ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವು

27

Get real time updates directly on you device, subscribe now.


ಹುಳಿಯಾರು: ಬೊಲೆರೋ ಪಿಕ್ ಅಪ್ ವಾಹನ ಮತ್ತು ಕ್ರೇಟಾ ಕಾರು ಪರಸ್ಪರ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ ಘಟನೆ ಹುಳಿಯಾರು ಹೋಬಳಿ ಕೆರೆಸೂರಗೊಂಡನಹಳ್ಳಿ ಬಳಿ ಸಂಭವಿಸಿದೆ.
ಯಳನಡು ಮಂಜುನಾಥ್ (42) ಹಾಗೂ ಓಬಳಾಪುರದ ಎಂ.ಉಮೇಶ್ (40) ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳಾಗಿದ್ದಾರೆ, ಮತ್ತೋರ್ವ ಗಂಗಾಧರ್ ಗೆ ತೀವ್ರವಾದ ಗಾಯಗಳಾಗಿದ್ದು ಚಿಕಿತ್ಸೆಗೆ ಕಳಿಸಲಾಗಿದೆ.
ಹುಳಿಯಾರಿನಿಂದ ತಡರಾತ್ರಿ 11 ಗಂಟೆಯ ಸುಮಾರಿಗೆ ತಮ್ಮ ಊರುಗಳಿಗೆ ಕಾರಿನಲ್ಲಿ ತೆರಳುತ್ತಿರುವಾಗ ಮಾರ್ಗ ಮಧ್ಯದ ಕೆರೆಸೂರಗೊಂಡನ ಹಳ್ಳಿ ಬಳಿ ಹೊಸದುರ್ಗ ಕಡೆಯಿಂದ ಅತೀ ವೇಗ ಮತ್ತು ಅಜಾಗರೂಕತೆಯಿಂದ ಬಂದ ಬೊಲೇರೋ ಪಿಕ್ ಅಪ್ ವಾಹನ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ, ಹುಳಿಯಾರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!