ನಗರದಲ್ಲಿ ಸಮಸ್ಯೆ ನಿವಾರಣೆಗೆ ಮುಂದಾಗಿ

ಅಧಿಕಾರಿಗಳಿಗೆ ಶಾಸಕ ಬಿ.ಜ್ಯೋತಿಗಣೇಶ್ ಸೂಚನೆ

40

Get real time updates directly on you device, subscribe now.


ತುಮಕೂರು: ನಗರದ 30ನೇ ವಾರ್ಡಿನ ವಿಜಯನಗರ ಬಡಾವಣೆಯ ಕೆಲವು ಮನೆಗಳ ನೀರಿನ ಸಂಪ್ಗಳಲ್ಲಿ ಒಳ ಚರಂಡಿ ನೀರು ಹರಿದುಬಂದು ಅವಾಂತರ ಸೃಷ್ಟಿಯಾಗಿತ್ತು, ಸೋಮವಾರ ಬೆಳಗ್ಗೆ ನಗರ ಪಾಲಿಕೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನಿಡಿದರು.
ವಿಜಯನಗರದ ಸುಮಾರು 20 ಮನೆಗಳ ಸಂಪ್ಗಳಿಗೆ ಒಂದೆರಡು ದಿನಗಳಿಂದ ಒಳಚರಂಡಿಯ ಕಲುಷಿತ ನೀರು ಬಂದು ತುಂಬಿಕೊಂಡಿತ್ತು, ಇಂತಹ ನೀರು ಬಳಕೆಯಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದ ಆತಂಕಕ್ಕೀಡಾದ ನಿವಾಸಿಗಳು ಶಾಸಕರಿಗೆ ವಿಚಾರ ತಿಳಿಸಿ ಸಮಸ್ಯೆ ನಿವಾರಿಸಲು ಕೋರಿದರು.

ಸಮಸ್ಯೆ ಇರುವ ಮನೆಗಳಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಪಾಲಿಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು, ಮನೆಯವರೊಂದಿಗೆ ಸಮಾಲೋಚನೆ ನಡೆಸಿದರು, ಮಳೆ ನೀರು ಚರಂಡಿಯಿಂದ ಸಂಪ್ ಗೆ ನೀರು ಹರಿದು ಬರಬಹುದೇ ಎಂದೂ ಅಧಿಕಾರಿಗಳು ಪರಿಶೀಲಿಸಿದರು, ಈ ಸಮಸ್ಯೆಗೆ ಕಾರಣವೇನು, ಈ ಭಾಗದಲ್ಲಿ ಒಳಚರಂಡಿ ಪೈಪ್ ಲೈನ್ ಮಾರ್ಗ ಒಡೆದುಹೋಗಿ ಕೊಳಚೆ ಸೋರಿಕೆಯಾಗಿ ಸಂಪ್ ಗಳಿಗೆ ಹರಿದು ಬಂದಿದೆಯೆ ಎಂದು ಪತ್ತೆ ಮಾಡಿ ಸಮಸ್ಯೆ ನಿವಾರಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಒಳಚರಂಡಿ ಮಾರ್ಗ ಸುಸ್ಥಿತಿಯಲ್ಲಿದ್ದೂ ಕೊಳಚೆ ನೀರು ಸಂಪ್ಗಳಿಗೆ ಹೇಗೆ ಬರುತ್ತಿದೆ ಎಂದು ತಿಳಿದು ಸಂಪ್ಗಳು ಶಿಥಿಲಗೊಂಡಿದ್ದರೆ ದುರಸ್ತಿ ಗೊಳಿಸಿಕೊಳ್ಳಲು ಮನೆಯವರಿಗೆ ತಿಳುಸುವಂತೆ ಹೇಳಿದರು.

ಈಗ ಎಲ್ಲೆಡೆ ಡೆಂ, ಮಲೇರಿಯಾ ಭೀತಿ ಎದುರಾಗಿದೆ, ನಾಗರಿಕರು ತಮ್ಮ ಮನೆಯ ಸಂಪ್ಗಳನ್ನು ಸ್ವಚ್ಛವಾಗಿಟ್ಟುಕೊಂಡು ನೀರು ಬಳಿಸಿ ಹಾಗೂ ಮನೆ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು, ನೀರು ಸಂಗ್ರಹವಾಗಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಚ್ಚರ ವಹಿಸಬೇಕು ಎಂದು ಶಾಸಕ ಜ್ಯೋತಿಗಣೇಶ್ ನಾಗರಿಕರಿಗೆ ಮನವಿ ಮಾಡಿದರು.
ನಗರ ಪಾಲಿಕೆ ಮಾಜಿ ಸದಸ್ಯ ವಿಷ್ಣುವರ್ಧನ್, ಪಾಲಿಕೆ ಕಾರ್ಯಪಾಲಕ ಇಂಜಿನಿಯರ್ ಸಂದೀಪ್ ಹಾಗೂ ಸಂಬಂಧಿಸಿದ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!