಲ್ಲಿರುವುದು ತಪ್ಪು ಎಂದು ಅಸಮಧಾನ ವ್ಯಕ್ತಪಡಿಸಿದರು.
ಪುರಸಭೆ ಸದಸ್ಯ ನಾಗೇಂದ್ರ, ಶ್ರೀನಿವಾಸ್, ದೇವರಾಜ್, ಶಿವಪ್ರಸಾದ್ ಕ್ರಮ ಖಂಡಿಸಿ ತರಾಟೆಗೆ ತೆಗೆದುಕೊಂಡರಲ್ಲೆ ಸೌಜನ್ಯಕ್ಕೂ ಶಾಸಕರ ಗಮನಕ್ಕೆ ಮಾಹಿತಿ ನೀಡಿಲ್ಲ, ಅಲ್ಲದೆ ನಮ್ಮ ಅನುಮತಿ ಇಲ್ಲದೆ ಫೋಟೋಗಳನ್ನು ಫ್ಲೆಕ್ಸ್ ಹಾಕಿಸಿಕೊಂಡು ರಾಜಕೀಯ ಮಾಡುತ್ತಿದ್ದು ಕೆಲಸಕ್ಕೆ ರಾಜಿನಾಮೆ ನೀಡಿ ರಾಜಕೀಯಕ್ಕೆ ಬನ್ನಿ ಎಂದು ಸವಾಲು ಹಾಕಿ, ಹೊಸ ವರ್ಗಾವಣೆ ಆದೇಶ ತೋರಿಸಿ ಎಂದು ಪಟ್ಟು ಹಿಡಿದರು.
ಈ ವೇಳೆ ಯಾವುದೇ ಆದೇಶ ತೋರಿಸದ ಶಿವಪ್ರಸಾದ್ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಸೂಕ್ತ ಆದೇಶ ತರುವುದಾಗಿ ಹೊರಟ ನಂತರ ಪರಿಸ್ಥಿತಿ ತಿಳಿಗೊಂಡಿತು, ಬೆಳಗ್ಗೆ ಮುಖ್ಯಾಧಿಕಾರಿ ಅದ್ದೂರಿ ಸ್ವಾಗತಕ್ಕೆ ಫ್ಲೆಕ್ಸ್ ಕಟ್ಟಿದ್ದ ಪುರಸಭೆ ಸಿಬ್ಬಂದಿಯೆ ವಿವಿಧೆಡೆ ಕಟ್ಟಿದ್ದ ಫ್ಲೆಕ್ಸ್ ಗಳನ್ನು ತೆರವುಗೊಳಿಸಿದರು.

Get real time updates directly on you device, subscribe now.

Comments are closed.

error: Content is protected !!