ತುಮಕೂರು: ಪತ್ರಿಕೆ, ಮಾಧ್ಯಮಗಳಲ್ಲಿ ಹಿಂದಿನ ಘನತೆ ಶಿಸ್ತು ಮೂಡಬೇಕಿದ್ದು, ಜನಪರ ವರದಿಗಳು ಹೆಚ್ಚಬೇಕಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಭಿಪ್ರಾಯಟ್ಟರು.
ನಗರದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಘಟಕದ ವತಿಯಿಂದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ಧ ಜಿಲ್ಲೆಯ ಸುದ್ದಿ ಮನೆಯಲ್ಲಿ ಪತ್ರಕರ್ತರಾಗಿ ನಿವೃತ್ತರಾದ ಹಿರಿಯ ಪತ್ರಕರ್ತರ ಸನ್ಮಾನ ಸಮಾರಂಭ ಹಾಗೂ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, 80ರ ದಶಕದಿಂದಲೂ ಪತ್ರಿಕೆ ಓದುವ ಪರಿಪಾಟ ಬೆಳೆಸಿಕೊಂಡಿದ್ದೇನೆ, ಅಂದು ಪ್ರಕಟವಾಗುತ್ತಿದ್ದ ವರದಿಗಳು ಸರ್ಕಾರವನ್ನೇ ಉರುಳಿಸುವ ಮಟ್ಟಿಗೆ ಪ್ರಚಾರ, ಗಂಭೀರತೆಯಿಂದ ಕೂಡಿರುತ್ತಿದ್ದವು, ಪ್ರಸ್ತುತ ಈ ಗುಣಮಟ್ಟ ಕಡಿಮೆಯಾಗುತ್ತಿರುವುದು ಕಂಡು ಬಂದಿದೆ, ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮಗಳ ಈ ಸ್ಥಿತ್ಯಂತರದ ಕಾಲಘಟ್ಟದಲ್ಲಿ ಮುದ್ರಣ ಮಾಧ್ಯಮಕ್ಕೆ ಎಷ್ಟು ವರ್ಷ ಅಸ್ಮಿತೆಯೆಂಬ ಜಿಜ್ಞಾಸೆಯೂ ನಡೆಯುತ್ತಿದೆ, ಪತ್ರಕರ್ತರಷ್ಟೇ ವಿತರಕರು ಪತ್ರಿಕೆಗೆ ಜೀವಾಳವಾಗಿದ್ದು, ಪ್ರಜಾಪ್ರಭುತ್ವದ ನಾಲ್ಕನೇ ಅಂಗ, ಕಾವಲು ನಾಯಿಗಳೆಂದು ಕರೆಸಿಕೊಳ್ಳುವ ಪತ್ರಿಕೆಗಳು ವೃತ್ತಿ ಧರ್ಮದುನುಸಾರ ಕಾರ್ಯ ನಿರ್ವಹಿಸುವ ಅಗತ್ಯತೆ ಹೆಚ್ಚಿದ್ದು, ಸ್ವಯಂ ನಿಯಂತ್ರಣ ರೇಖೆ ಅಳವಡಿಸಿಕೊಳ್ಳಬೇಕಿದೆ, ಪತ್ರಿಕಾರಂಗದ ಅನೇಕ ಹಿರಿಯರು ಈ ಆದರ್ಶಗಳನ್ನು ಯುವ ಪೀಳಿಗೆಗೆ ಬಿಟ್ಟು ಹೋಗಿದ್ದಾರೆಂದು ಹೇಳಿ ಎಲ್ಲಾ ಪತ್ರಕರ್ತ ಮಿತ್ರರಿಗೂ ಪತ್ರಿಕಾ ದಿನಾಚರಣೆಯ ಶುಭಕೋರಿದರು.
