ಮಧುಗಿರಿ: ಹಲವಾರು ಸಮಸ್ಯೆಗಳಿಂದಾಗಿ ಗ್ರಾಮಗಳಲ್ಲಿನ ಜನರ ಜಮೀನುಗಳ ಪೌತಿ ಖಾತೆಗಳು ಆಗದೆ ಇರುತ್ತಿರುವುದು ಬೇಸರದ ಸಂಗತಿ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ತಾಲೂಕಿನ ಮಿಡಿಗೇಶಿ ಹೋಬಳಿಯ ರಂಟವಾಳಲು ಗ್ರಾಮದಲ್ಲಿ ಬುಧವಾರ ತಾಲೂಕು ಪಂಚಾಯತಿ ವತಿಯಿಂದ ಆಯೋಜಿಸಿದ್ದ ಜನಸ್ಪಂದನಾ ಹಾಗೂ ಖಾತಾ ಆಂದೋಲನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮಗಳಲ್ಲಿ ಪೌತಿ, ಖಾತೆ ಮಾಡಲು ಬಹಳಷ್ಟು ವಿಳಂಬ ವಾಗುತ್ತಿದೆ, ಸುಮಾರು ಎರಡು ತಲೆಮಾರುಗಳ ಹಕ್ಕುಗಳನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಅರ್ಜಿಗಳನ್ನು ಹಿಡಿದು ಕಚೇರಿಗೆ ಹೋಗಲು ಸಹ ಜನರು ಉದಾಸೀನ ಮನೋಭಾವ ತೋರುತ್ತಿದ್ದಾರೆ, ರೈತರು ತಮ್ಮ ಜಮೀನುಗಳ ದಾಖಲೆಗಳನ್ನು ಆದಷ್ಟೂ ಸರಿಪಡಿಸಿಕೊಳ್ಳಿ, ಮುಂದಿನ ದಿನಗಳಲ್ಲಿ ಅವುಗಳ ಅವಶ್ಯಕತೆ ಹೆಚ್ಚಿದೆ, ಜಮೀನುಗಳ ದಾಖಲೆಗಳು ಸರಿಯಿಲ್ಲದ ಕಾರಣ ಪ್ರಧಾನಿ ಮಂತ್ರಿಯವರು ನೀಡುವ 6 ಸಾವಿರ ಹಾಗೂ ಬೆಳೆ ವಿಮೆ ಪಡೆದು ಕೊಳ್ಳಲು ಸಹ ಆಗುತ್ತಿಲ್ಲ, ಆದ್ದರಿಂದ ತಮ್ಮ ಖಾತೆ, ಬ್ಯಾಂಕು ಪುಸ್ತಕಗಳನ್ನು ಸರಿಪಡಿಸಿಕೊಂಡರೆ ನೇರವಾಗಿ ಸರ್ಕಾರದ ಸವಲತ್ತು ದೊರೆಯುತ್ತದೆ ಹಾಗೂ ನೇರವಾಗಿ ನಿಮ್ಮ ಬ್ಯಾಂಕ್ ನ ಖಾತೆಗೆ ಹಣ ಜಮಾ ಆಗುತ್ತದೆ ಎಂದರು.
ಅಧಿಕಾರಿಗಳು ವಿನಾ ಕಾರಣ ಜನರನ್ನು ಅಲೆದಾಡಿಸದೆ ಅವರ ಮನೆಯ ಬಾಗಿಲಿಗೆ ನೀವುಗಳೇ ತೆರಳಿ ಅವರ ಕೆಲಸ ಕಾರ್ಯ ಮಾಡಕೊಡಬೇಕೆಂದು ಸೂಚಿಸಿದರು.
ಜನಸ್ಪಂದನ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸಿಗ್ಬತ್ ವುಲ್ಲಾ, ತಾಪಂ ಇಓ ಲಕ್ಷ್ಮಣ್, ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ಡಿಡಿಪಿಐ ಮಂಜುನಾಥ್, ಬಿಇಓ ಹನುಮಂತರಾಯಪ್ಪ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶಿವಣ್ಣ, ಜಿಪಂ ಮಾಜಿ ಸದಸ್ಯ ಚೌಡಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ಕೆಎಂಎಫ್ ನಿರ್ದೇಶಕ ಮೈದನ ಹಳ್ಳಿ ಕಾಂತರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಸಿಡಿಪಿಓ ಕಮಲ, ಎತ್ತಿನಹೊಳೆ ಯೋಜನೆಯ ಮುರಳಿ, ಅಬಕಾರಿ ಉಪ ವಿಭಾಗದ ಅಧಿಕಾರಿ ಚಂದ್ರಪ್ಪ, ಅಬಕಾರಿ ನಿರೀಕ್ಷಕ ರಾಮಮೂರ್ತಿ, ಅರಣ್ಯ ಇಲಾಖೆಯ ಸುರೇಶ್, ಶೈಲಜಾ, ಕೆ ಆರ್ ಐ ಡಿ ಎಲ್ ಸಹಾಯಕ ಅಭಿಯಂತರೆ ಸಿಂಧು, ತೋಟಗಾರಿಕೆ ಇಲಾಖೆಯ ಸ್ವಾಮಿ, ತಾಪಂ ಯೋಜನಾಧಿಕಾರಿ ಮಧುಸೂಧನ್, ಜಿಲ್ಲಾ ಪಂಚಾಯಿತಿ ದಯಾನಂದ್, ಮಂಜುನಾಥ್, ಲೋಕೋಪಯೋಗಿ ಇಲಾಖೆಯ ಇಇ ಸುರೇಶ ರೆಡ್ಡಿ, ಎಇಇ ರಾಜಗೋಪಾಲ್ ಇತರರಿದ್ದರು.
Comments are closed.