ಗುಬ್ಬಿ: ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯನ್ನು ಪೊಲೀಸರ ರಕ್ಷಣೆಯಲ್ಲಿ ಮುಂದಾಗಿ ಕೆಲಸ ಮಾಡಲು ಮುಂದಾಗಿ ರೈತರನ್ನ ಹೆದರಿಸಲು ಪೊಲೀಸರು ಲಾಟಿ ಚಾರ್ಜ್ ಮಾಡಲು ಮುಂದಾದ ಪಕ್ಷದಲ್ಲಿ 500 ಟ್ರಾಕ್ಟರ್ ಲೋಡು ತೆಂಗಿನ ಎಡೆಮಟ್ಟೆ ರೈತರಿಂದ ತರಿಸಿ ಅದರಲ್ಲೇ ಓಡಿಸುತ್ತೇನೆ ಎಂದು ತುರುವೇಕೆರೆ ಕ್ಷೇತ್ರದ ಶಾಸಕ ಎಂ.ಟಿ.ಕೃಷ್ಣಪ್ಪ ಕಿಡಿ ಕಾರಿದರು.
ಗುಬ್ಬಿ ಪಟ್ಟಣದಲ್ಲಿ ಮಾಧ್ಯಮದ ಜೊತೆಯಲ್ಲಿ ಮಾತನಾಡಿದ ಅವರು ಉಪ ಮುಖ್ಯಮಂತ್ರಿಗಳ ಸಭೆಯಲ್ಲಿ ಟೆಕ್ನಿಕಲ್ ಕಮಿಟಿ ತೀರ್ಮಾನವಾಗದ ಹೊರತು ಯಾವುದೇ ರೀತಿಯ ಕೆಲಸ ಮಾಡುವುದಿಲ್ಲ ಎಂದು ತಿಳಿಸಲಾಗಿತ್ತು, ಕಮಿಟಿಯಲ್ಲಿ ಏನು ಉತ್ತರ ಬರುತ್ತದೆ ಎಂಬುದರ ನಂತರ ನಾವು ಮಾತನಾಡುತ್ತೇವೆ ಎಂಬುದನ್ನು ಸಭೆಗೆ ತಿಳಿಸಲಾಗಿತ್ತು, ಆದರೆ ಏಕಾಏಕಿಯಾಗಿ ಅಧಿಕಾರಿಯೊಬ್ಬರು ಕೆಲಸ ಮಾಡಲು ಪೊಲೀಸರ ರಕ್ಷಣೆ ಕೇಳಿರುವ ಮಾಹಿತಿ ನೋಡಿದರೆ ಸರಕಾರವನ್ನು ಯಾವ ರೀತಿ ನಡೆಸುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ, ಉಪ ಮುಖ್ಯಮಂತ್ರಿಗಳ ಸಭೆಯಲ್ಲಿ ಯಾವ ರೀತಿ ತೀರ್ಮಾನ ಆಗಿದೆಯೋ ಅದರಂತೆ ಸರಕಾರ ನಡೆದುಕೊಂಡರೆ ಬಹಳ ಉತ್ತಮ, ಇಲ್ಲದೆ ಹೋದರೆ ರೈತರು ಎಡಮಟ್ಟೆ ತೆಗೆದುಕೊಂಡು ನಿಲ್ಲುವುದಂತು ಸತ್ಯ ಎಂದರು.
ಕುಣಿಗಲ್ ಭಾಗಕ್ಕೆ ಮೂರು ಟಿಎಂಸಿ ನೀರು ಕೊಡಲು ನಮಗೆ ಯಾವುದೇ ತಕರಾರು ಇಲ್ಲ, ಆದರೆ ಮುಂದಕ್ಕೆ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ, ನಾವು ಹಾದಿ ಬೀದಿಯಲ್ಲಿಯೇ ಪ್ರತಿಭಟನೆ ಮಾಡುತ್ತೇವೆ, ನಮಗಾಗುತ್ತಿರುವ ಅನ್ಯಾಯ ಖಂಡಿಸುತ್ತೇವೆ, ಯಾವುದೇ ಕಾರಣಕ್ಕೂ ತುಮಕೂರು ಜಿಲ್ಲೆಯಿಂದ ರಾಮನಗರ ಭಾಗಕ್ಕೆ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ, ಇದಕ್ಕೂ ಮೀರಿ ಸರಕಾರ ಮತ್ತು ಅಧಿಕಾರಿಗಳು ಲಿಂಕ್ ಕೆನಾಲ್ ಕಾಮಗಾರಿ ಮಾಡಲು ಮುಂದಾದರೆ ಮಾತ್ರ ನಾಲೆಯ ಮೇಲೆ 500 ಟ್ರ್ಯಾಕ್ಟರ್ ಎಡೆಮಟ್ಟೆ ತರಿಸಿ ಪೊಲೀಸರ ಲಾಠಿ ಗೆಲ್ಲುವುದಾ, ರೈತರ ಎಡ ಮಟ್ಟೆ ಗೆಲ್ಲುವುದು ನೋಡಿಯೆ ತೀರುತ್ತೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಕುಮಾರ್ ಇನ್ನಿತರರು ಹಾಜರಿದ್ದರು.
Comments are closed.