ಪತ್ರಿಕೆಗಳಿಗೆ ಇನ್ನೂ 50 ವರ್ಷ ಭವಿಷ್ಯವಿದೆ
ವಿಧಾನಪರಿಷತ್ ಆಗ್ನೇಯ ಪದವೀಧರರ ಕ್ಷೇತ್ರದ ಶಾಸಕ ಚಿದಾನಂದ ಎಂ ಗೌಡ ಹಿರಿಯ ಪತ್ರಕರ್ತರನ್ನು ಸನ್ಮಾನಿಸಿ ಮಾತನಾಡಿ ಎಲೆಕ್ಟ್ರಾನಿಕ್ ಮಾಧ್ಯಮ, ಯೂ ಟ್ಯೂಬ್ ವೆಬ್ ಸೈಟ್ ಗಳಲ್ಲಿ ಕ್ಷಣಾರ್ಧದಲ್ಲಿ ಜಗತ್ತಿನ ವಿದ್ಯಮಾನಗಳನ್ನು ಅರಿತರು, ಮರುದಿನ ದಿನಪತ್ರಿಕೆಯಲ್ಲಿ ಪತ್ರಿಕೆ ಓದಿದಾಗಲಷ್ಟೇ ಮನಸ್ಸಿಗೆ ಸಮಾಧಾನ, ಹಾಗಾಗಿ ಇನ್ನೂ 50 ವರ್ಷ ಕಾಲ ಮುದ್ರಣ ಮಾಧ್ಯಮಕ್ಕೆ ಭವಿಷ್ಯವಿದೆ, 4ನೇ ಅಂಗವೆನಿಸಿದ ಪತ್ರಿಕಾರಂಗ ಆದರ್ಶ, ಮೌಲ್ಯಯುತವಾಗಿ ಇರಬೇಕೆಂದು ಸಮಾಜ ಬಯಸುತ್ತದೆ, ಜೀವದ ಹಂಗು ತೊರೆದು ಹಗಲು ರಾತ್ರಿಯೆನ್ನದೆ ಕಾರ್ಯನಿರ್ವಹಿಸುವ ಪತ್ರಕರ್ತರಿಗೂ ಸಾಮಾಜಿಕ ಸುರಕ್ಷೆ, ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳುವ ಅವಕಾಶವನ್ನು ಸರ್ಕಾರಗಳು ಕಲ್ಪಿಸಬೇಕಿದೆ, ಈ ದಿಸೆಯಲ್ಲಿ ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನೆ ಕೇಳಿದ್ದು, ಸರ್ಕಾರ ಈಡೇರಿಸುವ ಲಿಖಿತ ಭರವಸೆ ಕೊಟ್ಟಿರುವುದಾಗಿ ತಿಳಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ ಚಿ.ನಿ.ಪುರುಷೋತ್ತಮ್ ಪ್ರಾಸ್ತಾವಿಕವಾಗಿ ಮಾತನಾಡಿ ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಹೊರಬಂದ ದಿನವಾದ ಜು.1 ಅನ್ನು ಸಾಂಕೇತಿಕವಾಗಿಸಿಕೊಂಡು ಪತ್ರಿಕಾ ದಿನಾಚರಣೆಯನ್ನು ಪ್ರತೀ ವರ್ಷ ಆಚರಿಸುತ್ತಾ ಬರಲಾಗಿದೆ, ಈ ಬಾರಿ ಪತ್ರಿಕಾ ದಿನಾಚರಣೆಯಲ್ಲಿ ಸುದ್ದಿ ಮನೆಯಲ್ಲಿ ಕೆಲಸ ಮಾಡಿ ನಿವೃತ್ತರಾದ ಹಿರಿಯರಿಗೆ ಗೌರವಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗಿದೆ, ಇಂದಿನ ವರದಿಗಾರಿಕೆ ಬೆದರಿಸುವ ವೃತ್ತಿಯಾಗಿ ಬದಲಾಗುತ್ತಿದ್ದು, ಬೆದರಿಸುವ ಪತ್ರಿಕೋದ್ಯಮ ಮಾಡದೆ ತಪ್ಪನ್ನು ನೇರವಾಗಿ ಸಾರ್ವಜನಿಕರ ಮುಂದಿಡುವ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಬೇಕಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಟಿ.ಇ ರಘುರಾಮ್, ಹಿರಿಯ ರಂಗಕರ್ಮಿ ಡಾ.ಲಕ್ಷಣದಾಸ್, ತುಮಕೂರು ರೋಟರಿ ಕ್ಲಬ್ ಅಧ್ಯಕ್ಷರಾದ ರಾಜೇಶ್ವರಿ ರುದ್ರಪ್ಪ, ಸಂಘದ ಉಪಾಧ್ಯಕ್ಷರಾದ ಎಲ್ ಚಿಕ್ಕಿರಪ್ಪ ಶಾ.ನಾ.ಪ್ರಸನ್ನಮೂರ್ತಿ, ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಸಿದ್ದಲಿಂಗಸ್ವಾಮಿ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಡಿ.ಎಂ.ಸತೀಶ್, ರಾಷ್ಟ್ರೀಯ ಮಂಡಳಿ ಸದಸ್ಯರಾದ ಅನು ಶಾಂತರಾಜ್, ಟಿ.ಎನ್.ಮಧುಕರ್ ಹಾಗೂ ಪದಾಧಿಕಾರಿಗಲು ಇದ್ದರು.
Comments are closed.