ಪವತಿ ಖಾತೆ ಆಂದೋಲನ ಯಶಸ್ಸಿಗೆ ಶ್ರಮಿಸಿ: ಡೀಸಿ

49

Get real time updates directly on you device, subscribe now.


ಕುಣಿಗಲ್: ಪವತಿ ಖಾತೆ ಆಂದೊಲನಕ್ಕೆ ತಾಲೂಕು ಆಡಳಿತ ಕ್ರಮ ಕೈಗೊಂಡು ಆಯಾ ಹೋಬಳಿಯಲ್ಲಿ ನಡೆಯುವ ಆಂದೋಲನದ ಬಗ್ಗೆ ಜನತೆಗೆ ಮಾಹಿತಿ ನೀಡಿ ಆಂದೋಲನ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಹೇಳಿದರು.
ತಾಲೂಕಿನ ಹುತ್ರಿದುರ್ಗಹೋಬಳಿಯ ಸಂತೇಪೇಟೆಯಲ್ಲಿ ಗುರುವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರ ಅಹವಾಲು ಸ್ವೀಕರಿಸಿ ಮಾತನಾಡಿ, ಪವತಿ ವಾರಸು ಖಾತೆ ಬಗ್ಗೆ ಕ್ರಮ ಕೈಗೊಳ್ಳಬೇಕು, ಅನಗತ್ಯವಾಗಿ ಜನರನ್ನು ಅಲೆದಾಡಿಸಬಾರದು, ಅವರಿಗೆ ಯಾವ ದಾಖಲೆ ತರಬೇಕೆಂದು ತಿಳುವಳಿಕೆ ನೀಡಿ ಆಯಾ ಹೋಬಳಿಗಳಲ್ಲಿ ಆಂದೋಲನದ ಮಾಹಿತಿ ನೀಡವಂತೆ ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು.

ತಾಲೂಕಿನ ವಿವಿಧೆಡೆಯಲ್ಲಿ ಆಶ್ರಯ ಯೋಜನೆ ಅಡಿಯಲ್ಲಿ ನಿವೇಶನ ವಿತರಿಸಲು ಮತ್ತಷ್ಟು ಜಾಗ ಗುರುತಿಸುವಂತೆ ತಹಶೀಲ್ದಾರ್ ವಿಶ್ವನಾಥ್ ಅವರಿಗೆ ಸೂಚಿಸಿದರು, ತಹಶೀಲ್ದಾರ್ ವಿಶ್ವನಾಥ್, 73 ಕಡೆಗಳಲ್ಲಿ 188 ಎಕರೆ ಏಜ್ಞಡಿಕ್ಷಿ ಗುರುತಿಸಿ 51 ಕಡೆಗಳಲ್ಲಿ ಜಾಗ ಹಸ್ತಾಂತರಿಸಲಾಗಿದೆ, ಬಾಕಿ ಇರುವೆಡ ಜಾಗ ಗುರುತಿಸುವ ಕೆಲಸವಾಗುತ್ತಿದೆ, ಹೆಚ್ಚುವರಿಯಾಗಿ ನೂರು ಎಕರೆ ಜಾಗ ಗುರುತಿಸಿ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಗ್ರಾಮಸ್ಥರು ಹತ್ತು ತಿಂಗಳಿನಿಂದ ಸಂದ್ಯಾ ಸುರಕ್ಷಾ ಯೋಜನೆಯಡಿ ಮಾಸಾಶನ ನೀಡಿಲ್ಲ, ತಾಲೂಕು ಕಚೇರಿಯಲ್ಲಿ ಯಾವುದೇ ಸಮಸ್ಯೆಗೆ ಸ್ಪಂದಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದಾಗ, ಜಿಲ್ಲಾಧಿಕಾರಿ ಸಮಸ್ಯೆ ಬಗ್ಗೆ ಅರ್ಜಿ ಸ್ವೀಕರಿಸಿ ಸಂಜೆಯೊಳಗೆ ಸಮಸ್ಯೆ ಬಗೆಹರಿಸಿ ವಿವರ ನೀಡಬೇಕು ಎಂದು ಗ್ರೇಡ್-2 ತಹಶೀಲ್ದಾರ್ ನಂದೀಶ್ ಗೆ ಸೂಚನೆ ನೀಡಿದರು, ಸ್ಮಶಾನ ಒತ್ತುವರಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.
ನರೇಗ ಯೋಜನೆಯಡಿ ಶೌಚಾಲಯಕ್ಕೆ, ದನದ ಕೊಟ್ಟಿಗೆ ಕಟ್ಟಲು ಕ್ರಿಯಾ ಯೋಜನೆ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಸಮಸ್ಯೆ ತೋಡಿಕೊಂಡು ಶೌಚಾಲಯ ಕಟ್ಟಿ ಹಲವು ವರ್ಷ ಕಳೆದರೂ ಅನುದಾನ ನೀಡಿಲ್ಲ, ದನದ ಕೊಟ್ಟಿಗೆ ನಿರ್ಮಿಸಿದ್ದಕ್ಕೂ ಅನುದಾನ ನೀಡಿಲ್ಲ ಎಂದು ಅಳಲು ತೋಡಿಕೊಂಡ ಹಿನ್ನೆಲೆಯಲ್ಲಿ ಜಿಪಂ ಡಿ.ಎಸ್.ನರಸಿಂಹಮೂರ್ತಿ, ತಾಪಂ ಇಒ ಜೋಸೆಫ್, ಪಿಡಿಒ ರಾಜಶೇಖರ್ ಅವರೊಂದಿಗೆ ಚರ್ಚಿಸಿದ್ದು ಈ ವೇಳೆ ಶಾಸಕ ಡಾ.ರಂಗನಾಥ ಅಸಮಧಾನ ವ್ಯಕ್ತಪಡಿಸಿ ರೈತರಿಗೆ ಸಮಸ್ಯೆ ಸೃಷ್ಟಿಸುವುದು ಅಧಿಕಾರಿಗಳ ಕಾರ್ಯ ವೈಖರಿ ಎಂದು ಇಒ ಅವರನ್ನು ತರಾಟೆಗೆ ತೆಗೆದುಕೊಂಡರು.
ಈಬಗ್ಗೆ ಕೂಡಲೆ ಪರಿಶೀಲಿಸಿ ಎರಡು ದಿನದೊಳಗೆ ಬಾಕಿ ಇರುವ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದರು.

Get real time updates directly on you device, subscribe now.

Comments are closed.

error: Content is protected !!