ಕೊರಟಗೆರೆ: ಗ್ರಾಮೀಣ ರೈತ ಪ್ರಾರಂಭ ಮಾಡಿರುವ ಕೋಳಿ ಪಾರಂನಿಂದ ನೊಣಗಳ ಹಾವಳಿ ಹೆಚ್ಚಾಗಿ ಆರೋಗ್ಯದ ಸಮಸ್ಯೆ ಸೃಷ್ಟಿ ಆಗಲಿದೆ ಎಂದು ತಹಶೀಲ್ದಾರ್ ಗೆ ಸ್ಥಳೀಯರಿಂದ ದೂರು ಬಂದ ಹಿನ್ನಲೆಯಲ್ಲಿ ಕೊರಟಗೆರೆ ಕಂದಾಯ, ಪಶು, ಆರೋಗ್ಯ ಮತ್ತು ಗ್ರಾಪಂಯ ನೇತೃತ್ವದ ಅಧಿಕಾರಿಗಳ ತಂಡ ಗೇದ್ಮೆನಹಳ್ಳಿ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಜಂಟಿಯಾಗಿ ಪರಿಶೀಲನೆ ನಡೆಸಿದರು.
ತಾಲೂಕಿನ ಕೋಳಾಲ ಹೋಬಳಿ ಚಿನ್ನಹಳ್ಳಿ ಗ್ರಾಪಂ ವ್ಯಾಪ್ತಿಯ ಗೇದ್ಮೆನಹಳ್ಳಿ ಗ್ರಾಮದ ರೈತ ಶಿವರಾಜು ಎಂಬಾತನ ಕೋಳಿ ಫಾರಂಗೆ ತಹಶೀಲ್ದಾರ್ ಮಂಜುನಾಥ.ಕೆ, ಪಶು ಇಲಾಖೆಯ ನಿರ್ದೇಶಕ ಡಾ.ನಾಗಭೂಷನ್, ಟಿಹೆಚ್ಓ ವಿಜಯಕುಮಾರ್ ಮತ್ತು ಚಿನ್ನಹಳ್ಳಿ ಗ್ರಾಪಂಯ ಪಿಡಿಓ ಶ್ರೀಧರ್ ಭೇಟಿ ನೀಡಿ ನಂತರ ರೈತರ ಮನೆಗಳಿಗೆ ತೆರಳಿ ಮಾಹಿತಿ ಪಡೆದರು.
ಕೋಳಿಫಾರಂ ವಿರುದ್ಧ ದೂರು ನೀಡಿದ್ದ ಶಬ್ಬೀರ್ ಪಾಷ ಎಂಬಾತನ ಮನೆಗೆ ಭೇಟಿ ನೀಡಿ ನೊಣಗಳ ಬಗ್ಗೆ ಕುಟುಂಬಸ್ಥರಿಂದ ಮಾಹಿತಿ ಪಡೆದು ನಂತರ ಅಕ್ಕಪಕ್ಕದ ರೈತರಿಂದಲೂ ತಹಶೀಲ್ದಾರ್ ಮಾಹಿತಿ ಪಡೆದರು, ನಂತರ ಗೇದ್ಮೆನಹಳ್ಳಿ ಗ್ರಾಮಕ್ಕೆ ತೆರಳಿ ಗ್ರಾಮಸ್ಥರ ಜೊತೆ ಸಮಾಲೋಚನೆ ನಡೆಸಿ ಕೋಳಿ ಫಾರಂನ ಪರ ಮತ್ತು ವಿರೋಧದ ಬಗ್ಗೆ ಚರ್ಚಿಸಿ ಸಮೀಕ್ಷೆ ನಡೆಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದರು.
ಗೇದ್ಮೆನಹಳ್ಳಿ ರೈತ ಶಿವರಾಜು ಮಾತನಾಡಿ, ನನ್ನ 1 ಎಕರೆ ಜಮೀನಿನಲ್ಲಿ 4 ಸೀಮೆ ಹಸು ಮತ್ತು 4 ಸಾವಿರ ಕೋಳಿ ಸಾಕಾಣಿಕೆ ಮಾಡಿದ್ದೇನೆ, ಗೆದ್ಮೆನಹಳ್ಳಿ ಗ್ರಾಮದಿಂದ ನನ್ನ ಕೋಳಿ ಫಾರಂ ಅರ್ಧ ಕಿ.ಮೀ ದೂರವಿದೆ, ಶಬ್ಬೀರ್ ಸರ್ವೇ ಜಮೀನಿನಲ್ಲಿ ಮನೆ ಕಟ್ಟಿಕೊಂಡು ನನಗೇ ವಿನಾಕಾರಣ ತೊಂದರೇ ಕಿರುಕುಳ ನೀಡ್ತಿದ್ದಾರೆ, ರೈತ ಮುಖಂಡ ಎಂದು ಹೇಳಿಕೊಂಡು ರೈತನ ಮೇಲೆಯೇ ದಬ್ಬಾಳಿಕೆ ನಡೆಸೋದು ಎಷ್ಟು ಸರಿ ಎಂದು ನೋವು ವ್ಯಕ್ತಪಡಿಸಿದರು.
ಗೆದ್ಮೆನಹಳ್ಳಿ ರೈತಮುಖಂಡ ಶಬ್ಬಿರ್ ಮಾತನಾಡಿ, ಕೋಳಿ ಫಾರಂನಲ್ಲಿ ಕೋಳಿಮರಿ ಇದ್ದಾಗ ವಾಸನೆ ಹೆಚ್ಚಾಗಿ ನೊಣಗಳ ಕಾಟ ಇರುತ್ತೆ, ಕೋಳಿ ಇಲ್ಲದೇ ಇರುವಾಗ ಅಧಿಕಾರಿಗಳು ಬಂದರೇ ಪ್ರಯೋಜನಾ ಏನು, ವಾಸ್ತವತೆಯ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು, ಇಲ್ಲವಾದ್ರೇ ನಾನು ಅಡಿಕೆ ತೋಟ ತೆಗೆದು 50 ಸಾವಿರ ಕೋಳಿ ಮರಿ ಸಾಕಾಣಿಕೆ ಮಾಡ್ತೀನಿ, ಆಗ ಗ್ರಾಮಸ್ಥರು ಮತ್ತು ಅಧಿಕಾರಿಗಳು ಪ್ರಶ್ನೆ ಮಾಡಬಾದ್ರು ಎಂದು ಆಕ್ರೋಶ ಹೊರ ಹಾಕಿದರು.
Comments are closed.