ಭಾಷಣಗಳಿಂದಷ್ಟೇ ಕನ್ನಡ ಉಳಿಯುವುದಿಲ್ಲ

13

Get real time updates directly on you device, subscribe now.


ತುಮಕೂರು: ಘೋಷಣೆ ಭಾಷಣಗಳಿಂದಷ್ಟೇ ಕನ್ನಡ ಉಳಿಯುವುದಿಲ್ಲ, ಬಳಕೆಯಿಂದ ಕನ್ನಡವನ್ನು ಬೆಳೆಸಬೇಕು, ಅಂತರ್ಜಾಲದಲ್ಲಿ ಅಗತ್ಯ ಮಾಹಿತಿ ಕನ್ನಡದಲ್ಲಿ ಸಿಗುವಂತಾಗಬೇಕು.ಕನ್ನಡದಲ್ಲಿ ಮಾಹಿತಿ ಸಾಹಿತ್ಯ ನಿರ್ಮಾಣವಾಗಬೇಕುಎಂದುಕನ್ನಡದ ಮೊದಲ ಅಂತರ್ಜಾಲ ಪತ್ರಿಕೆಯ ಸಂಪಾದಕ ಡಾ.ಯು.ಬಿ.ಪವನಜ ತಿಳಿಸಿದರು.

ತುಮಕೂರು ವಿವಿ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ವಿಕಿ ಪೀಡಿಯಾ ಫೌಂಡೇಶನ್ ಹಾಗೂ ಕರಾವಳಿ ವಿಕಿ ಪೀಡಿಯನ್ಸ್ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎರಡು ದಿನಗಳ ಕನ್ನಡ ವಿಕಿಪೀಡಿಯಾ ಸಮುದಾಯ ಬೆಳವಣಿಗೆ ಮತ್ತು ಅನುವಾದ ಕಾರ್ಯಾಗಾರದಲ್ಲಿ ಮಾತನಾಡಿ, ಅಂತರ್ಜಾಲದಲ್ಲಿ ವಿಜ್ಞಾನ ತಂತ್ರಜ್ಞಾನ ಮಾಹಿತಿ ದೊರೆಯುವುದು ಅಗತ್ಯ, ಕನ್ನಡ ಭಾಷೆಗೆ ಜಗತ್ತಿನ ಜ್ಞಾನ ತರಬೇಕು, ಬರವಣಿಗೆಯ ಶೈಲಿ, ವ್ಯಾಕರಣ, ಸಂಶೋಧನಾ ಕೌಶಲ್ಯ ಉತ್ತಮಗೊಳಿಸಿ, ವಿಮರ್ಶಾತ್ಮಕ ಆಲೋಚನೆಗಳನ್ನು ತೀಕ್ಷ್ಣಗೊಳಿಸಿಕೊಳ್ಳುವುದರ ಮೂಲಕ ನಮ್ಮ ಭಾಷೆ ಹಾಗೂ ಸಂಸ್ಕೃತಿ ಉಳಿಸಬಹುದು ಎಂದು ತಿಳಿಸಿದರು.

ಜೂನ್ 2003ರಲ್ಲಿ ಪ್ರಾರಂಭವಾದ ಕನ್ನಡ ವಿಕಿಪೀಡಿಯಾದಲ್ಲಿ ಪ್ರಸ್ತುತ 30 ಸಾವಿರಕ್ಕೂ ಹೆಚ್ಚು ಲೇಖನಗಳಿವೆ, ಸಕ್ರಿಯ ಸಂಪಾದಕರು 65 ಮಂದಿ ಇದ್ದಾರೆ, ಪ್ರತಿ ತಿಂಗಳು ಸುಮಾರು70 ಲಕ್ಷ ಮಂದಿ ಕನ್ನಡ ವಿಕಿಪೀಡಿಯಾ ವೀಕ್ಷಿಸುತ್ತಾರೆ, ಇಂಗ್ಲಿಷ್ ಭಾಷೆಯಲ್ಲಿ ಒಟ್ಟು 60 ಲಕ್ಷ ಲೇಖನಗಳಿವೆ, ತಿಂಗಳಿಗೆ ಸುಮಾರು 4000 ಸಂಪಾದನೆಗಳನ್ನು ನಾವು ಕಾಣಬಹುದು, ಈ ಸಂಖ್ಯೆ ಹೆಚ್ಚಿಸಿದಷ್ಟೂ ಅಂತರ್ಜಾಲದಲ್ಲಿ ಕನ್ನಡಗಟ್ಟಿ ಯಾಗುತ್ತಾ ಹೋಗುತ್ತದೆ, ಕನ್ನಡವನ್ನು ಬೆಳೆಸಿದಂತಾಗುತ್ತಾದೆ ಎಂದರು.

ಸಂಪನ್ಮೂಲ ವ್ಯಕ್ತಿ ಪ್ರಜ್ಞಾ ದೇವಾಡಿಗ, ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕ ಡಾ.ಸಿಬಂತಿ ಪದ್ಮನಾಭ.ಕೆ.ವಿ, ಉಪನ್ಯಾಸಕರಾದ ಡಾ.ಪೃಥ್ವಿರಾಜ.ಟಿ, ಕೋಕಿಲ.ಎಂ.ಎಸ್, ವಿನಯ್ ಕುಮಾರ್.ಎಸ್.ಎಸ್, ತಾಂತ್ರಿಕ ಸಹಾಯಕ ಅಭಿಷೇಕ್.ಎಂ.ವಿ. ಇದ್ದರು.

Get real time updates directly on you device, subscribe now.

Comments are closed.

error: Content is protected !!