ಕೊರಟಗೆರೆ: ರಾಜ್ಯ ಸರಕಾರದ 5 ಗ್ಯಾರಂಟಿ ಯೋಜನೆ ಚುನಾವಣೆಗೆ ಮಾತ್ರ ಸಿಮೀತವಲ್ಲ, ಬಡ ಜನರಿಗೆ ಕಾಂಗ್ರೆಸ್ ಪಕ್ಷ ಕೊಟ್ಟ ಮಾತನ್ನೂ ಎಂದಿಗೂ ತಪ್ಪೋದಿಲ್ಲ, ರಾಜ್ಯದ ಅಭಿವೃದ್ಧಿಯ ಜೊತೆಯಲ್ಲೇ 5 ವರ್ಷವು ಗ್ಯಾರಂಟಿ ಯೋಜನೆ ಇರುತ್ತೇ, ಗ್ಯಾರಂಟಿ ಯೋಜನೆ ನಿಲ್ಲುತ್ತೇ ಅನ್ನೋದು ಕೇವಲ ವಿರೋಧ ಪಕ್ಷದ ನಾಯಕರ ಮಾತು ಅಷ್ಟೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಕೊರಟಗೆರೆ ತಾಲೂಕಿನ ಸಂಕೇನಹಳ್ಳಿ (ಐ.ಕೆ.ಕಾಲೋನಿ), ಬೈರೇನಹಳ್ಳಿ (ತುಂಬಾಡಿ) ಗ್ರಾಮದಲ್ಲಿ ನಿರ್ಮಿಸಿರುವ 66/11 ಕೆವಿ ಉಪ ಸ್ಥಾವರ ಘಟಕಗಳ ಉದ್ಘಾಟನೆ ಸಮಾರಂಭದಲ್ಲಿ ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರಕಾರ ರಾಜ್ಯಕ್ಕೆ ಅನುದಾನ ಕೊಡ್ಲಿಲ್ಲ, ಆದ್ರು ನಾವು ಅಪ್ಪರ್ ಭದ್ರಾ ಯೋಜನೆಗೆ ಚಾಲನೆ ನೀಡಿದ್ವಿ, ಸಂಪರ್ಕ ಸೇತುವೆಗಾಗಿ ನನ್ನ ಕ್ಷೇತ್ರದಲ್ಲಿ 300 ಜನ ಅಂಗನವಾಡಿ ಕಾರ್ಯಕರ್ತೆ ಮತ್ತು ಮೇಲ್ವಿಚಾರಕರಿಗೆ ಸರಕಾರದಿಂದ ಉಚಿತ ಮೊಬೈಲ್ ವಿತರಿಸಲಾಗಿದೆ, ಪಾವಗಡದಲ್ಲಿ ಮತ್ತೇ 10 ಸಾವಿರ ಎಕರೆಯಲ್ಲಿ ಸೋಲಾರ್ ಪಾರ್ಕ್ ಮಾಡ್ತೀವಿ, ಕೊರಟಗೆರೆ ಕ್ಷೇತ್ರದ 2 ದಶಕಗಳ ರೈತರ ವಿದ್ಯುತ್ ಉಪಸ್ಥಾವರದ ಕನಸು ನನಸಾಗಿದೆ ಎಂದರು.
ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಸಚಿವ ಸಂಪುಟದಲ್ಲಿ ಗೃಹ ಸಚಿವ ಹೆಸರು ಹೇಳಿದ್ರೇ ಸಾಕು ಕೆಲಸ ಆಗುತ್ತೇ, ಡಾ.ಜಿ.ಪರಮೇಶ್ವರ ಹೇಳಿದ ಮಾತನ್ನು ನಮ್ಮ ಸರಕಾರದ ಯಾವ ಸಚಿವರು ತೆಗೆಯುವ ಮಾತೇ ಇಲ್ಲ, ತುಮಕೂರು ಜಿಲ್ಲೆ ಮತ್ತು ಕೊರಟಗೆರೆ ಕ್ಷೇತ್ರಕ್ಕೆ ಏನೇ ಕೇಳಿದ್ರು ನಾನು ಕೋಡೊದಿಕ್ಕೆ ಸಿದ್ಧ, ಪಾವಗಡ ಮತ್ತು ಮಧುಗಿರಿಯಲ್ಲಿ ಸೋಲಾರ್ ವಿದ್ಯುತ್ ಘಟಕಕ್ಕೆ ಸ್ಥಳ ಗುರುತಿಸುವ ಕೆಲಸ ನಡಿತಿದೆ, ಕರ್ನಾಟಕ ಜನತೆ ದೇವರಿಗೆ ಸಮಾನ, ದೇವರ ಆಶೀರ್ವಾದ ಸದಾ ನಮ್ಮ ಮೇಲೆ ಇರುತ್ತೇ ಎಂದು ಹೇಳಿದರು.
ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ 2023ರಲ್ಲಿ ಕೇವಲ 58 ಸಾವಿರ ಭಕ್ತರು ಹಾಸನಾಂಬೆ ದರ್ಶನ ಮಾಡಿ 2 ಕೋಟಿ 20 ಲಕ್ಷ ಹುಂಡಿಹಣ ಬರ್ತಿತ್ತು, ಆದರೇ ಶಕ್ತಿ ಯೋಜನೆಯಿಂದ 2024ರಲ್ಲಿ 14 ಲಕ್ಷ ಭಕ್ತರ ದರ್ಶನದಿಂದ 9 ಕೋಟಿ 75 ಲಕ್ಷ ಹುಂಡಿ ಹಣ ಬಂದಿದೆ, ನಾನು 2004ರಲ್ಲಿ ಕೊರಟಗೆರೆ ಶಾಸಕನಿದ್ದಾಗ ಬೀರದೆನಹಳ್ಳಿ ಬಳಿ ವಿದ್ಯುತ್ ಸ್ಥಾವರ ಮಾಡಲು ಪ್ರಯತ್ನ ಪಟ್ಟಿದ್ದೇ, 2 ದಶಕಗಳ ರೈತರ ಕನಸನ್ನು ಡಾ.ಜಿ.ಪರಮೇಶ್ವರ ನನಸು ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಬಗುಪ್ತ, ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಪಾಂಡೆ, ನಿರ್ದೇಶಕ ಜಯ ಕುಮಾರ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಓ ಪ್ರಭು.ಜಿ, ಎಸ್ಪಿ ಅಶೋಕ್.ಕೆ.ವಿ, ಮುಖ್ಯ ಇಂಜಿನಿಯರ್ ಉಮೇಶ್, ಕೊರಟಗೆರೆ ತಹಶೀಲ್ದಾರ್ ಮಂಜುನಾಥ.ಕೆ, ಬೆಸ್ಕಾಂ ಎಇಇ ಪ್ರಸನ್ನಕುಮಾರ್, ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆಶಂಕರ್, ಅಶ್ವತ್ಥ ನಾರಾಯಣ್, ಯುವ ಅಧ್ಯಕ್ಷ ಬೈರೇಶ್ ಇತರರು ಇದ್ದರು.
Comments are closed.