ತುಮಕೂರು: ಯೋಗವು ದೇಹ ಹಾಗೂ ಮನಸ್ಸುಗಳ ನಡುವೆ ಸೇತುವೆಯಂತೆ ಕಾರ್ಯ ನಿರ್ವಹಸಲಿದ್ದು, ದಿನಂಪ್ರತಿ ಯೋಗ ರೋಗಗಳಿಂದ ದೂರವಿಡುವುದಷ್ಟೇ ಅಲ್ಲದೆ ಮಾನಸಿಕ ನೆಮ್ಮದಿಗೂ ಕಾರಣವಾಗುತ್ತದೆ ಎಂದು ಸಿದ್ಧಗಂಗಾ ವೈದ್ಯಕೀಯ ಮಹಾ ವಿದ್ಯಾಲಯದ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು.
ನಗರದ ಸಿದ್ಧಗಂಗಾ ವೈದ್ಯಕೀಯ ಮಹಾ ವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ ವತಿಯಿಂದ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿ ನಾವು ನಮ್ಮ ಆರ್ಥಿಕ ಶಕ್ತಿ ಹೆಚ್ಚಿಸಲು ದಿನವಿಡೀ ದುಡಿಯುತ್ತೇವೆ, ಆದರೆ ಮಾನಸಿಕ ಶಕ್ತಿ, ದೈಹಿಕ ಶಕ್ತಿ ಹೆಚ್ಚಿಸಿಕೊಳ್ಳಲು ದಿನಕ್ಕೆ 20 ನಿಮಿಷಗಳನ್ನು ಯೋಗಕ್ಕಾಗಿ ಮೀಸಲಿಡದಿರುವುದು ವಿಪರ್ಯಾಸ, ಯೋಗ ನಿತ್ಯ ಜೀವನದಲ್ಲಿ ಅನಿವಾರ್ಯ ಆಗಬೇಕೇ ವಿನಃ ಆಯ್ಕೆಯಾಗಬಾರದು ಎಂದರು.
ಸಿದ್ಧಗಂಗಾ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯರಾದ ಡಾ.ಶಾಲಿನಿ ಮಾತನಾಡಿ, ಉತ್ತಮ ಜೀವನ ಶೈಲಿಯೇ ಯಶಸ್ವಿ ಬದುಕಿನ ಕೀಲಿಕೈ, ಹಾಗಾಗಿ ವೈದ್ಯಕೀಯ ವಿದ್ಯಾರ್ಥಿಗಳು ಯೋಗವನ್ನು ಬದುಕಿನ ಭಾಗವಾಗಿಸಿ ಕೊಂಡರೆ ಸುಸ್ಥಿರ ಮನಸ್ಸು ಹಾಗೂ ದೈಹಿಕ ಶಕ್ತಿಯ ಜೊತೆಗೆ ಪರಿಪೂರ್ಣ ಮಾನಸಿಕ ಆರೋಗ್ಯ ನಿಮ್ಮದಾಗಲಿದೆ ಎಂದರು.
ಯೋಗ ಪಟುಗಳಾದ ರಾಜನ್ ಹಾಗೂ ಚಿರಂತನ್ ಯೋಗ ಪ್ರಾತ್ಯಕ್ಷಿತೆ ನಡೆಸಿಕೊಟ್ಟರು, ಸಿದ್ಧಗಂಗಾ ಸೂಪರ್ ಸ್ಪೆಷಾಲಿಟಿ ವಿಭಾಗದ ನಿರ್ದೇಶಕ ಡಾ.ಭಾನುಪ್ರಕಾಶ್, ವೈದ್ಯಕೀಯ ಅಧೀಕ್ಷಕ ಡಾ.ನಿರಂಜನಮೂರ್ತಿ, ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಡಾ.ವೀಣಾ ಪರಮೇಶ್, ವೈದ್ಯರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
Comments are closed.