ಕುಣಿಗಲ್: ಸಾರಿಗೆ ಸಂಸ್ಥೆಯ ನೌಕರರೊಂದಿಗೆ ಸರ್ಕಾರ ಕಠಿಣವಾಗಿ ವರ್ತನೆ ಮಾಡುವುದರಲ್ಲಿ ಅರ್ಥ ಇಲ್ಲ, ಅವರೊಂದಿಗೆ ಮಾತನಾಡಿ ಅವರ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಚರ್ಚೆಗೆ ಮುಂದಾಗಬೇಕೆಂದು ಶಾಸಕ ಡಾ.ರಂಗನಾಥ ತಿಳಿಸಿದರು.
ಪಟ್ಟಣದ 18ನೇ ವಾರ್ಡ್ ಹೌಸಿಂಗ್ ಬೋರ್ಡ್ನ ಕಾಂಗ್ರೆಸ್ ಮುಖಂಡ ಪಾಪಣ್ಣ ಅವರ ಮನೆಯಲ್ಲಿ ಇದೇ ವಾರ್ಡ್ನಲ್ಲಿರುವ ಸಾರಿಗೆ ಸಂಸ್ಥೆ ನೌಕರರ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿ, ರಾಜ್ಯಸರ್ಕಾರ ಸಾರಿಗೆ ಸಂಸ್ಥೆ ನೌಕರರ ವಿಷಯದಲ್ಲಿ ಕಠಿಣವಾಗಿ ವರ್ತನೆ ಮಾಡುವುದು ಸರಿಯಲ್ಲ, ಮುಷ್ಕರ ನೌಕರರ ವರ್ಗಾವಣೆ, ಅಮಾನತು, ವಜಾ ಕಾರ್ಯಗಳು ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿದೆ, ನೌಕರರ ಕಷ್ಟ ಸುಖಕ್ಕೆ ಸ್ಪಂದಿಸದ ಸರ್ಕಾರ ಅವರನ್ನು ದಮನಿಸುವ ಕಾಯದಲ್ಲಿ ನಿರತರಾಗಿರುವುದು ಖಂಡನೀಯ, ರಾಜ್ಯ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಖಂಡಿಸುತ್ತದೆ, ಸರ್ಕಾರ ಸಂಬಳ ನೀಡದೆ ನೌಕರರ ಶೋಷಣೆ ಮಾಡುವುದು ಅಮಾನವೀಯ, ಮತ್ತಷ್ಟು ತೊಂದರೆ ನೀಡಿದಲ್ಲಿ ಸರ್ಕಾರದ ಕ್ರಮದ ವಿರುದ್ಧ ತಾವು ದ್ವನಿ ಎತ್ತುವುದಾಗಿ ತಿಳಿಸಿದ ಅವರು, ಸರ್ಕಾರ ಪ್ರತಿಷ್ಠೆ ಬಿಟ್ಟು ನೌಕರರ ಸಮಸ್ಯೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿಬೇಕೆಂದರು. ಮುಖಂಡ ಪಾಪಣ್ಣ ಸೇರಿದಂತೆ ಇತರರು ಇದ್ದರು.
ಸಾರಿಗೆ ನೌಕರರೊಂದಿಗೆ ಸರ್ಕಾರ ಮಾತನಾಡಲಿ
Get real time updates directly on you device, subscribe now.
Prev Post
Comments are closed.