ನಿಟ್ಟೂರು: ವಿದ್ಯಾರ್ಥಿಗಳಿಗೆ ಸಂವಿಧಾನ, ಮತದಾನ, ಚುನಾವಣೆಯ ಪ್ರಕ್ರಿಯೆಗಳು ಹೇಗೆಲ್ಲಾ ನಡೆಯುತ್ತವೆ ಎಂಬುದರ ಬಗ್ಗೆ ಶಾಲಾ ಸಂಸತ್ತು ಚುನಾವಣೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಚುನಾವಣೆಯ ಬಗ್ಗೆ ಮಾಹಿತಿ ನೀಡುವ ಮೂಲಕ ಶಾಲಾ ಸಂಸತ್ ಚುನಾವಣೆ ಮಾಡಲಾಯಿತು ಎಂದು ಗ್ರೀನ್ ವುಡ್ ಇಂಟರ್ ನ್ಯಾಷನಲ್ ಶಾಲೆಯ ಕಾರ್ಯದರ್ಶಿ ನವ್ಯ ಚಂದ್ರಶೇಖರ್ ಬಾಬು ತಿಳಿಸಿದರು.
ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಬೆಣಚಿಗೆರೆ ಗೇಟ್ ನ ಗ್ರೀನ್ ವುಡ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಶಾಲಾ ಸಂಸತ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ, 18 ವರ್ಷ ತುಂಬಿದ ಮೇಲೆ ಪ್ರತಿಯೊಬ್ಬರೂ ಕೂಡ ಮತದಾನದ ಹಕ್ಕು ಪಡೆಯುವುದು ಕರ್ತವ್ಯವಾಗಿದೆ, ಇದರ ಮೂಲಕ ನಮ್ಮ ದೇಶದ ಆಡಳಿತದ ವ್ಯವಸ್ಥೆಯ ಬಗ್ಗೆ ಜನರಿಗೆ ಪರಿಚಯವಾಗುತ್ತದೆ, ಅದೇ ರೀತಿಯಲ್ಲಿ ಶಾಲೆಯಲ್ಲಿ ಶಾಲಾ ಸಂಸತ್ತು ಚುನಾವಣೆ ಮಾಡುವುದರಿಂದ ಶಾಲೆಯ ಆಡಳಿತದ ವ್ಯವಸ್ಥೆ, ಶಾಲೆಯ ಪರಿಸರ ಸೇರಿದಂತೆ ವಿದ್ಯಾರ್ಥಿಗಳಿಗೆ ಬೇಕಾದ ಸೌಲಭ್ಯ ಒದಗಿಸಿಕೊಡುವುದಕ್ಕೂ ಕೂಡ ಶಾಲಾ ಸಂಸತ್ ನೆರವಾಗುವುದು, ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳೇ ಇಲ್ಲಿ ಮತದಾರರು, ವಿದ್ಯಾರ್ಥಿಗಳೇ ಇಲ್ಲಿ ಜನಪ್ರತಿನಿಧಿ ಗಳಾಗುತ್ತಾರೆ, ಬಹಳ ವಿಶೇಷವಾಗಿ ಶಾಲಾ ಸಂಸತ್ ನಲ್ಲಿ ಪ್ರಧಾನಮಂತ್ರಿ, ಶಿಕ್ಷಣಮಂತ್ರಿ, ಪರಿಸರ ಮಂತ್ರಿ ಸೇರಿದಂತೆ ವಿವಿಧ ಹುದ್ದೆ ಮಾಡಿ ಮತದಾನ ಮಾಡುವ ಮೂಲಕ ಅವರನ್ನು ಆಯ್ಕೆ ಮಾಡಲಾಯಿತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಶಿವಪ್ರಸಾದ್, ಶಾಲೆಯ ಶಿಕ್ಷಕ ವರ್ಗ ವಿದ್ಯಾರ್ಥಿಗಳು ಶಾಲಾ ಸಂಸತ್ ಚುನಾವಣೆಯಲ್ಲಿ ಭಾಗವಹಿಸಿದ್ದರು.
Comments are closed.