ಹಂಪನಾ ದಂಪತಿ ಸಾಹಿತ್ಯ ಲೋಕಕ್ಕೆ ಆದರ್ಶಪ್ರಾಯ

16

Get real time updates directly on you device, subscribe now.


ತುಮಕೂರು: ಸಾಹಿತ್ಯ ಲೋಕದಲ್ಲಿಯುವ ಸಾಹಿತಿಗಳಿಗೆ ಆದರ್ಶ ಸಾಹಿತಿಗಳಾಗಿದ್ದವರು ಹಂಪನಾ ದಂಪತಿ ಎಂದು ವಿಶ್ವವಿದ್ಯಾಲಯ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ ಹೇಳಿದರು.
ವಿಶ್ವ ವಿದ್ಯಾನಿಲಯ ಕಲಾ ಕಾಲೇಜಿನಕನ್ನಡ ವಿಭಾಗದ ವತಿಯಿಂದ ಆಯೋಜಿಸಿದ್ದ ದಿವಂಗತ ಸಾಹಿತಿ ಕಮಲಾ ಹಂಪನಾ ನುಡಿ ನಮನ ಮತ್ತು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿ, ಹಂಪನಾ ದಂಪತಿ ಒಡನಾಟ ಹಾಗೂ ಸಂಬಂಧಗಳೇ ಹೇಳುತ್ತವೆ ಅವರು ಸಮಾಜಕ್ಕೆ ಆದರ್ಶ ದಂಪತಿ ಎಂದರು.

ವಿಶ್ವದ 60 ಕ್ಕೂ ಹೆಚ್ಚು ದೇಶಗಳಿಗೆ ಒಟ್ಟಿಗೆ ಪ್ರವಾಸ ಮಾಡಿ ಸಾಹಿತ್ಯ ಪ್ರಚಾರ ಮಾಡಿದರು, ವಚನ, ಕಾದಂಬರಿ, ಪ್ರಬಂಧ ಮೊದಲಾದ ಮಹಿಳಾ ಗ್ರಂಥ ಸಂಪಾದನೆಗೆ ದಂಪತಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ, ಸಾಹಿತ್ಯ ಕೃತಿಗಳನ್ನೇ ತಮ್ಮ ಜೀವನವಾಗಿಸಿಕೊಂಡ ಅವರ ಬಹುತೇಕ ಕೃತಿಗಳೆಲ್ಲ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕವಾಗಿದ್ದು, ಅವುಗಳನ್ನು ಓದುವ ಹವ್ಯಾಸ ಮೈಗೂಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿಶ್ವವಿದ್ಯಾಲಯ ಕಲಾ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಪ್ರೊ.ಕೆ.ರಾಮಚಂದ್ರಪ್ಪ ಮಾತನಾಡಿ, ಹಂಪನಾ ದಂಪತಿ ಪ್ರೇಮ ಪ್ರಸಂಗ, ಅವರ ಜೀವನ ಶೈಲಿ, ಸಾಹಿತ್ಯ ಕಾರ್ಯ ನೆನಪಿಸಿಕೊಂಡರು.
ಹಂಪನಾ ದಂಪತಿ ಹಲವು ವೇದಿಕೆಗಳಲ್ಲಿ ತಮ್ಮ ಜೀವನ ವೃತ್ತಾಂಶಗಳನ್ನು ಸ್ವತಃ ಹೇಳಿಕೊಳ್ಳುವ ಮೂಲಕ ಇತರೆ ಸಾಹಿತಿಗಳಿಗೆ ಮಾದರಿಯಾಗಿದ್ದರು ಎಂದರು.

ಸರಳ ಜೀವನ ನಡೆಸಿದ್ದ ದಂಪತಿ ಯಾವುದೇ ಪ್ರಶಸ್ತಿ, ಅಧಿಕಾರ, ಹುದ್ದೆಗೆ ಆಸೆ ಪಟ್ಟವರಲ್ಲ, ಇರುವಂತೆಯೇ ಜೀವಿಸಿದ ಮಹಾನ್ ಚೇತನಗಳು, ಹಂಪನಾ ದಂಪತಿ ಎನ್ನುವುದನ್ನು ಬಿಟ್ಟರೆ ಅವರನ್ನು ಪತಿ- ಪತ್ನಿಯಾಗಿ ವಿಂಗಡಿಸಿ ನೋಡಲು ಸಾಧ್ಯವಿಲ್ಲ, ಎಲ್ಲಾ ಕೆಲಸಗಳಿಗೂ ಜೊತೆಯಾಗಿ ದುಡಿದವರು ಎಂದರು.
ವಿವಿ ಕಲಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಸ್.ಶಿವಣ್ಣ ಬೆಳವಾಡಿ, ಸಹಾಯಕ ಪ್ರಾಧ್ಯಾಪಕಿ ಡಾ.ರೇಣುಕಾ.ಎಚ್.ಆರ್, ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಗಿರಿಜಾ.ಕೆ.ಎಸ್. ಇದ್ದರು.

Get real time updates directly on you device, subscribe now.

Comments are closed.

error: Content is protected !!