ಪಾವಗಡ: ತಾಲ್ಲೂಕು ತಿರುಮಣಿ ಸರಹದ್ದು ವೆಂಕಟಮ್ಮನಹಳ್ಳಿ ಗ್ರಾಮ ಗಡಿಭಾಗವಾಗಿದ್ದು ಈ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಭದ್ರತಾ ದೃಷ್ಟಿಯಿಂದ ಇದ್ದಂತಹ 09ನೇ ಕೆ ಎಸ್ ಆರ್ ಪಿ ಪೊಲೀಸ್ ಕ್ಯಾಂಪಿನ ಮೇಲೆ ನಕ್ಸಲ್ ತಂಡ ದಿ:10-02-2005 ರಂದು ರಾತ್ರಿ ದಾಳಿ ಮಾಡಿ 07 ಜನ ಪೊಲೀಸರು ಸೇರಿದಂತೆ ಒಬ್ಬ ಸಾರ್ವಜನಿಕ ವ್ಯಕ್ತಿ ಹತ್ಯೆ ಮಾಡಿ ಪೊಲೀಸ್ ಇಲಾಖೆಗೆ ಸೇರಿದ ಬಂದೂಕುಗಳು ಮತ್ತು ಮದ್ದು ಗುಂಡುಗಳನ್ನು ದೋಚಿಕೊಂಡು ಹೋಗಿದ್ದರು.
ಈ ಬಗ್ಗೆ ತಿರುಮಣಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೊ.ನಂ:07/2005 ರಲ್ಲಿನ ಆರೋಪಿ ಹಾಗೂ ಮಾಜಿ ನಕ್ಸಲ್ ಚಂದ್ರ ಮುತ್ಯಾಲು.ಬಿ ಬಂದೆಲ ಮುತ್ಯಾಲು ಬಿನ್ ಬಂದೆಲ ಬಾಯನ್ನ (36), ಈತ ಪರಿಶಿಷ್ಟ ಜಾತಿಗೆ ಸೇರಿದ್ದು, ಬಿಬಿಎಂಪಿ ಲಾರಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ, ಕೇಶವಾಪುರಂ ಗ್ರಾಮ, ಗಾರಲದಿನ್ನೆ ಮಂಡಲ, ಸಿಂಗಲಮಲ್ಲ ತಾಲ್ಲೂಕು, ಅನಂತಪುರ ಜಿಲ್ಲೆ, ಆಂಧ್ರಪ್ರದೇಶದವನು, ಈತ ಇಲ್ಲಿಗೆ ಸುಮಾರು 19 ವರ್ಷಗಳಿಂದಲೂ ಪೊಲೀಸರಿಗೆ ತಲೆಮರೆಸಿಕೊಂಡು ಬೆಂಗಳೂರಿನಲ್ಲಿ ವಾಸವಾಗಿದ್ದ, ಈತನ ವಿರುದ್ಧ ಪಾವಗಡದ ಘನ ಜೆಎಂಎಫ್ ಸಿ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು.
ಈ ಆರೋಪಿಯನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್.ಕೆ.ವಿ. ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮರಿಯಪ್ಪ, ಅಬ್ದುಲ್ ಖಾದರ್ ಅವರು ಮಾರ್ಗದರ್ಶನ ಮತ್ತು ಮಧುಗಿರಿ ಪೊಲೀಸ್ ಉಪಾಧೀಕ್ಷಕ ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ, ತುಮಕೂರು ಆಂತರಿಕ ಭದ್ರತಾ ವಿಭಾಗದ ಸಹಯೋಗದೊಂದಿಗೆ ದಿ:02-07-2024 ರಂದು ಖಚಿತ ಬಾತ್ಮೀ ಮೇರೆಗೆ ಪಾವಗಡ ಗ್ರಾಮಾಂತರ ವೃತ್ತದ ಸಿಪಿಐ ಗಿರೀಶ್, ಎಎಸ್ ಐ ಗೋವಿಂದರಾಜು ಮತ್ತು ಸಿಬ್ಬಂದಿ ಧರ್ಮಪಾಲನಾಯ್ ಮತ್ತು ಪುಂಡಲೀಕ ಲಮಾಣಿ ಆರೋಪಿ ಪತ್ತೆ ಮಾಡಿ ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆ.
Comments are closed.