ಡೆಂಗ್ಯೂ ವಿಷಯದಲ್ಲಿ ರಾಜಕಾರಣ ಬೇಡ

31

Get real time updates directly on you device, subscribe now.


ಕುಣಿಗಲ್: ಡೆಂಗ್ಯೂ ವಿಷಯದಲ್ಲಿ ರಾಜಕಾರಣ ಬೇಡ, ರಾಜ್ಯಸೇರಿದಂತೆ ತಾಲೂಕಿನಲ್ಲಿ ಡೆಂಗ್ಯೂ ಕಾಯಿಲೆ ಉಲ್ಬಣವಾಗಿಲ್ಲ, ಅಲ್ಲದೆ ವೈದ್ಯಕೀಯ ತುರ್ತುಸ್ಥಿತಿ ಘೊಷಿಸುವ ಅಗತ್ಯ ಇಲ್ಲ ಎಂದು ಶಾಸಕ ಡಾ.ರಂಗನಾಥ ಹೇಳಿದರು.
ಮಂಗಳವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಆರೋಗ್ಯ ಇಲಾಖೆಯ ಪ್ರಗತಿ ವರದಿ ಪರಿಶೀಲಿಸಿ, ಡೆಂಗ್ಯೂ ಬಗ್ಗೆ ಭಯ ಬೇಡ, ಅರಿವು ಇರಲಿ, ಈ ನಿಟ್ಟಿನಲ್ಲಿ ತಾಲೂಕಿನ ಪುರಸಭೆ ಸೇರಿದಂತೆ ಎಲ್ಲಾ ಗ್ರಾಪಂ ಪಿಡಿಒಗಳು ರೋಗದ ಬಗ್ಗೆ ಅಗತ್ಯ ಅರಿವು ಹೊಂದಿ ಜನರಲ್ಲೂ ಅರಿವು ಮೂಡಿಸಬೇಕು, ಎಲ್ಲೆಡೆ ಸ್ವಚ್ಛತೆ ನಿರ್ವಹಣೆಗೆ ಆದ್ಯತೆ ನೀಡಬೇಕು, ಜನರಿಂದ ತಮಗೆ ದೂರು ಬಂದಲ್ಲಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಾಲೂಕು ಆರೋಗ್ಯಾಧಿಕಾರಿ, ಖಾಸಗಿ ಅಸ್ಪತ್ರೆಯವರೊಂದಿಗೆ ಸಂವಹನ ನಡೆಸಿ ಜ್ವರ ಪ್ರಕರಣಗಳ ಬಗ್ಗೆ ಮಾಹಿತಿ ಪಡೆಯುವ ಜೊತೆಯಲ್ಲಿ ಡೆಂಗ್ಯೂ ಪೀಡಿತರ ಬಗ್ಗೆ ಮಾಹಿತಿ ಪಡೆದು ಅವರ ಮೇಲೆ ನಿಗಾ ವಹಿಸಬೇಕು, ಪುರಸಭೆ ಅಧಿಕಾರಿಗಳು ಸ್ವಚ್ಛತೆ ಕಾಪಾಡುವ ಜೊತೆಯಲ್ಲಿ ಸೊಳ್ಳೆಯ ಮೊಟ್ಟೆಗಳ ನಿರ್ಮೂಲನೆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಆಶ್ರಯ ಯೋಜನೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲಿಸಿ ನನಗೆ ಮತ ನೀಡಿರಲಿ, ಇಲ್ಲದಿರಲಿ, ಗುಡಿಸಲಲ್ಲಿ ವಾಸಿಸುವ, ವಸತಿ ರಹಿತ ಅರ್ಹ ಬಡ ಕುಟುಂಬಗಳಿಗೆ ನಿವೇಶನ ನೀಡುವ ನಿಟ್ಟಿನಲ್ಲಿ ಮಾಜಿ ಸಂಸದರ ಆಶಯದಂತೆ ಹತ್ತು ಸಾವಿರ ನಿವೇಶನ ನೀಡಲು ಯೋಜನೆ ಹಾಕಲಾಗಿದೆ ಎಂದರು.
ತಹಶೀಲ್ದಾರ್ ವಿಶ್ವನಾಥ್ ಮಾತನಾಡಿ, 300ಎಕರೆ ಪ್ರದೇಶದ ಪೈಕಿ 175 ಎಕರೆ ಗುರುತಿಸಲಾಗಿದ್ದು 76 ಎಕರೆ ಪ್ರದೇಶ ಹಸ್ತಾಂತರಿಸಿ, ಯೋಜನೆ ಮಾಡಲು ಗ್ರಾಮಾಂತರ ಯೋಜನೆ ಇಲಾಖೆಗೆ ಸಲ್ಲಿಸಲಾಗಿದೆ, ಕೆಲವೆಡೆ ಭೂಮಿ ಗುರುತಿಸುವ ಬಗ್ಗೆ ಗೊಂದಲ ಇದ್ದು ತಾಪಂ, ಕಂದಾಯ, ಸರ್ವೇ ಇಲಾಖೆಗೆ ಜಿಪಿಎಸ್ ಸಮಸ್ಯೆ ಬಗ್ಗೆ ಗೊಂದಲ ಉಂಟಾದಾಗ ಸಭೆಯಲ್ಲಿದ್ದ ತಾಲೂಕು ನೋಡಲ್ ಅಧಿಕಾರಿಯಾದ ಕನಕಪುರ ಉಪವಿಭಾಗಾಧಿಕಾರಿ ವಿಶ್ವನಾಥ್ ಈಬಗ್ಗೆ ಗೊಂದಲ ಬೇಡ, ಸಂವಹನ ಕೊರತೆಯಿಂದ ಈ ರೀತಿ ಆಗಿದ್ದು ಸಭೆ ಸೇರಿ ಬಗೆಹರಿಸಲು ಸೂಚಿಸಿದರು. ಕೆಲವೆಡೆ ಜಮೀನು ಗುರುತಿಸಿದ್ದರೂ ಹಸ್ತಾಂತರ, ಅಭಿವೃದ್ದಿ ಸಮಸ್ಯೆ ಇದ್ದು ಇನ್ನು ಎರಡು ತಿಂಗಳಲ್ಲಿ ಎಲ್ಲಾ ಪಿಡಿಒಗಳು ನಿವೇಶನ ಜಾಗ ಅಭಿವೃದ್ದಿಗೊಳಿಸಿ ಗುರುತಿಸಲು ಸೂಚನೆ ನೀಡಿದರು.

Get real time updates directly on you device, subscribe now.

Comments are closed.

error: Content is protected !!