ಬಡವರಿಗೆ, ಅಶಕ್ತರಿಗೆ ವೈದ್ಯಕೀಯ ಸೇವೆ ಸಿಗಲಿ

16

Get real time updates directly on you device, subscribe now.


ತುಮಕೂರು: ಬಡವರಿಗೆ, ಅಶಕ್ತರಿಗೆ ವೈದ್ಯಕೀಯ ಸೇವೆ ಸಲ್ಲಿಸುವುದೇ ಆರೋಗ್ಯ ದಾಸೋಹದ ನಿಜವಾದ ಅರ್ಥ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಮಹಾ ಸ್ವಾಮೀಜಿ ತಿಳಿಸಿದರು.
ಸಿದ್ಧಗಂಗಾ ಆಸ್ಪತ್ರೆ ಹಾಗೂ ಅಸೋಸಿಯೇಶನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ ತುಮಕೂರು ಶಾಖೆ ಸಹಯೋಗದಲ್ಲಿ ನಡೆದ ಉಚಿತ ಶಸ್ತ್ರಚಿಕಿತ್ಸೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಉಚಿತ ಶಸ್ತ್ರಚಿಕಿತ್ಸೆಯಂತಹ ಶಿಬಿರಗಳು ಅರ್ಹರಿಗೆ ತಲುಪಿ ಅವರ ಜೀವನದಲ್ಲಿ ಬದಲಾವಣೆ ಹಾಗೂ ಭರವಸೆ ಮೂಡುವಂತೆ ಮಾಡಬೇಕು, ವೈದ್ಯರು ದೇವರಾಗುವುದಷ್ಟೇ ಅಲ್ಲ, ರೋಗಿಗಳೂ ಕೂಡ ವೈದ್ಯರಿಗೆ ದೇವರಂತೆ ಕಾಣಬೇಕು ಎಂದರು.

ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ಮಾತನಾಡಿ, ಉಚಿತ ಚಿಕಿತ್ಸೆ ನೀಡಬೇಕೆನ್ನುವ ಸಿದ್ಧಲಿಂಗ ಮಹಾ ಸ್ವಾಮೀಜಿಯವರ ಪ್ರೇರಣಾ ಶಕ್ತಿ, ಇದೇ ಡಾ.ಶಿವಕುಮಾರ ಸ್ವಾಮೀಜಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುತ್ತಿದ್ದು, ಪ್ರತಿವರ್ಷ ವಿಭಾಗವಾರು ಇಂತಹ ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಿ ಆರೋಗ್ಯ ಕ್ಷೇತ್ರದಲ್ಲಿ ಸೇವೆಗೆ ನಿಜವಾದ ಅರ್ಥ ಕಲ್ಪಿಸುವುದು ನಮ್ಮ ಉದ್ದೇಶ, ಶ್ರೀದೇವಿ ಹಾಗೂ ಸಿದ್ಧಾರ್ಥ ವೈದ್ಯಕೀಯ ಕಾಲೇಜುಗಳ ಶಸ್ತ್ರ ಚಿಕಿತ್ಸಕರೂ ಕೂಡ ಬೃಹತ್ ಶಿಬಿರದ ಭಾಗವಾಗಿರುವುದು ಸಂತಸ ತಂದಿದೆ ಎಂದರು.

ವೈದ್ಯಕೀಯ ಕಾಲೇಜು ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ಚಂದ್ರಶೇಖರ್ ಮಾತನಾಡಿ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದ 25 ಕ್ಕೂ ಹೆಚ್ಚು ರೋಗಿಗಳಿಗೆ ಔಷಧಿಗಳನ್ನೂ ಒಳಗೊಂಡು ಉಚಿತ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದು, ಅಸೋಸಿಯೇಷನ್ ಆಫ್ ಸರ್ಜನ್ಸ್ ಸಂಸ್ಥೆಯ ಸಹಕಾರ ಮುಖ್ಯವಾಗಿದೆ, ಒಟ್ಟು 30 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸಕರು ಸೇರಿ 100 ಕ್ಕೂ ಹೆಚ್ಚು ವೈದ್ಯಕೀಯ ತಂಡದಿಂದ ಇಡೀ ದಿನ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದರು.

ಸಿದ್ಧಗಂಗಾ ವೈದ್ಯಕೀಯ ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಡಾ.ಶಾಲಿನಿ, ವೈದ್ಯಕೀಯ ಅಧೀಕ್ಷಕ ಡಾ.ನಿರಂಜನ ಮೂರ್ತಿ, ಎ ಎಸ್ ಐ ತುಮಕೂರು ಶಾಖೆಯ ಅಧ್ಯಕ್ಷ ಡಾ.ಪ್ರಶಾಂತ್, ಕಾರ್ಯದರ್ಶಿ ಡಾ.ಚೇತನ್, ಡಾ.ಸಿ.ವಿ.ಸ್ವಾಮಿ, ಡಾ.ಭೂಷಣ್, ಡಾ.ಗುರುಕಿರಣ್, ಸಿಇಓ ಡಾ.ಸಂಜೀವ ಕುಮಾರ್, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!