ನಗದು ಬೆಳ್ಳಿ, ಬಂಗಾರ ದೋಚಿದ ಖದೀಮರು

24

Get real time updates directly on you device, subscribe now.


ಪಾವಗಡ: ಮದುವೆ ಕಾರ್ಯಕ್ಕೆ ತೆರಳಿದ್ದ ಮನೆಯಲ್ಲಿ ಹಾಡುಹಗಲೇ ಕಳ್ಳರು ಕೈಚಳ ತೋರಿಸಿ ಅಪಾರ ಬೆಳ್ಳಿ, ಬಂಗಾರ ಹಾಗೂ ನಗದು ದೋಚಿರುವ ಘಟನೆ ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯ ಕುವೆಂಪು ನಗರದಲ್ಲಿ ಮಂಗಳವಾರ ನಡೆದಿದೆ.
ಪಟ್ಟಣದ ಕುವೆಂಪು ನಗರದ ಎರಡನೇ ವಾರ್ಡ್ನ ವಾಸಿ ನಿವೃತ್ತ ಶಿಕ್ಷಕ ಹುಲಿರಾಜು ಮನೆಯಲ್ಲಿ ಮಂಗಳವಾರ ಬೆಳಗಿನ ಜಾವ ಕಳ್ಳತನ ನಡೆದಿರುವ ವರದಿಯಾಗಿದ್ದು, ಮನೆ ಮಾಲಿಕ ತನ್ನ ಕುಟುಂಬದೊಂದಿಗೆ ಮದುವೆ ಕಾರ್ಯಕ್ಕೆ ಬೇರೆ ಊರಿಗೆ ತೆರಳಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ.
ಘಟನೆಯಲ್ಲಿ ಮೂವತ್ತು ಸಾವಿರ ನಗದು ಒಂದು ಕೆಜಿ ಬೆಳ್ಳಿ, ಐವತ್ತು ಗ್ರಾಂ ಬಂಗಾದ ವಡವೆ ಕಳ್ಳತನವಾಗಿವೆ ಎಂದು ತಿಳಿದು ಬಂದಿದೆ, ಘಟನೆ ತಿಳಿದು ಪಾವಗಡ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೂರು ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!