ಶಿರಾ: ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವ ನಿರ್ವಹಣೆ ಮಾಡುವ ಮತ್ತು ಜನ ಸಾಮಾನ್ಯರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಶಿರಾದ ಕೆಲ ಯುವಕರು ಮುಂದಾಗಿದ್ದು, ಪ್ರಪ್ರಥಮವಾಗಿ ಇಲ್ಲಿನ ಜಾಜಮ್ಮನಕಟ್ಟೆ ಒಳಾಂಗಣ ಸ್ವಚ್ಛಗೊಳಿಸುವ ಕೆಲಸ ನಡೆಸಲಾಗಿದೆ.
ಸಾರ್ವಜನಿಕರು ಮತ್ತು ನಗರಸಭೆ ಸಹಯೋಗದಲ್ಲಿ ಆರಂಭಗೊಂಡಿರುವ ಅಭಿಯಾನಕ್ಕೆ ಪರೋಪಕಾರಂ ಶಿರಾ ಹೆಸರಿಡಲು ಪೌರಾಯುಕ್ತ ರುದ್ರೇಶ್ ಸಲಹೆ ನೀಡಿದ್ದು, ಇದರಲ್ಲಿ ಮುಖ್ಯವಾಗಿ ಸಾರ್ವಜನಿಕರು ಪಾಲ್ಗೊಳ್ಳುವ ಮೂಲಕ ತಮ್ಮ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಬಗ್ಗೆ ಜಾಗೃತಿ ಬೆಳೆಸಿಕೊಳ್ಳಲು ಸಹಾಯವಾಗಲಿದೆ, ಇಲ್ಲಿ ಯಾರೂ ನಾಯಕರಲ್ಲ, ಸಮಾನ ಮನಸ್ಕರು ಸೇರಿ ವಾಟ್ಸಪ್ ಗ್ರೂಪ್ ಮಾಡಿಕೊಳ್ಳುವ ಮೂಲಕ ಪರಸ್ಪರ ಸಲಹೆ, ಸಹಕಾರ ಪಡೆದುಕೊಳ್ಳಬೇಕು.
ಪ್ರತಿ ಭಾನುವಾರ ಬೆಳಗ್ಗೆ 7 ಗಂಟೆಯಿಂದ 9 ಗಂಟೆ ವರೆಗೆ ನಗರದ ಯಾವುದಾದರೊಂದು ಸಾರ್ವಜನಿಕ ಸ್ಥಳ, ದೇವಸ್ಥಾನ, ಪಾರ್ಕ್, ಕೆರೆ- ಕಟ್ಟೆ, ಆಸ್ಪತ್ರೆ ಮೊದಲಾಗಿ ಸ್ಥಳವೊಂದನ್ನು ನಿಗದಿಪಡಿಸಿಕೊಂಡು ಶ್ರಮದಾನ ಮಾಡಬೇಕು, ನಗರಸಭೆ ಇದಕ್ಕೆ ಸಂಪೂರ್ಣ ಸಹಕಾರ ನೀಡಲಿದ್ದು, ಒಮ್ಮೆ ಸ್ವಚ್ಛಗೊಳಿಸಿಕೊಟ್ಟ ನಂತರ ಅದನ್ನು ನಿರ್ವಹಿಸುವ ಹೊಣೆಗಾರಿಕೆಯನ್ನು ಸ್ಥಳೀಯರು ವಹಿಸಿಕೊಳ್ಳಬೇಕು, ಇದರಿಂದ ನಗರ ಸ್ವಚ್ಛವಾಗಿ ಕಾಣಲಿದೆ ಎಂದಿದ್ದಾರೆ. ನಗರಸಭೆ ಸದಸ್ಯ ರಾಧಾಕೃಷ್ಣ, ಮಹೇಶ್, ಕುಮಾರ್, ಶ್ರೀಧರ್, ರಮೇಶ್ ಮೊದಲಾದವರು ಇದ್ದರು.
Comments are closed.