ಕುಣಿಗಲ್: ಬ್ಯಾಂಕ್ ಗೆ ಹಣ ಕಟ್ಟಲು ಬಂದ ಬಾರ್ ಕ್ಯಾಷಿಯರ್ ಗಮನ ಬೇರೆಡೆ ಸೆಳೆದು ಹಾಡ ಹಗಲೆ ಲಕ್ಷಾಂತರ ರೂ. ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಪಟ್ಟಣದ ಜನ ಜನಿಬಿಡ ಪ್ರದೇಶವಾದ ಕೆಆರ್ ಎಸ್ ಅಗ್ರಹಾರದ ಎಸ್ ಬಿ ಐ ಬ್ಯಾಂಕ್ ಮುಂಭಾಗ ಮಂಗಳವಾರ ಮಧ್ಯಾಹ್ನ ನಡೆದಿದೆ.
ಮಂಗಳವಾರ ಮಧ್ಯಾಹ್ನ ಹನ್ನೆರಡು ಗಂಟೆ ಸಮಯದಲ್ಲಿ ಅಗ್ರಹಾರದ ಜಿಕೆ ಬಾರ್ ನ ಕ್ಯಾಷಿಯರ್ ನಂದೀಶ್ ಎಂಬಾತ ಬ್ಯಾಂಕ್ ಗೆ ಹಣ ಕಟ್ಟಲು ಆಗಮಿಸಿದ್ದು, ಹಣವನ್ನು ಬೈಕ್ ನ ಟ್ಯಾಂಕ್ ನ ಮೇಲುಭಾಗದಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿ ಇಟ್ಟಿದ್ದರು, ಮೊದಲಿಗೆ ಹಣ ಕಟ್ಟಲು ಬ್ಯಾಂಕ್ ಗೆ ತೆರಳಿದ್ದು, ಬ್ಯಾಂಕ್ ನಲ್ಲಿ ವಿಪರೀತ ಜನಸಂದಣಿ ಇದ್ದ ಕಾರಣ ಹಣ ಕಟ್ಟುವ ಯಂತ್ರದಲ್ಲಿ ಹಣ ಕಟ್ಟಲಾಗದೆ ಬೇರೊಂದು ಶಾಖೆಯಲ್ಲಿ ಕಟ್ಟಲು ಹೊರ ಬಂದು ಬೈಕ್ ನ ಟ್ಯಾಂಕ್ ಮೇಲೆ ಕವರ್ ಇಟ್ಟಿದ್ದರು ಎನ್ನಲಾಗಿದೆ. ಇದೇ ವೇಳೆ ವ್ಯಕ್ತಿಯೊಬ್ಬ ಐನೂರು ರೂ. ನೋಟು ಕೆಳಗೆ ಬಿಸಾಕಿ, ಐನೂರ ನೋಟು ಬಿದ್ದಿದೆ ಎಂದು ಕ್ಯಾಷಿಯರ್ ಗಮನ ಸೆಳೆದಿದ್ದು ಕ್ಯಾಷಿಯರ್ ನೋಟು ತೆಗೆದುಕೊಳ್ಳಲು ಬಗ್ಗಿದಾಗ ಮತ್ತೋರ್ವ ಹಣದ ಕವರ್ ನ್ನು ಎಳೆದುಕೊಂಡು ಓಡಲು ಮುಂದಾದಾಗ ಕವರ್ ನಿಂದ ಕೆಲ ಹಣದ ಕಂತೆಗಳು ಕೆಳಗೆ ಬಿದ್ದಿದ್ದು, ಗಾಬರಿಗೊಂಡು ದರೋಡೆ ಕೋರರು ಕವರ್ ನಲ್ಲಿದ್ದ ಹಣವನ್ನೆಷ್ಟೆ ದೋಚಿ ಪರಾರಿಯಾಗಿದ್ದಾರೆ, ಕವರ್ ನಲ್ಲಿ 3.37 ಲಕ್ಷರೂ. ಕಳುವಾಗಿದೆ ಎಂದು ಕ್ಯಾಷಿಯರ್ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಕುಣಿಗಲ್ ಸಿಪಿಐ ನವೀನ್ ಗೌಡ, ಪಿಎಸೈ ಕೃಷ್ಣಕುಮಾರ್ ಸಿಬ್ಬಂದಿ ಸಿಸಿಟಿವಿ ದೃಶ್ಯಾವಳಿ ಆಧರಿಸಿ ದರೋಡೆಕೋರರ ಪತ್ತೆಗೆ ಮುಂದಾಗಿದ್ದಾರೆ.
Comments are closed.