ಕೊರಟಗೆರೆ: ಅನಧಿಕೃತವಾಗಿ ನಡೆಸುತ್ತಿದ್ದ ಪುಣ್ಯಕೋಟಿ ಫ್ಯಾಕ್ಟರಿಯಲ್ಲಿ ತಡರಾತ್ರಿ 9 ಗಂಟೆಯ ಸುಮಾರಿಗೆ ಬಾಯ್ಲರ್ ಸ್ಪೋಟಗೊಂಡು ಓರ್ವ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿದ್ದು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸುಮಾರು 15 ವರ್ಷಗಳಿಂದಲೂ ಯಾವುದೇ ಇಲಾಖೆಯ ಅನುಮತಿಯಿಲ್ಲದೆ ಮಾಲೀಕ ಸದಾಶಿವಯ್ಯ ಎಂಬುವವರು ತನ್ನ ಮನೆಯಲ್ಲಿಯೇ ಅನಧಿಕೃತವಾಗಿ ಫ್ಯಾಕ್ಟರಿ ನಡೆಸುತ್ತಿದ್ದಾರೆ, 6 ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಈ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು ಇವರಿಗೆ ಯಾವುದೇ ಜೀವನಕ್ಕೆ ಬೇಕಾದ ಭದ್ರತಾ ಸೌಲಭ್ಯ ಒದಗಿಸಿಲ್ಲ ಎಂಬುದು ಸ್ಥಳೀಯರಿಂದ ತಿಳಿದು ಬಂದಿದೆ, ಫ್ಯಾಕ್ಟರಿಯಲ್ಲಿ ಪ್ರತಿನಿತ್ಯ ಮಜ್ಜಿಗೆ, ಪೇಡ, ಜಾಮೂನ್ ಸೇರಿದಂತೆ ಹಾಲು ಶುದ್ಧೀಕರಣ ಮಾಡಲಾಗುತ್ತಿತ್ತು, ಆದರೆ ಸೋಮವಾರ ರಾತ್ರಿ ಸಮಯದಲ್ಲಿ ಬಾಯ್ಲರ್ ಸ್ಪೋಟಗೊಂಡಿದ್ದು ತಾಲೂಕಿನ ಮಲ್ಲೇಶಪುರದ ಯತೀಶ್ (23) ಎಂಬಾತನಿಗೆ ಗಂಭೀರ ಗಾಯಾಗಳಾಗಿವೆ.
ಬಾಯ್ಲರ್ ಸ್ಪೋಟ ಶಬ್ಧ ಸುಮಾರು 2 ಕಿ. ಮೀ. ವರೆಗೂ ಕೇಳಿಸಿದ್ದು, ಸ್ಥಳೀಯ ಅಂಗಡಿ ಮಾಲೀಕರು ಬೆಚ್ಚಿಬಿದ್ದಿದ್ದಾರೆ, ಹಿಂದೆಯೂ ಕೂಡ ಇದೇ ರೀತಿ ಘಟನೆ ನಡೆದಿತ್ತು, ಮಾಲೀಕ ಸದಾಶಿವಯ್ಯ ಎಚ್ಚೆತ್ತುಕೊಳ್ಳದೆ ನಿರ್ಲಕ್ಷ್ಯ ತೋರಿದ ಕಾರಣ ಈ ಅನಾಹುತ ಸಂಭವಿಸಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಪುಣ್ಯಕೋಟಿ ಪ್ಯಾಕ್ಟರಿಗೆ ಕಾರ್ಮಿಕ ನೀರಿಕ್ಷಕ ಮತ್ತು ಮಧುಗಿರಿ ವಲಯ ಅಧಿಕಾರಿ ಭೇಟಿ ನೀಡಿ ನೊಟೀಸ್ ಜಾರಿ ಮಾಡಿದ್ದಾರೆ, ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ಅನಿಲ್ ಮತ್ತು ಪಿಎಸೈ ಚೇತನ್ ಸ್ಥಳ ಪರಿಶೀಲನೆ ನಡೆಸಿದ್ದಾರೆ, ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
Comments are closed.