ಗಂಡನ ಹತ್ಯೆ ಮಾಡಿದ ಪತ್ನಿಗೆ ಶಿಕ್ಷೆ

41

Get real time updates directly on you device, subscribe now.


ಮಧುಗಿರಿ: ಸಂಸಾರದಲ್ಲಿ ನಿರಂತರವಾಗಿ ಗಲಾಟೆ ಮಾಡುತ್ತಿದ್ದ ಗಂಡನ ಮೇಲೆ ಪೆಟ್ರೋಲ್ ಸುರಿದು ಹತ್ಯೆ ಮಾಡಿದ್ದ ಪತ್ನಿಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿನ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಯಾದವ ಕರಕೇರ ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪಾವಗಡ ತಾಲೂಕಿನ ವೆಂಕಟಮ್ಮನ ಹಳ್ಳಿ ಗ್ರಾಮದ ಮುತ್ಯಾಲಮ್ಮ (32) ತನ್ನ ಗಂಡನನ್ನು ಹತ್ಯೆ ಮಾಡಿ ಜೀವಾವಧಿ ಶಿಕ್ಷೆಗೊಳಗಾದವರು, ಇವರು 2020 ಜನವರಿ 16 ರಂದು ಸಂಜೆ 6 ಗಂಟೆ ಸಮಯದಲ್ಲಿ ವೆಂಕಟಮ್ಮನಹಳ್ಳಿ ಗ್ರಾಮದಲ್ಲಿ ಗಂಗಾಧರ ಸಂಸಾರದ ವಿಚಾರದಲ್ಲಿ ಪ್ರತಿದಿನ ತನ್ನ ಪತ್ನಿ ಮುತ್ಯಾಲಮ್ಮಳನ್ನು ಹೊಡೆಯುವುದು, ಬೈಯ್ಯುವುದು ಇತ್ಯಾದಿಯಾಗಿ ಹಿಂಸೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಗಂಗಾಧರ ಕುಡಿದು ಬಂದು ವೆಂಕಟಮ್ಮನ ಹಳ್ಳಿಯ ಆತನ ಮನೆಯಲ್ಲಿ ಚಾಪೆಯ ಮೇಲೆ ಮಲಗಿದ್ದಾಗ ಮುತ್ಯಾಲಮ್ಮ ತನ್ನ ಪತಿ ಗಂಗಾಧರ ಮಲಗಿದ್ದ ಚಾಪೆಯ ಮೇಲೆ ಮತ್ತು ಕೈ ಕಾಲುಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರಿಂದ ಗಂಗಾಧರ್ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಫಲಕಾರಿಯಾಗದೆ 2020 ಜನವರಿ 20 ರಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದ, ಮುತ್ಯಾಲಮ್ಮ ತನ್ನ ಗಂಡನಾದ ಗಂಗಾಧರನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವುದು ತನಿಖೆಯಿಂದ ದೃಢಪಟ್ಟ ಹಿನ್ನೆಲೆಯಲ್ಲಿ ತನಿಖಾಧಿಕಾರಿ ಸಿಪಿಐ ಜಿ.ಟಿ.ಶ್ರೀಶೈಲ ಮೂರ್ತಿ.ಜಿ.ಟಿ. ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು, ಅಭಿಯೋಜನೆಯ ಪರ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿ ಮುತ್ಯಾಲಮ್ಮ ಅವರನ್ನು ದೋಷಿ ಎಂದು ಪರಿಗಣಿಸಿ ತೀರ್ಪು ನೀಡಿದ್ದಾರೆ, ಸರ್ಕಾರದ ಪರವಾಗಿ ಅಭಿಯೋಜಕ ಬಿ.ಎಂ.ನಿರಂಜನಮೂರ್ತಿ ವಾದ ಮಂಡಿಸಿದ್ದರು.

Get real time updates directly on you device, subscribe now.

Comments are closed.

error: Content is protected !!