ಪಾಲಿಕೆ ಆಯುಕ್ತರಿಂದ ನಗರದಲ್ಲಿ ಸಮಸ್ಯೆ ಪರಿಶೀಲನೆ

42

Get real time updates directly on you device, subscribe now.


ತುಮಕೂರು: ಮಹಾ ನಗರಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 33 ಮತ್ತು 34ರ ಪರಿಶೀಲನೆ ಕೈಗೊಂಡು ವಾರ್ಡ್ ಮಟ್ಟದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆ, ಅಹವಾಲುಗಳನ್ನು ಖುದ್ದಾಗಿ ಆಲಿಸಿ ಪರಿಹಾರ ನೀಡಲು ತಾಂತ್ರಿಕ, ನೀರು ಸರಬರಾಜು, ಯುಜಿಡಿ, ಆರೋಗ್ಯ ಮತ್ತುಕಂದಾಯ ವಿಭಾಗದ ಅಧಿಕಾರಿ ಸಿಬ್ಬಂದಿಗಳೊಂದಿಗೆ ಪಾಲಿಕೆ ಆಯುಕ್ತೆ ಅಶ್ವಜಾ ಭೇಟಿ ನೀಡಿದ್ದರು.
ಮಹಾ ನಗಪಾಲಿಕೆ ವ್ಯಾಪ್ತಿ ಯಎಸ್ ಎಲ್ ಎನ್ ನಗರ, ಕ್ಯಾತ್ಸಂದ್ರಗಳಲ್ಲಿನ ಯುಜಿಡಿ ದೂರುಗಳಿಗೆ ಸಂಬಂಧಿಸಿದಂತೆ ಯುಜಿಡಿ ವಿಭಾಗದಿಂದ ಕೈಗೊಳ್ಳಲಾಗುತ್ತಿರುವ ಕ್ರಮ ಪರಿಶೀಲಿಸಿ ಯುಜಿಡಿ ಪೈಪ್ಲೈನ್ ಸ್ವಚ್ಛತೆ ಕೈಗೊಳ್ಳುವ ಕಾರ್ಮಿಕರಿಗೆ ಅಗತ್ಯ ಸುರಕ್ಷಾ ಪರಿಕರಗಳನ್ನು ಧರಿಸಿ ಸಾರ್ವಜನಿಕ ದೂರುಗಳನ್ನು ಆದ್ಯತೆ ಮೇರೆಗೆ ಪರಿಹರಿಸಲು ಸೂಚಿಸಲಾಯಿತು.

ಇದೇ ವೇಳೆ ಸ್ಥಳೀಯ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಇನ್ನೂ ಯುಜಿಡಿ ಸಂಪರ್ಕ ಪಡೆಯದೇ ಇರುವ ಬಗ್ಗೆ ವಿಚಾರಿಸಿ ಸಂಪರ್ಕ ಪಡೆಯಲು ಇರುವ ಅಡೆತಡೆಗಳ ಬಗ್ಗೆ ಮಾಹಿತಿ ಪಡೆದು ಸಾರ್ವಜನಿಕರು ಸರಳವಾಗಿ ಯುಜಿಡಿ ಸಂಪರ್ಕ ಪಡೆಯುವಂತೆ ತುರ್ತು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಸದರಿ ವಾರ್ಡ್ಗಳ ಕಸ ವಿಲೇವಾರಿ, ಸ್ವಚ್ಛತೆ ವಿಷಯವಾಗಿ ಪರಿಶೀಲಿಸಿ ಕಸ ಸಂಗ್ರಹಣೆಯಲ್ಲಿನ ನ್ಯೂನ್ಯತೆ ಕುರಿತಂತೆ ಸಾರ್ವಜನಿಕರಿಂದ ಕೇಳಿ ಬಂದ ದೂರುಗಳನ್ನು ಪರಿಹರಿಸಲು ಆರೋಗ್ಯ ಶಾಖೆ ಸಿಬ್ಬಂದಿಗೆ ಸೂಚನೆ ನೀಡಿ ಪ್ರತಿ ದಿನ ಕಸ ಸಂಗ್ರಹಿಸಲು, ಬ್ಲಾಕ್ ಸ್ಪಾಟ್ ಗಳಲ್ಲಿ ಕಸ ಸಂಗ್ರಹವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಹಾಗೂ ಕೋಳಿ ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದಂತೆ ಅಂಗಡಿ ಮಾಲೀಕರಿಗೆ ತಿಳಿವಳಿಕೆ ನೀಡಲು ತಿಳಿಸಲಾಯಿತು ಹಾಗೂ ಕಸವನ್ನು ವೈಜ್ಞಾನಿಕವಾಗಿ ವಿಂಗಡಿಸಿ ಪಾಲಿಕೆ ಕಸದ ಆಟೋಗಳಿಗೆ ನೀಡಲು ಸ್ಥಳೀಯ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಯಿತು.

ಸದರಿ ವಾರ್ಡ್ಗಳಲ್ಲಿನ ಸಮುದಾಯ ಶೌಚಾಲಯಗಳ ಸ್ವಚ್ಛತೆಯ ಬಗೆಗಿನ ದೂರು ಕುರಿತು ಪರಿಶೀಲಿಸಿ, ಪ್ರತಿದಿನ ಶೌಚಾಲಯದ ಸ್ವಚ್ಛತೆಯನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಸಂಬಂಧಪಟ್ಟ ಸಿಬ್ಬಂದಿಗೆ ಸೂಚಿಸಲಾಯಿತು, ಸದರಿ ಶೌಚಾಲಯದಲ್ಲಿನ ಬೆಳಕಿನ ವ್ಯವಸ್ಥೆ ಕಲ್ಪಿಸಲು ಹಾಗೂ ಶೌಚಾಲಯದಲ್ಲಿ ನೀರು ಪೂರೈಕೆಯಲ್ಲಿನ ಲೋಪ ಸರಿಪಡಿಸಲು ವಾರ್ಡ್ನ ಇಂಜಿನಿಯರ್ ಗೆ ಆದೇಶಿಸಲಾಯಿತು.
ಎಸ್ ಎಲ್ ಎನ್ ನಗರದ ಪೇಟೆ ಬೀದಿಯಲ್ಲಿನ ಹಲವು ಅಂಗಡಿ ಮಳಿಗೆಗಳಿಗೆ ಭೇಟಿ ನೀಡಿ ಉದ್ದಿಮೆ ಪರವಾನಿಗೆ ಪಡೆದು ವಾಣಿಜ್ಯ ವಹಿವಾಟು ನಡೆಸಲು ತಿಳಿಸಿ, ಇನ್ನೂ ವಾಣಿಜ್ಯ ಉದ್ದಿಮೆ ಪಡೆಯದೇ ಇರುವ ಉದ್ದಿಮೆಗಳನ್ನು ಪರಿಶೀಲಿಸಿ ನಿಯಮಾನುಸಾರ ಕ್ರಮ ವಹಿಸಲು ವಾರ್ಡ್ ಆರೋಗ್ಯ ನಿರೀಕ್ಷಕರಿಗೆ ಸೂಚಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!